ದರ್ಶನ್ ಅವರ ಹೊಸ ಚಿತ್ರಕ್ಕೆ ಹೀರೋಯಿನ್ ಫೈನಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೆವಿಲ್ ಚಿತ್ರಕ್ಕೆ ನಾಯಕಿಯ ಆಯ್ಕೆ ಫೈನಲ್ ಆಗಿದೆ. ಈ ಹಿಂದೆಯೂ ಸುದ್ದಿ ಇತ್ತಾದರೂ.. ಅದು ಅಧಿಕೃತ ಸುದ್ದಿಯಾಗಿರಲಿಲ್ಲ. ವಾಮನ ಚಿತ್ರದಲ್ಲಿ ಧನ್ವೀರ್ ಜೊತೆ ನಟಿಸಿದ್ದ ರಚನಾ ರೈ, ದರ್ಶನ್ ಅವರ ಡೆವಿಲ್ ಚಿತ್ರಕ್ಕೆ ನಾಯಕಿಯಾಗಿದ್ಧಾರೆ. ವಾಮನ ಹೊರತುಪಡಿಸಿದ ಕೆಲವು ತುಳು ಚಿತ್ರಗಳಲ್ಲೂ ನಟಿಸಿದ್ಧಾರಂತೆ ರಚನಾ ರೈ.
ರಚನಾ ರೈ. ಕೇವಲ ನಟಿಯಲ್ಲ. ಆಕೆ ಸಖತ್ ಟ್ಯಾಲೆಂಟೆಡ್. ರಾಜ್ಯ ಮಟ್ಟದ ಟೂರ್ನಮೆಂಟುಗಳಲ್ಲಿ ಆಡಿರುವ ಬ್ಯಾಡ್ಮಿಂಟನ್ ಪ್ಲೇಯರ್. ಅಲ್ಲಿಗೆ ಪಿವಿ ಸಿಂಧು, ಸೈನಾ ನೆಹ್ವಾಲ್ ಅವರ ಸಾಲಿಗೆ ಸೇರದಿದ್ದರೂ.. ರಾಜ್ಯ ಮಟ್ಟಕ್ಕೆ ಆಡುವುದೆಂದರೆ ಸುಲಭದ ಮಾತಲ್ಲ. ಇನ್ನು ಮಾಡೆಲ್ ಕೂಡಾ ಹೌದು. ಫ್ಯಾಷನ್ ಶೋಗಳಲ್ಲಿಗೆ ರ್ಯಾಂಪ್ ವಾಕ್ ಮಾಡುವ ರಚನಾ ರೈ, ಡ್ಯಾನ್ಸರ್ ಕೂಡಾ ಹೌದು. ಶಾಸ್ತ್ರೀಯ ನೃತ್ಯ ಹಾಗೂ ಮಾಡರ್ನ್ ನೃತ್ಯಗಳೆರಡೂ ಗೊತ್ತು. ಎಲ್ಲಕ್ಕಿಂತ ಮಿಗಿಲಾಗಿ.. ರಚನಾ ರೈ ಒಳಗೊಬ್ಬ ಬರಹಗಾರ್ತಿಯೂ ಇದ್ಧಾರೆ. ರಚನಾ ರೈ ʻ ಓ ಮೈ ಡಾಗ್ ʼ ಎಂಬ ಪುಸ್ತಕ ಬರೆದಿದ್ದಾರೆ. ಆ ಕೃತಿಗೆ ರೆಸ್ಪಾನ್ಸ್ ಕೂಡಾ ಚೆನ್ನಾಗಿದೆ. ಪುಸ್ತಕ ಬರೆದಿರುವುದು ಇಂಗ್ಲಿಷಿನಲ್ಲಿ.
ರಚನಾ ರೈ ತುಳುವಿನಲ್ಲಿ ನಟಿಸಿದ್ದಾರೆ. ಇವರು ನಟಿಸಿದ್ದ ಸರ್ಕಸ್ ಸಿನಿಮಾ ತುಳು ಇಂಡಸ್ಟ್ರಿಯಲ್ಲಿ ದಾಖಲೆ ಬರೆದಿದೆ. ವಾಮನ ಅಷ್ಟೇ ಅಲ್ಲ, ಹ್ಯಾಪಿ ಬರ್ತ್ ಡೇ ಟು ಮಿ, ಶ್ರೀರಂಗ, ಭುವನಂ ಗಗನಂ, ಅಶೋಕಾ ಬ್ಲೇಡ್ ಚಿತ್ರಗಳಲ್ಲಿ ಕೂಡಾ ನಟಿಸುತ್ತಿದ್ದಾರೆ.
ತಿಂಗಳುಗಳ ಹಿಂದೆ ಅಡಿಷನ್ ಕೊಟ್ಟಿದ್ದೆ. ಕೆಲವೇ ದಿನಗಳ ಹಿಂದೆ ಪ್ರಕಾಶ್ ವೀರ್ ಕನ್ಫರ್ಮೇಷನ್ ಮೆಸೇಜ್ ಕೊಟ್ಟರು. ದರ್ಶನ್ ಅವರಂತಹ ಸ್ಟಾರ್ ಹೀರೋ ಜೊತೆ ನಟಿಸುತ್ತಿರುವುದು ಥ್ರಿಲ್ ಆಗಿದೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಪ್ರಕಾಶ್ ವೀರ್, ಪತ್ನಿ ತಶ್ವಿನಿ ಹಾಗೂ ದರ್ಶನ್ ಸರ್ʻಗೆ ಥ್ಯಾಂಕ್ಸ್ ಎಂದಿದ್ದಾರೆ ರಚನಾ ರೈ.
ಡೆವಿಲ್ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಜೈ ಮಾತಾ ಕಂಬೈನ್ಸ್ ತನ್ನ ಸೋಶಿಯಲ್ ಮೀಡಿಯಾ ಪುಟದಲ್ಲಿ ರಚನಾ ರೈ ಫೋಟೋ ಶೇರ್ ಮಾಡುವ ಮೂಲಕವೆಲ್‌ಕಮ್ ಆನ್ ಬೋರ್ಡ್, ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ. ರಚನಾ ರೈ ಸ್ವಾಗತ ಎಂದು ಬರೆದುಕೊಂಡಿದೆ.
ಡೆವಿಲ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದ್ದು, 2ನೇ ಹಂತದ ಶೂಟಿಂಗ್ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ದರ್ಶನ್ ಅವರಿಗೆ ಅನಿರೀಕ್ಷಿತವಾಗಿ ಗಾಯವಾದ ಹಿನ್ನೆಲೆಯಲ್ಲಿ ಶೂಟಿಂಗ್ ವಿಳಂಬವಾಗಿದೆ. ನವೆಂಬರ್ ೨ರಂದು ಲಾಂಚ್ ಆಗಿದ್ದ ಡೆವಿಲ್ ಚಿತ್ರಕ್ಕೆ ಮಿಲನ ಪ್ರಕಾಶ್ ಡೈರೆಕ್ಟರ್.
ದರ್ಶನ್ ಅವರು ತಾರಕ್ ನಂತರ ಮತ್ತೊಮ್ಮೆ ಪ್ರಕಾಶ್ ಜೊತೆ ಸಿನಿಮಾ ಮಾಡುತ್ತಿದ್ಧಾರೆ. ಈ ಚಿತ್ರಕ್ಕಾಗಿ ತಮ್ಮ ಹೆಸರನ್ನೂ ಬದಲಿಸಿಕೊಂಡಿರುವ ಪ್ರಕಾಶ್, ಪ್ರಕಾಶ್ ವೀರ್ ಆಗಿದ್ಧಾರೆ. ಡೆವಿಲ್ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ನಟಿಸುತ್ತಿರುವುದು ವಿಶೇಷ.



