ಮಿನಾಸನ್ ಕೊನಿಚುವ.. ಜಪಾನಿ ಭಾಷೆಯಲ್ಲಿ ಯಶ್ ಹೇಳಿದ್ದೇನು ಎಂದು ನೋಡಿದರೆ, ನಿಮಗೆಲ್ಲರಿಗೂ ನಮಸ್ಕಾರ. ನಾನು ನಿಮ್ಮ (Yash) ಯಶ್, ಇದನ್ನು (Japanees) ಜಪಾನಿ ಭಾಷೆಯಲ್ಲಿ ಹೇಳಿದ್ರೆ ಹೇಗಿರುತ್ತೆ..? ಮಿನಾಸನ್ ಕೊನಿಚುವ.. ಅಂತಾ ಜಪಾನೀಯರ ಜೊತೆ ಜಪಾನಿ ಭಾಷೆಯಲ್ಲೇ ಮಾತನಾಡಿದ್ದಾರೆ ಯಶ್. ಯಾಕೆ ಅಂದ್ರೆ.. (KGF-Chapter 1& KGF-Chapter 2) ‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ ಚಿತ್ರ ಜಪಾನಿ ಭಾಷೆಗೆ ಡಬ್ ಆಗಿ ಅಲ್ಲಿನ ಥಿಯೇಟರ್ನಲ್ಲಿ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಯಶ್ ಆರಂಭದಲ್ಲಿ ಜಪಾನಿ ಭಾಷೆಯಲ್ಲಿ ಮಾತನಾಡಿದ್ದಾರೆ. ‘ನಮಸ್ತೆ ಜಪಾನ್. ನನ್ನ ‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ ಸಿನಿಮಾ ಜಪಾನ್ನಲ್ಲಿ ರಿಲೀಸ್ ಆಗುತ್ತಿದೆ. ‘ಕೆಜಿಎಫ್’ ಸಿನಿಮಾದಲ್ಲಿ ಸಾಕಷ್ಟು ಮನರಂಜನೆ ಹಾಗೂ ಆ್ಯಕ್ಷನ್ ಇದೆ. ಮ್ಯಾಡ್ನೆಸ್ ಕೂಡ ಇದೆ. ತಪ್ಪದೇ ಸಿನಿಮಾ ನೋಡಿ’ ಎಂದು ಕೋರಿದ್ದಾರೆ.
ಜಪಾನ್ನಲ್ಲಿ ಭಾರತೀಯ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಇದುವರೆಗೆ ಜಪಾನ್‍ನಲ್ಲಿ ರಜನಿಕಾಂತ್ ಚಿತ್ರಗಳು ಸಖತ್ ಸೌಂಡ್ ಮಾಡಿದ್ದವು. ರಜನಿಕಾಂತ್ ಅವರಿಗೆ ಜಪಾನ್‍ನಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳ ವರ್ಗವೇ ಇದೆ. ರಜನಿ ಬಿಟ್ಟರೆ ವಿಜಯ್ ಚಿತ್ರಗಳು ಕೂಡಾ ಅಲ್ಲಿ ಸದ್ದು ಮಾಡಿವೆ. ಕನ್ನಡದ ವಿಷಯಕ್ಕೆ ಬಂದರೆ, ಎಂದಿನಂತೆ ಡಾ.ರಾಜ್ ಅವರಿಗೆ ಅಲ್ಲಿ ಫ್ಯಾನ್ಸ್ ಇದ್ದಾರೆ. ಡಾ.ರಾಜ್ ಬಿಟ್ಟರೆ ಪುನೀತ್ ಹಾಗೂ ಸುದೀಪ್ ಅವರಿಗೆ ಫ್ಯಾನ್ಸ್ ಇದ್ದಾರೆ. ಇತ್ತೀಚೆಗೆ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’(RRR) ಸಿನಿಮಾ ಜಪಾನ್ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಜುಲೈ 14ಕ್ಕೆ ‘ಪಠಾಣ್’ ಸಿನಿಮಾ ಜಪಾನ್ನಲ್ಲಿ ತೆರೆಗೆ ಬರುತ್ತಿದೆ. ಇದೀಗ ಕೆಜಿಎಫ್ ಕೂಡಾ ರಿಲೀಸ್ ಆಗುತ್ತಿದ್ದು, ದೊಡ್ಡ ಮಟ್ಟದ ಹವಾ ಎಬ್ಬಿಸುವ ನಿರೀಕ್ಷೆ ಇದೆ.



