ಒಂದು ಕೋಟಿ ಅಲ್ಲ. ಎರಡು ಕೋಟಿ ಅಲ್ಲ..೧೦ ಕೋಟಿಯೂ ಅಲ್ಲ, ೧೦೦ ಕೋಟಿಯೂ ಅಲ್ಲ.. ೨೦೦ ಕೋಟಿಯೂ ಅಲ್ಲ.. ೩೦೦ ಕೋಟಿಗೂ ಹೆಚ್ಚು. ಇನ್ನೂ ಎಣಿಸಬೇಕಾದ ನೋಟುಗಳ ರಾಶಿ ಇದೆ. ಇದು ಒಬ್ಬ ಕಾಂಗ್ರೆಸ್ ಸಂಸದನ ಮನೆಯಲ್ಲಿ ಸಿಕ್ಕ ನೋಟಿನ ರಾಶಿ ರಾಶಿ. ಅದು ರಾಶಿಯಲ್ಲ, ಬೆಟ್ಟ. ನೋಟುಗಳ ಬೆಟ್ಟ. ಇದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಮನೆಯಲ್ಲಿ ಸಿಕ್ಕಿರುವ ಇನ್ನೂ ಲೆಕ್ಕ ಮುಗಿಸಲು ಸಾಧ್ಯವಾಗದ ನೋಟುಗಳ ಲೆಕ್ಕ. ಈತ ಒಂದಲ್ಲ, ಎರಡು ಬಾರಿ ಕಾಂಗ್ರೆಸ್ʻನಿಂದ ರಾಜ್ಯಸಭೆ ಸದಸ್ಯನಾಗಿದ್ದವನು. ಎರಡು ಬಾರಿ ಲೋಕಸಭೆಯಲ್ಲಿ ಸೋತರೂ, ಕಾಂಗ್ರೆಸ್ ಈತನನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿತ್ತು. ಆತನ ಮನೆಯಲ್ಲೇ ಈಗ 176 ಬ್ಯಾಗ್‌ಗಳಲ್ಲಿ ನೋಟುಗಳು ಸಿಕ್ಕಿರೋದು. ಇದು ದೇಶದಲ್ಲೇ ಅತಿ ದೊಡ್ಡ ನಗದು ಬೇಟೆ ಎನ್ನುವುದೂ ಗೊತ್ತಿರಲಿ.
ಜನ ಹೆಂಗ್ ಕಪ್ಪು ಹಣ ಇಟ್ಕೊಳ್ತಾರೋ.. ಗೊತ್ತೇ ಇಲ್ಲ ಎಂದಿದ್ದ ಧೀರಜ್ ಸಾಹು :
ಇದೇ ಧೀರಜ್ ಸಾಹು ೨೦೨೨ರಲ್ಲಿ ಒಂದು ಟ್ವೀಟ್ ಮಾಡಿದ್ದ.ಅಂದ್ರೆ ಕಳೆದ ವರ್ಷ ಅಷ್ಟೆ. ಜನ ಅದು ಹೇಗೆ ಕಪ್ಪು ಹಣವನ್ನ ತಮ್ಮ ಮನೆಯಲ್ಲಿ ಇಟ್ಕೊಳ್ತಾರೋ.. ಗೊತ್ತೇ ಇಲ್ಲ. ಡಿಮಾನಿಟೈಸೇಷನ್ ಆದರೂ ಕಪ್ಪು ಹಣ ಕಂಟ್ರೋಲಿಗೆ ಬಂದಿಲ್ಲ. ನಿರ್ಮೂಲನೆ ಆಗಿಲ್ಲ ಎನ್ನುವುದು ದುಃಖಕರ ಎಂದು ಟ್ವೀಟ್ ಮಾಡಿದ್ದ. ಈಗ ೨೦೨೩ರ ಕೊನೆ ದಿನಗಳು. ಇಡೀ ದೇಶಕ್ಕೆ ಪ್ರಾಮಾಣಿಕತೆಯ ಪಾಠ ಹೇಳಿದ್ದವನ ಮನೆಯಲ್ಲೇ ೩೦೦ ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ಇನ್ನೂ ಎಣಿಸುವುದು ಬಾಕಿ ಇದೆ.
ಐಟಿ ರೇಡ್ ಇತಿಹಾಸದಲ್ಲೇ ಅತೀ ಹೆಚ್ಚಿನ ನೋಟಿನ ಬೇಟೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಅವರು ಹೇಳಿರುವ ಪ್ರಕಾರ, ಬ್ಯಾಂಕ್ 176 ಬ್ಯಾಗ್‌ಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 140 ಅನ್ನು ಎಣಿಕೆ ಮಾಡಲಾಗಿದೆ. ತೆರಿಗೆ ಅಧಿಕಾರಿಗಳ ಪ್ರಕಾರ, ರಾಜ್ಯಸಭಾ ಸಂಸದ ಧೀರಜ್ ಸಾಹು ಆಸ್ತಿಗಳ ಮೇಲೆ ಮಾಡಿದ ದಾಳಿಯಿಂದ ಸಿಕ್ಕಿರುವ ಹಣದ ಪ್ರಮಾಣ 300 ಕೋಟಿಗೆ ತಲುಪುವ ಸಾಧ್ಯತೆ ಇದೆ. ಇದು ಒಂದೇ ಕಾರ್ಯಾಚರಣೆಯಲ್ಲಿ ಏಜೆನ್ಸಿಯ ಅತಿದೊಡ್ಡ ರೇಡ್. ಸೋಮವಾರದಿಂದ ಸಾಮಾನ್ಯ ಬ್ಯಾಂಕಿಂಗ್ ಸಮಯ ಪ್ರಾರಂಭವಾಗಲಿದ್ದು, ಯಂತ್ರಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕಾಗಿರುವುದರಿಂದ ಭಾನುವಾರದ ಅಂತ್ಯದ ವೇಳೆಗೆ ಎಣಿಕೆಯನ್ನು ಮುಗಿಸಲು ಅಧಿಕಾರಿಗಳು ಪ್ರಯತ್ನ ಮಾಡಿದ್ದರಾದರೂ ಅದು ಸಾಧ್ಯವಾಗಿಲ್ಲ. ಎಣಿಕೆಗೆ ಇನ್ನೂ ಗಮನಾರ್ಹ ಪ್ರಮಾಣದ ನಗದು ಉಳಿದಿರುವ ಕಾರಣ, ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚುವರಿ ನಗದು-ಎಣಿಕೆ ಯಂತ್ರಗಳು ಹಾಗೂ ಇನ್ನಷ್ಟು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.
ಕಾಂಗ್ರೆಸ್ ಎಂಪಿ ಧೀರಜ್ ಸಾಹು ನನಗೆ ಗೊತ್ತೇ ಇಲ್ಲ : ಕಾಂಗ್ರೆಸ್
ಧೀರಜ್ ಸಾಹು ಎರಡು ಬಾರಿ ರಾಜ್ಯಸಭಾ ಸದಸ್ಯ. ಕಾಂಗ್ರೆಸ್ ಶಾಸಕರು ಓಟು ಹಾಕಿದ್ದಕ್ಕೇ ರಾಜ್ಯಸಭೆ ಸದಸ್ಯನಾಗಿರುವ ವ್ಯಕ್ತಿ. ಲೋಕಸಭೆಯಲ್ಲಿ ಎರಡು ಬಾರಿ ಸೋತಿದ್ದರೂ, ಆತನನ್ನು ಎರಡು ಬಾರಿ ರಾಜ್ಯಸಭೆಗೆ ಕಳಿಸಿಕೊಟ್ಟಿರುವ ಕಾಂಗ್ರೆಸ್ಸಿಗೆ ಆತ ಯಾರು ಎನ್ನುವುದೇ ಗೊತ್ತಿಲ್ಲ. ಹಿರಿಯ ನಾಯಕ ಜೈರಾಮ್ ರಮೇಶ್ ತಮ್ಮದೇ ಪಕ್ಷದ ನಾಯಕನನ್ನು ಪ್ರಶ್ನೆ ಮಾಡಿದ್ದಾರೆ. ಧೀರಜ್ ಸಾಹು ಅವರ ಉದ್ಯಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಈ ವಿಚಾರದಲ್ಲಿ ಪಕ್ಷವನ್ನು ಮುಜುಗರದಿಂದ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಉಳಿದವರು ಹಾಗಿಲ್ಲ.
ಸಿದ್ದರಾಮಯ್ಯ ಅವರ ಪ್ರಕಾರವೇ ಧೀರಜ್ ಸಾಹು ಕಾಂಗ್ರೆಸ್ಸಿನವರು ಎಂಬ ಕಾರಣಕ್ಕೆ ದಾಳಿ ಆಗಿದೆ ಎಂಬ ವಿಚಿತ್ರ ಸಮರ್ಥನೆ ಕೊಟ್ಟಿದ್ದಾರೆ.



