ಈ ಕಥೆ ಹೇಳ್ತಿರೋದು ಒಬ್ಬರಲ್ಲ. ಇಬ್ಬರಲ್ಲ. ಆಕ್ಚುವಲಿ ಈಗ ಮೂರು ಕಡೆಗಳಿಂದ ಸುದ್ದಿಗಳು ಬರ್ತಾ ಇವೆ. ಆದರೆ.. ಒಬ್ಬೊಬ್ಬರದ್ದೂ ಒಂದೊಂದು ಕಥೆ. ಡಿಕೆ ಬೆಂಬಲಿಗರು ಹೇಳುವ ಕಥೆ ಕೇಳಿದ್ರೆ.. ಅನ್ನಿಸೋದೇ ಬೇರೆ. ಸಿದ್ದು ಬೆಂಬಲಿಗರ ಕಥೆ ಕೇಳಿದರೆ ಅನ್ನಿಸೋದೇ ಬೇರೆ. ದೆಹಲಿಯ ವರ್ಷನ್ ಇನ್ನೂ ಡಿಫರೆಂಟ್. ಇದು ಹಳೆಯ ವರ್ಷನ್ನಿನ ಕಥೆಗಳಲ್ಲ. ಹೊಸ ವರ್ಷನ್ನಿನ ಬ್ರೇಕ್ ಫಾಸ್ಟ್ ಮೀಟಿಂಗ್ ಆದ ಮೇಲೆ ಉದ್ಭವವಾಗಿರುವ ಕಥೆಗಳು.
ಸಿದ್ದರಾಮಯ್ಯ ಬೆಂಬಲಿಗರ ಪ್ರಕಾರ :
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ರಾಹುಲ್ ಗಾಂಧಿ ಒಪ್ಪುತ್ತಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪರ ವಾಗಿ ನಿಂತಿರುವ ಅಹಿಂದ ವರ್ಗಗಳು ಚೆಪಿಲ್ಲಿಯಾಗುತ್ತವೆ. ಆ ಮೂಲಕ 1983 ಮತ್ತು 1994ರಲ್ಲಾದಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ನೆಲ ಕಚ್ಚುತ್ತದೆ ಎನ್ನುವ ಭಯ ಇದೆ. ದೇಶದಲ್ಲಿ ಕಾಂಗ್ರೆಸ್ ಇರೋದೇ ಕರ್ನಾಟಕದಲ್ಲಿ. ಕಾಂಗ್ರೆಸ್ ಇರುವ ಹಿಮಾಚಲ ಪ್ರದೇಶವಾಗೀ, ತೆಲಂಗಾಣವಾಗಲೀ.. ಪಕ್ಷಕ್ಕೆ ಯಾವ ಉಪಯೋಗವನ್ನೂ ಮಾಡಲ್ಲ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಈಗ ಹೇಗಿದೆಯೋ ಹಾಗೆಯೇ ಕಂಟಿನ್ಯೂ ಆಗಲಿ ಎನ್ನುವುದು ರಾಹುಲ್ ವಾದ. ಅಕಸ್ಮಾತ್ ಸಿದ್ದರಾಮಯ್ಯ ಅವರನ್ನು ಇಳಿಸಲೇಬೇಕು ಅಂದ್ರೆ ದಲಿತರೊಬ್ಬರು ಸಿಎಂ ಆಗಲಿ ಎಂಬ ಮನಸ್ಸು ರಾಹುಲ್ ಗಾಂಧಿ ಅವರಿಗೆ ಇದ್ಯಂತೆ.
ಇನ್ನು ಅಧಿಕಾರ ಹಂಚಿಕೆ ವಿಷಯಕ್ಕೆ ಬಂದ್ರೆ, ಚರ್ಚೆಯಾಗಿದ್ದೇನೋ ಹೌದು. ಸಿದ್ದರಾಮಯ್ಯ ಒಪ್ಪಿಕೊಂಡಿದ್ದೂ ಹೌದು. ಆದರೆ.. ಮೊದಲ ಎರಡೂವರೆ ವರ್ಷದ ಅವಧಿಯಲ್ಲಿ ಡಿಕೆ ಶಿವಕುಮಾರ್, ಸರ್ಕಾರದ ಒಳಗೆ ಬರಬಾರದು. ಮಂತ್ರಿಯೂ ಆಗಬಾರದು ಎಂದು ಸಿದ್ದರಾಮಯ್ಯ ಷರತ್ತು ಹಾಕಿದ್ರಂತೆ. ಅಷ್ಟೇ ಅಲ್ಲ, ಲಿಂಗಾಯತ, ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದಿಂದ ಮೂವರು ಡಿಸಿಎಂ ಇರಬೇಕು. ಅದರಲ್ಲಿ ಡಿಕೆ ಶಿವಕುಮಾರ್ ಇರಬಾರದು ಎಂದು ಹೇಳಿದ್ರಂತೆ.
ಆದರೆ, ಅದಕ್ಕೆ ಡಿಕೆ ಶಿವಕುಮಾರ್ ಒಪ್ಪಲಿಲ್ಲ. ಡಿಸಿಎಂ ಆದರು. ಸಿದ್ರಾಮಯ್ಯ ಅವರಿಗೆ ಇಷ್ಟ ಇಲ್ಲದೇ ಇದ್ದರೂ.. ಬೆಂಗಳೂರು ಮಂತ್ರಿ ಆದ್ರು. ಹೀಗೆ ಯಾವುದನ್ನೂ ಫಾಲೋ ಮಾಡದೇ ಇದ್ದಾಗ, ಅಧಿಕಾರ ಹಂಚಿಕೆ ಒಪ್ಪಂದದ ವಿಷಯವೇ ಬಕ್ವಾಸ್ ಅಂತಿದೆ ಸಿದ್ದು ಟೀಂ.
ಡಿಕೆ ಶಿವಕುಮಾರ್ ಬಣದವರ ವಾದ :
ಡಿಸೆಂಬರ್ 8ರಂದು ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದ ನಂತರ ವರಿಷ್ಠರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸುತ್ತಾರೆ. ಅಧಿಕಾರ ತ್ಯಾಗ ಮಾಡುವಂತೆ ಅವರ ಮನವೊಲಿಸುತ್ತಾರೆ. ಹೀಗಾಗಿ ಹೊಸ ವರ್ಷದ ಶುರುವಿನಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದು ಗ್ಯಾರಂಟಿ ಎನ್ನುವ ಕಾನ್ಫಿಡೆನ್ಸ್ ಕಾಣ್ತಾ ಇದೆ.
ರಾಹುಲ್ ಗಾಂಧಿಗೆ ಹೋಗಿರುವ ರಿಪೋರ್ಟ್ ಏನು..?
ಕರ್ನಾಟಕದಲ್ಲಿ ಸರಕಾರ ಅಲುಗಾಡಿದರೆ ದೇಶದಲ್ಲಿ ಕಾಂಗ್ರೆಸ್‌ನ ಕತೆ ಅಯೋಮಯವಾಗುತ್ತದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪರ ವಾಗಿ ನಿಂತಿರುವ ಅಹಿಂದ ವರ್ಗಗಳು ಚೆಪಿಲ್ಲಿಯಾಗುತ್ತವೆ. ಆ ಮೂಲಕ 1983 ಮತ್ತು 1994ರಲ್ಲಾದಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ನೆಲ ಕಚ್ಚುತ್ತದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ದೇಶದ ಅಹಿಂದ ವರ್ಗಗಳಿಗೆ ನೆಗೆಟಿವ್ ಮೆಸೇಜ್ ಹೋಗುತ್ತೆ. ಇದು ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಗಳಲ್ಲಿ ಎಫೆಕ್ಟ್ ಕೊಡುತ್ತೆ. ಸಿದ್ದರಾಮಯ್ಯ ಅವರನ್ನು ಇಳಿಸುವುದು ಸೇಫ್ ಅಲ್ಲ.
ರಾಹುಲ್ ಗಾಂಧಿ ಏನ್ ಹೇಳ್ತಾರೆ..?
ಅಧಿಕಾರ ಹಸ್ತಾಂತರ ಒಪ್ಪಂದ ಆಗಿದ್ಯಾ.. ಇಲ್ವಾ.. ಅನ್ನೋ ಮಾತಿಗೆ ರಾಹುಲ್ ಗಾಂಧಿ ನೋ, ನೋ ಅದೆಲ್ಲ ನನಗೆ ಗೊತ್ತಿಲ್ಲ.ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಇಂಥ ಒಪ್ಪಂದಗಳ ಕತೆ ಏನಾಯಿತು ಅಂತ ಗೊತ್ತಿದ್ದ ಮೇಲೂ ಇದರ ಉಸಾಬರಿಗೆ ನಾನು ಹೋಗುತ್ತೇನಾ.. ಎಂದಿದ್ದಾರಂತೆ.



