ಶಿವಣ್ಣ ಕಣ್ಣುಗಳನ್ನು ಉಪೇಂದ್ರ ನಂತರ ಅದ್ಭುತವಾಗಿ ಬಳಸಿಕೊಂಡ ನಿರ್ದೇಶಕರಾಗಿ ನರ್ತನ್ ನಿಲ್ತಾರೆ. ಕೇವಲ ಕಣ್ಣುಗಳಲ್ಲೇ ಮಾತನಾಡಿದ್ದ ಶಿವಣ್ಣ, ಮಫ್ತಿಯಲ್ಲಿ ಅಬ್ಬರಿಸಿದ್ದರು. ಹೀರೋ ಶ್ರೀಮುರಳಿಯೇ ಆದರೂ.. ಶಿವಣ್ಣನ ಎಂಟ್ರಿ ನಂತರ.. ಚಿತ್ರದ ಖದರೇ ಚೇಂಜ್ ಆಗ್ಬಿಡುತ್ತೆ. ಈಗ ಸುದೀರ್ಘ ಹಲವು ವರ್ಷಗಳ ನಂತರ ಚಿತ್ರದ ಸೀಕ್ವೆಲ್ ಬರ್ತಾ ಇದೆ. ಭೈರತಿ ರಣಗಲ್. ಶಿವಣ್ಣ ಅಭಿನಯದ ಸಿನಿಮಾ. ಇದು ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದೇ ರಿಲೀಸ್ ಆಗಬೇಕಿದ್ದ ಸಿನಿಮಾ. ಈಗ ಕಂಪ್ಲೀಟ್ ಆಗಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ನಿರ್ದೇಶಕ ನರ್ತನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದೀಗ ಭೈರತಿ ರಣಗಲ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದ್ದು, ಹಾಡಿನಲ್ಲಿ ಕಥಾನಾಯಕನ ಗುಣಗಾನ ಮಾಡಲಾಗಿದೆ.
‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ನರ್ತನ್ ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿತ್ತು. ಆ ಸಿನಿಮಾದಲ್ಲಿ ಇದ್ದ ಭೈರತಿ ರಣಗಲ್ ಪಾತ್ರ ಸಖತ್ ಹೈಲೈಟ್ ಆಯಿತು. ಈಗ ಅದೇ ಪಾತ್ರದ ಮೇಲೆ ‘ಭೈರತಿ ರಣಗಲ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಶೀರ್ಷಿಕೆ ಗೀತೆ ಮೂಲಕ ಅವರು ನಿರೀಕ್ಷೆ ಹೆಚ್ಚಿಸಿದ್ದಾರೆ.
ಆನಂದ್ ಆಡಿಯೋ ಮೂಲಕ ‘ಭೈರತಿ ರಣಗಲ್’ ಟೈಟಲ್ ಸಾಂಗ್ ರಿಲೀಸ್ ಮಾಡಲಾಗಿದೆ. ಕಿನ್ನಳರಾಜ್ ಅವರು ಈ ಹಾಡಿಗೆ ಸಾಹಿತ್ಯ ಬರೆಸಿದ್ದಾರೆ. ಭೈರತಿ ರಣಗಲ್ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಸುವಂತಹ ಸಾಲುಗಳನ್ನು ಅವರು ಬರೆದಿದ್ದಾರೆ. ಸಂತೋಷ್ ವೆಂಕಿ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಲಿರಿಕಲ್ ವಿಡಿಯೋ ನೋಡಿ ಶಿವರಾಜ್ಕುಮಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ.
‘ಗೀತಾ ಪಿಕ್ಚರ್ಸ್’ ಮೂಲಕ ಗೀತಾ ಶಿವರಾಜ್ಕುಮಾರ್ ಅವರು ‘ಭೈರತಿ ರಣಗಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಈ ಇಬ್ಬರನ್ನು ಬಿಟ್ಟರೆ ಉಳಿದವರ ವಿವರ ಇನ್ನೂ ಸಿಗುತ್ತಿಲ್ಲ. ಸೆಪ್ಟೆಂಬರಿನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ. ಇದು ಮಫ್ತಿ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್. ಅಂದರೆ ಸಿಬಿಐ ಅಧಿಕಾರಿಯಾಗಿ ಭೈರತಿ ರಣಗಲ್ ಮಟ್ಟ ಹಾಕಲು ಶ್ರೀಮುರಳಿ ಎಂಟ್ರಿ ಕೊಡ್ತಾರಲ್ಲ, ಅದಕ್ಕೂ ಮುನ್ನ ನಡೆಯೋ ಕಥೆ. ಭೈರತಿ ರಣಗಲ್ ಸಿನಿಮಾವನ್ನು ಸೆಪ್ಟೆಂಬರ್ 27ರಂದು ರಿಲೀಸ್ ಮಾಡೋ ಪ್ಲಾನ್ ಇದೆ.



