ಪ್ರದೀಪ್ ಈಶ್ವರ್. ಕಾಂಗ್ರೆಸ್ ಶಾಸಕ. ಬಾಯಿಮಾತಿನಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಫೈಟ್ ಕೊಡುವ ಇನ್ನೊಬ್ಬ ನಾಯಕ ಕಾಂಗ್ರೆಸ್ಸಿನಲ್ಲಿಯೇ ಇಲ್ಲ. ಅವರನ್ನು ಜನ ಟಾಕಿಂಗ್ ಸ್ಟಾರ್ ಎಂದೇ ಗುರುತಿಸುತ್ತಿದ್ದಾರೆ. ಅವರೀಗ ವಿಧಾನಸಭೆಯಲ್ಲಿ ಗಿಲ್ಲಿ ಬಿಗ್ ಬಾಸ್ ಬಗ್ಗೆ ಹೇಳಿದ್ದಾರೆ. ಆದರೆ, ಅಲ್ಲಿ ಅವರು ಹೇಳಿರುವ ಒಂದು ಮಾತು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರದೀಪ್ ಈಶ್ವರ್.. ಬಿಜೆಪಿ, ನಿರ್ಮಲಾ ಸೀತಾರಾಮನ್ ಅವರನ್ನು ಟೀಕೆ ಮಾಡುವ ಭರದಲ್ಲಿ ಸುಳ್ಳು ಹೇಳಿದರಾ ಎಂಬುದೇ ಚರ್ಚೆ.. ಇಷ್ಟಕ್ಕೂ ಆಗಿದ್ದೇನೆಂದರೆ..
ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ ಅನುಮೋದಿಸಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಾ, ಪ್ರದೀಪ್ ಈಶ್ವರ್ ಅವರು ವಿಪಕ್ಷಗಳಿಗೆ ತಿರುಗೇಟು ನೀಡುತ್ತಿದ್ದರು ಪ್ರದೀಪ್. ಆ ವೇಳೆ ʻʻಎಲ್ಲರೂ ಬಿಗ್ ಬಾಸ್ ವಿನ್ನರ್ ಗಿಲ್ಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ, ಶೋನ ವಿನ್ನರ್ ಅವರಲ್ಲ, ನಿರ್ಮಲಾ ಸೀತಾರಾಮನ್. ಕೊಟ್ಟಿರೋ 50 ಲಕ್ಷ ರೂಪಾಯಿಗೆ 18 ಪರ್ಸೆಂಟ್ ಜಿಎಸ್ಟಿ, 30% ಇನ್ಕಮ್ ಟ್ಯಾಕ್ಸ್, 4 ಪರ್ಸೆಂಟ್ ಸೆಸ್. ಎಲ್ಲಾ ಸೇರಿ 52 ಪರ್ಸೆಂಟ್ ನಿರ್ಮಲಾ ಅವರಿಗೆ ಹೋಗುತ್ತದೆ. ನಿಜವಾದ ಬಿಗ್ ಬಾಸ್ ವಿನ್ನರ್ ನಿರ್ಮಲಾʼʼ ಎಂದಿದ್ದಾರೆ ಪ್ರದೀಪ್ ಈಶ್ವರ್.
ಅದರ ಅರ್ಥ ಇಷ್ಟೇ.ಬಿಗ್ ಬಾಸ್‌ನಲ್ಲಿ ಗೆದ್ದ ಬಹುಮಾನದ ಮೊತ್ತದ ಶೇ. 50ರಷ್ಟು ಹಣ ನಿರ್ಮಲಾ ಸೀತಾರಾಮನ್ ಪಾಲಾಗುತ್ತಿದೆ. ಕೇವಲ ಶೇ. 48ರಷ್ಟು ಮಾತ್ರ ವಿಜೇತರಿಗೆ ಸಿಗುತ್ತದೆ ಎನ್ನುವುದು.
ಗಿಲ್ಲಿ ನಟ ಅವರು ಬಿಗ್ ಬಾಸ್ ಗೆದ್ದಾಗ ಸಿಕ್ಕಿದ್ದು 50 ಲಕ್ಷ ಕ್ಯಾಷ್ ಪ್ರೈಜ್. ಜೊತೆಗೆ ಕಿಚ್ಚ ಸುದೀಪ್ ಕೊಟ್ಟ 10 ಲಕ್ಷ ಪರ್ಸನಲ್ ಕ್ಯಾಷ್ ಪ್ರೈಜ್. ಜೊತೆಗೆ ಒಂದು ಕಾರು. ಆದರೆ, ಅವರು ನಿಜಕ್ಕೂ ಗೆದ್ದಿದ್ದು ಎಷ್ಟು..?ಪ್ರದೀಪ್ ಈಶ್ವರ್ ಅವರು ಹೇಳಿದ್ದು ನಿಜಾನೋ.. ಇದುವರೆಗೆ ಕೇಳಿದ್ದು ನಿಜಾನೋ..
ಈಗ ಸತ್ಯ ಯಾವುದು.. ಅನ್ನೋದೇ ದೊಡ್ಡ ಕನ್ ಫ್ಯೂಷನ್ನು. ಏಕೆಂದರೆ ಇದುವರೆಗೆ ಗೊತ್ತಿದ್ದ ಮಾಹಿತಿ ಏನೆಂದರೆ ಗಿಲ್ಲಿ ನಟ ತಾವು ಗೆದ್ದ ₹50 ಲಕ್ಷ ನಗದು ಬಹುಮಾನದ ಮೇಲೆ 31.2 ಮನರಂಜನಾ ತೆರಿಗೆ ಪಾವತಿಸಬೇಕು. ಇದರಿಂದಾಗಿ ಸುಮಾರು 15.6 ಲಕ್ಷ ಟ್ಯಾಕ್ಸ್ ಕಟ್ ಆಗಿ 34.4 ಲಕ್ಷ ಗಿಲ್ಲಿ ನಟ ಅವರಿಗೆ ಸಿಗುತ್ತದೆ. ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 194B ಪ್ರಕಾರ 30% ಆದಾಯ ತೆರಿಗೆ ಮತ್ತು 4% ಸೆಸ್ ಬರುತ್ತದೆ. ಇದು ಇದೂವರೆಗೆ ಗೊತ್ತಿದ್ದ ಮಾಹಿತಿ. ಈಗ ಶಾಸಕ ಪ್ರದೀಪ್ ಈಶ್ವರ್ ಅವರು ಹೇಳ್ತಿರೋ ಲೆಕ್ಕವೇ ಬೇರೆ.
ಬೇರೆ ಕಡೆ ಹೇಳಿದ್ದರೆ ಬೇರೆ ಮಾತು.. ಆದರೆ ವಿಧಾನಸಭೆಯಲ್ಲಿ ಹೇಳುವುದೆಲ್ಲ ಅಧಿಕೃತ ಎನ್ನುವ ನಂಬಿಕೆ ಜನರಲ್ಲಿದೆ. ಅದನ್ನು ಸರಿಪಡಿಸುವ ಕೆಲಸವನ್ನೂ ಕೂಡಾ ಯಾರೂ ಮಾಡಿಲ್ಲ. ಹೀಗಾಗಿ ಜನರಂತೂ ಗೊಂದಲಕ್ಕೀಡಾಗಿದ್ದಾರೆ. ಯಾವುದು ಸತ್ಯ..?
ಪ್ರದೀಪ್ ಈಶ್ವರ್ ಚೆಂದಗೆ ಮಾತನಾಡುತ್ತಾರೆ. ಆದರೆ ಟೀಕೆ ಮಾಡುವಾಗ.. ಲೇವಡಿ ಮಾಡುವುದೇ ವೆಪನ್ ಆಗಬಾರದು. ಪ್ರದೀಪ್ ಈಶ್ವರ್ ಅವರ ವರ್ತನೆ ನೋಡಿದರೆ.. ಈಗ ಗಿಲ್ಲಿ ನಟ ಟ್ರೆಂಡ್. ಗಿಲ್ಲಿ ನಟನ ಹೆಸರು ಹೇಳಿದರೆ ಎಲ್ಲರೂ ತಾವು ಹೇಳಿದ್ದನ್ನೇ ಹೈಲೈಟ್ ಮಾಡಿ ತೋರಿಸ್ತಾರೆ ಎಂಬ ಆಸೆಗೆ ಬಿದ್ದರಾ.. ಗೊತ್ತಿಲ್ಲ. ಸತ್ಯವನ್ನೂ ಹೇಳಬೇಕಾಗಿರುವುದು ಕೂಡಾ ಅವರೇ.



