ಕುಮಾರಸ್ವಾಮಿ ವರ್ಸಸ್ ಚೆಲುವರಾಯಸ್ವಾಮಿ (Kumaraswamy vs Cheluvaraya swamy ) ನಡುವಿನ ವಾರ್ ಬೇರೆಯದೇ ಸ್ವರೂಪ ಪಡೆಯುತ್ತಿದೆ. ಕಂಡಕ್ಟರ್ ಆತ್ಮಹತ್ಯೆ ಯತ್ನ ಪ್ರಕರಣ, ಮಂಡ್ಯದಲ್ಲಿ ಮುನ್ʻಮುಲ್ ರಾಜಕೀಯ, ಕೆಆರ್ʻಎಸ್ ವಿವಾದ.. ಹೀಗೆ ಪ್ರತಿಯೊಂದರಲ್ಲೂ ಚೆಲುವರಾಯ ಸ್ವಾಮಿ ಮತ್ತು ಕುಮಾರಸ್ವಾಮಿ ಬಡಿದಾಡುತ್ತಿದ್ದಾರೆ. ಒಂದು ಕಾಲದಲ್ಲಿ ಆಪ್ತಮಿತ್ರರಾಗಿದ್ದ ಇಬ್ಬರೂ ಈಗ ಬದ್ಧ ಶತ್ರುಗಳಾಗಿದ್ದಾರೆ. ವಿಧಾನಸಭೆಯಲ್ಲಿ ಹೆಸರನ್ನೂ ಹೇಳದೆ ಟೀಕಿಸುವ ಕುಮಾರಸ್ವಾಮಿ, ಹೆಸರು ಹೇಳಿ ಸಾರ್ ಎನ್ನುವ ಚೆಲುವರಾಯಸ್ವಾಮಿ ನಡುವಿನ ಟಾಕ್ ಫೈಟ್ ಈಗ ಬೇರೆಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಮಾಕಳಿ ಕೆರೆ ನುಂಗಿದ್ದಾರಾ ಚೆಲುವರಾಯಸ್ವಾಮಿ?
ಮಂಡ್ಯ ಜಿಲ್ಲೆಯ ಮಹಾ ನಾಯಕರು ಒಬ್ಬರು ದಾಸನಪುರ ಹೋಬಳಿಯ Dasanapura ಸರ್ವೇ ನಂಬರ್ 13ರಲ್ಲಿರುವ suvrey no 13 ಮಾಕಳಿ ಕೆರೆಯನ್ನೇ makali lake ಸ್ವಾಹಾ ಮಾಡಿದ್ದಾರೆ. ಅವರ ಬಗ್ಗೆಯೂ ತನಿಖೆ ಮಾಡಿಸಬೇಕು ಅಲ್ಲವೇ ಎಂದಿರುವ ಕುಮಾರಸ್ವಾಮಿ, ಅಲ್ಲಿಯೂ ಚೆಲುವರಾಯಸ್ವಾಮಿ ಹೆಸರು ಹೇಳಿಲ್ಲ. ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚಲುವರಾಯಸ್ವಾಮಿ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದ್ದಾರೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಬೇಕು ಎಂದು ಒಬ್ಬ ಸಚಿವರು ಅಪ್ಪಣೆ ಕೊಡಿಸಿದ್ದಾರೆ. ಆದರೆ, ಅವರು ಒಂದು ಕೆರೆಯನ್ನೇ ನುಂಗಿ ನೀರು ಕುಡಿದಿದ್ದಾರೆ. ಅದಕ್ಕೆ ಯಾವ ತನಿಖೆ ನಡೆಸುತ್ತೀರಿ? ನಾನು ಹೇಗೆ ರಾಜಕೀಯ ಮಾಡಿದೆ, ಯಾವ ರೀತಿ ನಡೆದುಕೊಂಡಿದ್ದೇನೆ ಎನ್ನುವುದನ್ನು ರಾಜ್ಯದ ಜನರು ನೋಡಿದ್ದಾರೆ. ಇವರು ಏನು ಎನ್ನುವುದು ನಾಡಿನ ಜನರಿಗೆ ಗೊತ್ತಿದೆ. ಮಾಕಳಿ ಗ್ರಾಮದ ಆ ಮೂರು ಎಕರೆ ಮೂವತ್ತು ಗುಂಟೆ ನುಂಗಿದ್ದು ಯಾರು? ನಾನು ಕೆರೆ ನುಂಗುವ ಕೆಲಸ ಮಾಡಿಲ್ಲ ಎಂದು ಅವರು ಕಿಡಿಕಾರಿದ್ಧಾರೆ.
ಮಾಕಳಿ ಕೆರೆ ನುಂಗಿದ ಆರೋಪ ಬಂದಿದ್ದಾದರೂ ಏಕೆ?
ಕುಮಾರಸ್ವಾಮಿ ಬಿಡದಿಯಲ್ಲಿರುವ ತೋಟವನ್ನು Bidadi thotada mane ಅಕ್ರಮವಾಗಿ ಖರೀದಿಸಿದ್ದಾರೆ. ಅದಕ್ಕೆ ದುಡ್ಡು ಎಲ್ಲಿಂದ ಬಂತು ಎಂದು ಚೆಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ಕೊಟ್ಟಿರುವ ಕುಮಾರಸ್ವಾಮಿ ನಾನು ಸಿನಿಮಾ ಹಂಚಿಕೆದಾರ ಆಗಿದ್ದಾಗ ಬಿಡದಿಯಲ್ಲಿ ಜಮೀನು ಖರೀದಿ ಮಾಡಿ ತೋಟ ಮಾಡಿದ್ದೇನೆ. ಕಸ್ತೂರಿ ಚಾನಲ್ ಮಾಡಿದ್ದೆ. ಅದರ ಕಷ್ಟ ಅನುಭವಿಸಿದವನಿಗೇ ಗೊತ್ತು. ಅದೆಲ್ಲಾ ಕಷ್ಟ ನನಗೆ ಗೊತ್ತಿದೆ ಎಂದಿದ್ಧಾರೆ. ಅಲ್ಲದೆ ಇಂತಹುದೇ ಆರೋಪ ಬಂದಾಗ ತನಿಖೆ ಮಾಡಿಸಿ ಎಂದು ನಾನೇ ಪ್ರತಿಭಟನೆ ಮಾಡಿದ್ದೆ. ಆಗ ಈ ವ್ಯಕ್ತಿಯೂ ನನ್ನ ಜೊತೆ ಇದ್ದರು ಎಂದು ಉತ್ತರ ಕೊಟ್ಟಿದ್ದಾರೆ ಕುಮಾರಸ್ವಾಮಿ.
ಚೆಲುವರಾಯಸ್ವಾಮಿ ತಿರುಗೇಟು ಎಂಥದ್ದು?
ಬಿಡದಿ ಜಮೀನಿನ ವಿಷಯದಲ್ಲಿ ಕೋರ್ಟ್‌ನ ಆದೇಶವಿದೆ. ಸರಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಮಾಜಿ ಸಿಎಂ ಎಂದು ಯಾವುದೇ ಮುಲಾಜು ತೋರಿಸುವುದಿಲ್ಲ. ಕೋರ್ಟ್ ಆದೇಶವನ್ನು ಇಲಾಖೆ ಪಾಲಿಸುತ್ತದೆ ಎಂದಿದ್ದಾರೆ ಮಿನಿಸ್ಟರ್ ಚೆಲುವರಾಯಸ್ವಾಮಿ. ಯಾರ ಆಸ್ತಿ ಅವೈಜ್ಞಾನಿಕವಾಗಿ ಏರಿಕೆಯಾಗಿದೆ ಎಂಬ ಬಗ್ಗೆ ತನಿಖೆಯಾಗಲಿ. ನಮಗೇನು ಪ್ರಧಾನಿಗಳು ಹತ್ತಿರವಿಲ್ಲ, ಕೇಂದ್ರದ ಬಳಿ ದೊಡ್ಡ ತನಿಖಾ ಸಂಸ್ಥೆಗಳಿದ್ದು, ತನಿಖೆ ಮಾಡಿಸಲಿ ಎಂದೂ ಸವಾಲು ಹಾಕಿದ್ದಾರೆ. ನಾನೇನು ಭೂಮಿ ಒತ್ತುವರಿ ಮಾಡಿಲ್ಲ. ಭೂ ಮಂಜೂರಾತಿಯನ್ನು ಮಾಡಿಸಿಕೊಂಡಿಲ್ಲ. ನಾನು ಭೂಮಿ ಖರೀದಿಸಿದ್ದು, ದೋಷವಿದ್ದರೆ ತನಿಖೆಯಾಗಲಿದೆ ಎಂದು ಹೇಳಿದ್ದಾರೆ.



