ದೊಡ್ಡ ಆಲನಹಳ್ಳಿ. ಡಿಕೆ ಶಿವಕುಮಾರ್ ಅವರ ಹುಟ್ಟೂರು. ಇದೇ ಊರಿನಲ್ಲಿ ಈ ಹಿಂದೆ 2 ಟೆಂಟ್ ಇದ್ದವು. ಅವುಗಳ ಓನರ್ ಡಿಕೆ ಶಿವಕುಮಾರ್. ಅವರೇ ಹೇಳುವಂತೆ ಇವತ್ತಿಗೂ ಟೆಂಟ್ ಇದೆ. ಸಿನಿಮಾ ಸ್ಕ್ರೀನಿಂಗ್ ಆಗ್ತಾ ಇದೆ. ಆ ಟೆಂಟುಗಳಲ್ಲಿ ಬ್ಲೂಫಿಲಂ ತೋರಿಸಿ ದುಡ್ಡು ಮಾಡಿದವರು ಎನ್ನುವುದು ಕುಮಾರಸ್ವಾಮಿ ಆರೋಪ.
ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ವಲ್ಲಾ, ಮಲೆಯಾಳಿ ಸಿನಿಮಾಗೆ ಕಟ್ಟಿಂಗ್ ಸೇರಿಸೋರಲ್ಲ, ನಾವು ಚಿಕ್ಕವರಿದ್ದಾಗ, ನಾನು ಆ ಜೀವನ ಮಾಡಿಕೊಂಡು ಬಂದಿಲ್ಲ. ಅವರು ಅದನ್ನೇ ಮುಂದುವರೆಸುತ್ತಿದ್ದಾರೆ, ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ, ಅಂತವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಕೂಡ ಇಂದು ಅಂತವರಿಗೆ ಅಧಿಕಾರ ನೀಡಿದೆ. ಅವರ ಜೀವನ, ಸಂಸ್ಕೃತಿ ಬದುಕೇ ಅಷ್ಟು, ಏನು ಮಾಡೋದು ಎಂದು ಕಿಡಿ ಕಾರಿದ್ದಾರೆ ಕುಮಾರಸ್ವಾಮಿ.
ಕರೆಂಟ್ ಕಳ್ಳ.. ಪೋಸ್ಟರ್ʻನಿಂದ ಶುರುವಾದ ಯುದ್ಧ :
ಇಷ್ಟಕ್ಕೂ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಿನ ಹೋರಾಟ ಶುರುವಾಗಿದ್ದು ಕರೆಂಟ್ ಕಳ್ಳತನ ಪ್ರಕರಣದಿಂದ. ಕುಮಾರಸ್ವಾಮಿ ಅವರ ಮನೆಯ ದೀಪಾವಳಿ ಅಲಂಕಾರಕ್ಕೆ ಸರ್ಕಾರಿ ವಿದ್ಯುತ್ ಕಂಬದಿಂದ ಕರೆಂಟ್ ತೆಗೆದುಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ ಕುಮಾರಸ್ವಾಮಿ ಕ್ಷಮೆ ಕೇಳಿದ್ದು, ಅಂತಿಮವಾಗಿ 68 ಸಾವಿರ ದಂಡ ಕಟ್ಟಿದ್ದು ಎಲ್ಲವೂ ಗೊತ್ತಿರುವ ವಿಚಾರವೇ. ಕುಮಾರಸ್ವಾಮಿ ಪ್ರಕಾರ ಗುತ್ತಿಗೆ ಪಡೆದವರು ಮಾಡಿದ ತಪ್ಪು. ಅದಕ್ಕೆ ಕ್ಷಮೆ ಕೇಳಿದ್ದಾಗಿದೆ. ದಂಡ ಕಟ್ಟಿದ್ದೂ ಆಗಿದೆ. ಅದನ್ನು ಅಲ್ಲಿಗೇ ಬಿಟ್ಟಿದ್ದರೆ ಕುಮಾರಸ್ವಾಮಿ ಇಷ್ಟೊಂದು ರೊಚ್ಚಿಗೇಳುತ್ತಿಲಿಲ್ಲವೇನೋ.. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಮಾಡಿಸಿ ಜೆಡಿಎಸ್ ಕಚೇರಿಗೆ ಅಂಟಿಸಿಬಿಟ್ಟರು. ಸೋಷಿಯಲ್ ಮೀಡಿಯಾಗಳಲ್ಲಿ ಕರೆಂಟ್ ಕಳ್ಳ ಎಂದು ಪದೇ ಪದೇ ಲೇವಡಿ ಮಾಡಿದರು. ಅದನ್ನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಎಂಜಾಯ್ ಮಾಡಿದರು ಕೂಡಾ. ಕುಮಾರಸ್ವಾಮಿ ಕನಲಿದ್ದು ಇದೇ ಕಾರಣಕ್ಕೆ. ಅದೆಲ್ಲದರ ಎಫೆಕ್ಟ್ ಈ ರೀತಿ ಆಕ್ರೊಶ ಭುಗಿಲೇಳುವಂತೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವಂತೆ ಟೆಂಟಲ್ಲಿ ನೀಲಿ ಸಿನೆಮಾ ತೋರಿಸುವಂತಹ ಕೀಳು ಮಟ್ಟಕ್ಕೆ ಇಳಿದಿಲ್ಲ. ಅಂತಹದ್ದೇನಾದರೂ ನಾನು ಮಾಡಿದನ್ನು ಸಾಬೀತು ಪಡಿಸಿದರೆ ಈ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. . ಕುಮಾರಸ್ವಾಮಿ ಅವರು ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯ ಮಾತುಗಳಿಗೆ ತೂಕ, ಗೌರವ ಇರಬೇಕು. ಏನೇನೋ ಮಾತನಾಡಿದರೆ ಅವರ ಗೌರವವೇ ಹಾಳಾಗುತ್ತದೆ. ಇದರಿಂದ ಏನೂ ಒಳ್ಳೆಯದಾಗುವುದಿಲ್ಲ. ಜನ ನೋಡಿ ನಗುತ್ತಾರೆ ಅಷ್ಟೆ ಎಂದಿದ್ದಾರೆ ಡಿಕೆ ಶಿವಕುಮಾರ್.
ಕನಕಪುರ ಕ್ಷೇತ್ರದ ಜನ 1.23 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅವರೇನು ದಡ್ಡರಾ? ಕುಮಾರಸ್ವಾಮಿ ಅವರು ತಾವು ಹಾಗೂ ತಮ್ಮ ತಂದೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾಗ ಇಂತಹ ವಿಷಯವನ್ನು ಪ್ರಚಾರದ ವೇಳೆ ಮಾತನಾಡಲಿಲ್ಲ? ಹೋಗಿ ನಮ್ಮೂರ ಜನರನ್ನ, ನನ್ನ ಕ್ಷೇತ್ರದ ಜನರನ್ನ ಕೇಳಿ. ಅದೂ ಬೇಡ ನನ್ನ ಕ್ಷೇತ್ರದಲ್ಲಿರುವ ಜೆಡಿಎಸ್ ಕಾರ್ಯಕರ್ತರನ್ನೇ ಕೇಳಿ ಒಬ್ಬ ಕಾರ್ಯಕರ್ತ ಹೌದು ಡಿ.ಕೆ.ಶಿವಕುಮಾರ್ ಇಂತಹ ಕೀಳು ರಾಜಕೀಯ ಮಾಡಿಕೊಂಡು ಬಂದವರು ಎಂದು ಹೇಳಿದರೆ ಇವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ಧಾರೆ ಕುಮಾರಸ್ವಾಮಿ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೀವನ ಏನೆಂಬುದು ತಿಳಿದಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಹಾಗೂ ಸುಳ್ಳರು ಒಂದಾಗಿದ್ದಾರೆ. ಮೇಲೊಬ್ಬ ಭಗವಂತ ಎಂಬುವವನಿದ್ದಾನೆ. ಅವನೇ ಅಂತಿಮವಾಗಿ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಾನೆ. ಸಮಾಜದಲ್ಲಿ ಹಣದ ಮದ ಹತ್ತಿಸಿಕೊಂಡವರು ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ ಎಂದುಕೊಂಡಿದ್ದಾರೆ. ಆದರೆ ಎಲ್ಲದಕ್ಕೂ ಒಂದು ಅಂತ್ಯವೆಂಬುದು ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನನ್ನ ವಿರುದ್ಧ ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ. ನನಗೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲವೆಂದು ತಮ್ಮ ವಿರುದ್ಧದ ಪೋಸ್ಟರ್ ವಾರ್ ವಿಚಾರವಾಗಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ಧಾರೆ.



