ಡೆವಿಲ್ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಫಸ್ಟ್ಟ ಡೇ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ್ದ ಡೆವಿಲ್, ಆನಂತರ ಕುಸಿದಿರುವುದು ನಿಜ. ಸಿನಿಮಾ ಕಲೆಕ್ಷನ್ ಮೊದಲ ದಿನದ ಬಿರುಗಾಳಿ ಕಲೆಕ್ಷನ್‌ನ್ನು ಉಳಿಸಿಕೊಂಡಿಲ್ಲ ಎನ್ನುವುದು ನಿಜ. ಹಾಗೆಂದು ಸಿನಿಮಾ ಸೋತಿಲ್ಲ. ನೆಗೆಟಿವ್ ಪ್ರಚಾರದ ಮಧ್ಯೆಯೂ ಭರ್ಜರಿ ಕಲೆಕ್ಷನ್ ಮಾಡಿದೆ. ಇನ್ನು ದರ್ಶನ್ ಅಭಿಮಾನಿಗಳನ್ನು ಲೇವಡಿ ಮಾಡುತ್ತಿರುವವರಿಗೆ ದರ್ಶನ್ ಅವ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಕೊಟ್ಟಿದ್ದಾರೆ.
ಬಾಕ್ಸಾಫೀಸ್ ಸುಲ್ತಾನ ದರ್ಶನ್ ಜೈಲಿನಲ್ಲಿದ್ದರೂ, ದರ್ಶನ್ ಅಭಿಮಾನಿಗಳು ಚಿತ್ರವನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ. ಯೆಸ್, ಡೆವಿಲ್ ಹಿಟ್. ಬ್ಲಾಕ್ ಬಸ್ಟರ್ ಅಲ್ಲದೇ ಇರಬಹುದು, ಸಿನಿಮಾ ಸೂಪರ್ ಹಿಟ್ ಅನ್ನೋದ್ರಲ್ಲಿ ಅನುಮಾನ ಇಲ್ಲ.
ಚಿತ್ರವನ್ನು ಡೆವಿಲ್ ಹೀರೋಯಿನ್ ರಚನಾ ರೈ, ದರ್ಶನ್ ಅವರ ತಮ್ಮ ದಿನಕರ್, ಶಿವಣ್ಣ, ರಿಷಬ್ ಶೆಟ್ಟಿ, ರಚಿತಾ ರಾಮ್, ಧನ್ವೀರ್ ಮೊದಲಾದವರು ಪ್ರಚಾರ ಮಾಡಿದ್ದರು. ಅದೆಲ್ಲದರ ಪರಿಣಾಮ ಡೆವಿಲ್ ಚಿತ್ರದ ಫಸ್ಟ್ ವೀಕ್ ಎಂಡ್ ಕಂಪ್ಲೀಟ್ ಆಗಿದ್ದು, ರಿಪೋರ್ಟ್ ಹೊರಬಿದ್ದಿದೆ.
ಡೆವಿಲ್ ಫಸ್ಟ್ ಡೇ ಸುಮಾರು 13 ಕೋಟಿ ಕಲೆಕ್ಷನ್ ಮಾಡಿತ್ತು. ಮರುದಿನ ಅದೇ ಕ್ರೇಜ್ ಉಳಿಸಿಕೊಳ್ಳಲಿಲ್ಲ ಎನ್ನುವುದೂ ಸತ್ಯ. ಸುಮಾರು 10 ಕೋಟಿಯಷ್ಟು ಕಲೆಕ್ಷನ್ ಬಿತ್ತು. ಶುಕ್ರವಾರ ಮತ್ತು ಶನಿವಾರ ಎರಡೂ ದಿನ ತಲಾ 4 ಕೋಟಿ ಕಲೆಕ್ಷನ್ ಅಂದ್ರೆ ಒಟ್ಟು 8 ಕೋಟಿಯ ಸಮೀಪ ಕಲೆಕ್ಷನ್ ಆಗಿತ್ತು. ಆದರೆ, ಭಾನುವಾರ ಮತ್ತೆ ಚಿಗುರಿದ ಕಲೆಕ್ಷನ್ 5 ಕೋಟಿಯಷ್ಟು ಕಲೆಕ್ಷನ್ ಆಗಿದೆ. ಗುರುವಾರದಿಂದ ಭಾನುವಾರದ ಹೊತ್ತಿಗೆ ಕೇವಲ 4 ದಿನದಲ್ಲಿ ಡೆವಿಲ್ ಚಿತ್ರ ನೋಡಿದ ಪ್ರೇಕ್ಷಕರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚು ಇದೆ. ಬೆಂಗಳೂರು ಮಾತ್ರವಲ್ಲದೆ, ಸಣ್ಣ ಸಣ್ಣ ನಗರಗಳಲ್ಲೂ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ಗಳಿಗಿಂತ ಸಿಂಗಲ್ ಸ್ಕ್ರಿನ್ಗಳಲ್ಲಿ ಹೆಚ್ಚಿನ ಪ್ರೇಕ್ಷಕರು ಇದ್ದಾರೆ. ಚಿತ್ರದ ಗಳಿಕೆ 24 ಕೋಟಿ ರೂಪಾಯಿ ದಾಟಿದೆ ಎನ್ನುವುದು ಮೂಲಗಳ ಮಾಹಿತಿ.
ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರು ಹೌದು. ಹೀಗಾಗಿ ಸಹಜವಾಗಿಯೇ ಪ್ರಕಾಶ್ ವೀರ್ ಖುಷಿಯಾಗಿದ್ದಾರೆ. ಡೆವಿಲ್ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ, ಪಾಸಿಟಿವ್ ಸ್ವಲ್ಪ ಹೆಚ್ಚೇ ಇದೆ. ಹೀಗಾಗಿ ಡೆವಿಲ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡ್ತಾ ಇದೆ.
ಇದರ ಮಧ್ಯೆ ದರ್ಶನ್ ಅಭಿಮಾನಿಗಳನ್ನು ಲೇವಡಿ ಮಾಡುತ್ತಿರುವವರ ವಿರುದ್ಧ ವಿಜಯಲಕ್ಷ್ಮಿ ತಾಳ್ಮೆಯಿಂದಲೇ ಮಾತನಾಡಿದ್ದಾರೆ. ಆದರೆ ಅದು ಸುತ್ತಿ ಹೊಡೆದಂತೆ ಇದೆ. ವಿಜಯಲಕ್ಷ್ಮಿ ಹೇಳಿರೋದು ಇಷ್ಟು. ʻʻ ದರ್ಶನ್ ಅವರಿಗೆ ಹೆಣ್ಣನ್ನು ಗೌರವಿಸುವುದು ಗೊತ್ತು. ಅವರ ಅಭಿಮಾನಿಗಳಿಗೂ ಹೆಣ್ಣನ್ನು ಹೇಗೆ ಗೌರವಿಸಬೇಕು ಅನ್ನೋದು ಗೊತ್ತು. ನಮ್ಮ ಸೆಲೆಬ್ರಿಟೀಸ್‌ಗಳ ಹತ್ರ ಫಂಡ್ ಕಲೆಕ್ಟ್ ಮಾಡಿ, ಒಂದು ಸ್ಕೂಲ್ ಓಪನ್ ಮಾಡೋಣ. ಯಾರ್ಯಾರು, ದರ್ಶನ್ ಅಭಿಮಾನಿಗಳು ಅನಕ್ಷರಸ್ಥರು ಅಂತ ಹೇಳ್ತಿದ್ದಾರಲ್ಲಾ? ಅವರನ್ನೇ ಕರೆದುಕೊಂಡು ಬಂದು ಪಾಠ ಮಾಡಿ ಅಂತ ಹೇಳೋಣʼʼ ಎಂದಿದ್ದಾರೆ.
ಅಂದಹಾಗೆ ವಿಜಯಲಕ್ಷ್ಮಿ ಇಷ್ಟೆಲ್ಲ ಹೇಳಿರುವುದಕ್ಕೆ ಕಾರಣವೂ ಇದೆ. ದರ್ಶನ್ ಅಭಿಮಾನಿಗಳನಷ್ಟು ಟ್ರೋಲ್ ಆದವರು, ಲೇವಡಿ ಆದವರು ಬೇರೊಬ್ಬರಿಲ್ಲ ಎನ್ನಬಹುದು. ದರ್ಶನ್ ಅಭಿಮಾನಿಗಳನ್ನು ಹೆಣ್ಣು ಮಕ್ಕಳಿಗೆ ಗೌರವ ಕೊಡದವರು, ಚಪ್ರೀಗಳು, ಪೋಲಿ ಪೋಕರಿಗಳು ಮತ್ತು ಅವಿದ್ಯಾವಂತರು ಎಂದು ಲೇವಡಿ ಮಾಡ್ತಾರೆ. ಅಂತಹವರಿಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಉತ್ತರ ಕೊಟ್ಟಿದ್ದಾರೆ.
ಇನ್ನು ಅಖಂಡ 02 ಎಂಬ ಬಾಲಕೃಷ್ಣ ಅಭಿನಯದ ಸಿನಿಮಾ ಕೆಟ್ಟ ವಿಮರ್ಶೆ ಪಡೆದರೂ, ಕರ್ನಾಟಕದಲ್ಲಿಯೇ ಡೆವಿಲ್ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಡೆವಿಲ್ ಚಿತ್ರದ ಕಲೆಕ್ಷನ್ 30 ಕೋಟಿಗೂ ಹೆಚ್ಚು ಎನ್ನಲಾಗಿದೆ.



