ಸಿದ್ದರಾಮಯ್ಯ (CM siddaramaiah) ಅವರನ್ನ ಪ್ರಶ್ನೆ ಮಾಡೋ ಪತ್ರಕರ್ತ ಸ್ವಲ್ಪ ತಿಳ್ಕೊಂಡಿರಬೇಕು. ಇಲ್ಲ ಅಂದ್ರೆ ಸಿದ್ದರಾಮಯ್ಯ ವ್ಯಾಕರಣ, ಕಾನೂನು, ಎಕನಾಮಿಕ್ಸು.. ಎಲ್ಲವನ್ನೂ ಪ್ರಶ್ನೆ ಹಾಕಿ ಕನ್`ಫ್ಯೂಸ್ ಮಾಡಿಬಿಡ್ತಾರೆ. ರಾಜಕೀಯದ ಪ್ರಶ್ನೆಗಳ ವಿಷಯ ಬಿಡಿ, ಕೌಂಟರ್`ಗೆ ಡಬಲ್ ಎನ್`ಕೌಂಟರ್ ಕೊಡ್ತಾರೆ. ನಿನಗೆ ಗೊತ್ತಾ..? ನೀನ್ ನೋಡಿದ್ದೀಯ..? ಅನ್ನೋ ಪ್ರಶ್ನೆ ಹಾಕಿ ಸುಮ್ಮನಾಗಿಸ್ತಾರೆ. ಅಂತಹ ಸಿದ್ದರಾಮಯ್ಯ ಹೆಂಡತಿ ಬಗ್ಗೆ, ಲವ್ ಸ್ಟೋರಿ ಬಗ್ಗೆ ಕೇಳಿದ್ರೆ ಹಂಗೆಲ್ಲ ಕೇಳೋಕಾಗಲ್ಲ. ಯಾಕಂದ್ರೆ ಅದು ಅವರಿಗಷ್ಟೇ ಗೊತ್ತಿರೋ ವಿಷಯ. ಸಿಎಂ ಸಿದ್ದರಾಮಯ್ಯ ಅವರ ಬಾಯಿ ದೊಡ್ಡದು. ಶಕ್ತಿ ದೊಡ್ಡದು. ಪ್ರೀತಿಯೂ ದೊಡ್ಡದು. ಅಂತಹ ಸಿದ್ದರಾಮಯ್ಯ ತಮ್ಮ ಪತ್ನಿಯನ್ನ ಏನಂತ ಕರೀತಾರೆ. ಲವ್ ಜಾಸ್ತಿ (siddaramaiah love story) ಆದಾಗ ಏನಂತಾರೆ.. ಕೋಪ ಬಂದಾಗ ಏನಂತಾರೆ.. ಹೆಂಡತಿಗೆ ಹೆದರ್ತಾರಾ.
ಕಲರ್ಸ್ ಕನ್ನಡ ವಾಹಿನಿಯಲ್ಲಿ (colors kannada) ಪ್ರಸಾರ ಆದ ಅನುಬಂಧ ಅವಾರ್ಡ್ಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದು, ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಂತಹ ಪ್ರಶ್ನೆಗಳಿಗೆಲ್ಲ ಹಾಸ್ಯದ ರೂಪದಲ್ಲಿಯೇ ತಿಳಿಸಿದ್ದಾರೆ.
ನಿರೂಪಕಿ ಸುಷ್ಮಾ (anchor sushma) ಅವರು, ಸಿದ್ದರಾಮಯ್ಯನವರಿಗೆ ನಿಮ್ಮ ಪತ್ನಿಯ (CM siddaramaiah wife) ಹೆಸರು ಏನು ಎಂದು ಕೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ಪಾರ್ವತಿ (parvathi Siddaramaiah) ಎಂದಿದ್ದಾರೆ. ನಂತರ ನಿಮ್ಮ ಪತ್ನಿಯನ್ನು ಏನೆಂದು ಕರೆಯುತ್ತೀರಿ ಎಂದಾಗ ಬೇರೇನೂ ಹೆಸರಿಂದ ಕರೆಯಲ್ಲ, ಪಾರ್ವತಿ ಎಂದೇ ಕರೆಯುತ್ತೇನೆ ಎಂದಿದ್ದಾರೆ. ನಂತರ ಸುಷ್ಮಾ ಅವರು, ತುಂಬಾ ಪ್ರೀತಿ ಉಕ್ಕಿದಾಗ ಏನೆಂದು ಕರೆಯುತ್ತೀರಿ ಎಂದು ಪ್ರಶ್ನಿಸಿದಾಗ ಆಗಲೂ ಪಾರ್ವತಿ ಅಂತನೇ ಕರೀತೀನಿ. ಬೇರೆ ಹೆಸರಿನಿಂದ ಕರೆಯೋಕೆ ಆಗತ್ತಾ ಎಂದಿದ್ದಾರೆ.
ಹೆಂಡತಿ ಹತ್ತಿರ ಬೈಸಿಕೊಂಡಿದ್ದೇನಾದರೂ ಇದೆಯಾ ಎಂದಾಗ ಸಿದ್ದರಾಮಯ್ಯ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಹೆಂಡತಿಗೆ ಹೆದರುವುದಿಲ್ಲವಂತೆ ಸಿದ್ದರಾಮಯ್ಯ. ಆದರೆ ರಾಜ್ಯದ ಜನರಿಗೆ ಹೆದರಿಕೊಳ್ತಾರಂತೆ. ಅಡುಗೆ ಮಾಡೋಕೆ ಬರಲ್ಲ, ಆದರೆ ಅನ್ನ ಮಾಡಿಕೊಳ್ಳೋಕೆ ಬರುತ್ತೆ ಅಂದಿದ್ದಾರೆ ಸಿದ್ದರಾಮಯ್ಯ. ಅನ್ನ ಮಾತ್ರ ಬರುತ್ತೆ ಎಂದ ಮುಖ್ಯಮಂತ್ರಿ, ವಿದ್ಯಾರ್ಥಿಯಾಗಿದ್ದಾಗ ಅನ್ನ ಮಾಡಿಕೊಂಡು ಹೋಟೆಲ್ನಿಂದ ಸಾಂಬಾರ್ ತೆಗೆದುಕೊಂಡು ಬಂದು ಊಟ ಮಾಡುತ್ತಿದ್ದೆ. ಹಾಗಾಗಿ ಅನ್ನ ಮಾಡೋದು ಮಾತ್ರ ಬರತ್ತೆ ಅಂದಿದ್ದಾರೆ ಸಿದ್ದರಾಮಯ್ಯ.
ನೀವು ಎಲ್ಎಲ್ಬಿ ಓದುವಾಗ ಯಾರನ್ನಾದರೂ ಲವ್ ಮಾಡಿದ್ರಾ? ಎಂದು ನಟಿ ತಾರಿಣಿ ಪ್ರಶ್ನೆ ಕೇಳಿದಾಗ ನಕ್ಕ ಮುಖ್ಯಮಂತ್ರಿ, ಲವ್ ಮಾಡಿದ್ದೆ ಅಂತ ಅಥವಾ ಮಾಡಿಲ್ಲ ಅಂತಲೂ ಉತ್ತರ ಕೊಡದೇ ಎಲ್ಲರ ನಗೆಯೊಡನೆ ತಮ್ಮ ನಗೆಯನ್ನು ಸೇರಿಸಿಬಿಟ್ಟರು.
ಅಂದಹಾಗೆ ಇಡೀ ಕಾರ್ಯಕ್ರಮ ನೊಡಿದವರಿಗೆ ಉತ್ತರ ಸಿಕ್ಕದೇ ಹೋದ ಸಂಗತಿಗಳೆಂದರೆ..
ಸಿದ್ದರಾಮಯ್ಯ ಅವರನ್ನ ಪಾರ್ವತಿ ಸಿದ್ದರಾಮಯ್ಯ ಬೈದಿದ್ದಾರಾ ಇಲ್ವಾ ಅನ್ನೋದು.. ಅಷ್ಟೇ ಅಲ್ಲ ಸಿದ್ದರಾಮಯ್ಯ ಲವ್ ಮಾಡಿದ್ದ ಹುಡುಗಿ ಯಾರು ಅನ್ನೋದು. ಉಳಿದಂತೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನ ತುಂಬಾ ಪ್ರೀತಿ ಮಾಡ್ತಾರೆ.



