ಅಮಿತಾಭ್ ಬಚ್ಚನ್ ಅವರು ಬಾಲಿವುಡ್ಡಿನ ದೊಡ್ಡ ನಟ. ಸೂಪರ್ ಸ್ಟಾರ್. ಸ್ಟಾರ್ ಪಟ್ಟಕ್ಕೇರಿ ಝೀರೋಗೆ ಕುಸಿದು.. ಮತ್ತೆ ಬದುಕು ಕಟ್ಟಿಕೊಂಡ ನಟ, ಒಂದು ಸಮುದಾಯವನ್ನೇ ಎದುರು ಹಾಕಿಕೊಳ್ಳೋ ತಪ್ಪು ಮಾಡ್ತಾರಾ.. ತಪ್ಪು ಮಾಡಿದ್ದರಾ.. ಹೀಗೊಂದು ಪ್ರಶ್ನೆ ಮೂಡಿರುವುದು ದಿಲ್ಜಿತ್ ದೊಸ್ಸಾಂಜ್‌ಗೆ ಹಾಕಿರುವ ಜೀವ ಬೆದರಿಕೆ. ದಿಲ್ಜಿತ್ ದೊಸ್ಸಾಂಜ್ ಮಾಡಿರುವ ತಪ್ಪು ಏನೆಂದರೆ.. ಅಮಿತಾಭ್ ಬಚ್ಚನ್ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿರುವುದು. ಬಚ್ಚನ್ ಅವರ ಕಾಲಿಗೆ ಬಿದ್ದ ಕಾರಣಕ್ಕೆ, ದೊಸ್ಸಾಂಜ್ ಈಗ ಜೀವ ಬೆದರಿಕೆ ಎದುರಿಸುವಂತಾಗಿದೆ.
ಇಷ್ಟಕ್ಕೂ ಹಿರಿಯ ಕಲಾವಿದರಿಗೆ ಕಿರಿಯರು ನಮಸ್ಕರಿಸುವುದರಲ್ಲಿ ವಿಶೇಷ ಏನಿಲ್ಲ. ಅದರಲ್ಲೂ ಕಲಾವಿದರಲ್ಲಿ ಹಿರಿಯರ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದು ಒಂದು ಸಂಪ್ರದಾಯ. ಸಂಗೀತ, ನೃತ್ಯ, ನಟನೆ.. ಹೀಗೆ ಯಾವುದೇ ಕಲಾ ಪ್ರಕಾರ ಇರಲಿ.. ಕಾಲನ್ನು ಮುಟ್ಟಿ ಹಿರಿಯರ ಆಶೀರ್ವಾದ ಪಡೆಯುವುದು ಒಂದು ಪದ್ಧತಿ. ನಂಬಿಕೆ. ಆದರೆ.. ದಿಲ್ಜಿತ್ ದೊಸ್ಸಾಂಜ್ ಅಷ್ಟಕ್ಕೇ ಬೆದರಿಕೆ ಎದುರಿಸುವಂತಾಗಿದೆ.ಈ ದಿಲ್ಜಿತ್ ದೊಸ್ಸಾಂಜ್ ಕಾಂತಾರ ಚಾಪ್ಟರ್ 01 ಚಿತ್ರದ ʻರೆಬಲ್ʼ ಸಾಂಗ್ ಅನ್ನು ಹಿಂದಿಯಲ್ಲಿ ರೆಬಲ್ ಹಾಡಿದ್ದವರು. ಹಿಂದಿಯಲ್ಲಿ ಚಿತ್ರಕ್ಕೊಂದು ಮೈಲೇಜ್ ನೀಡಿದ್ದವರೇ ದಿಲ್ಜೀತ್ ದೊಸ್ಸಾಂಜ್.
ಹಿರಿಯ ನಟರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯೋದ್ರಲ್ಲಿ ತಪ್ಪೇನಿಲ್ಲ. ಇತ್ತೀಚೆಗೆ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ರಿಷಬ್ ಶೆಟ್ಟಿಯವರೂ ಅಮಿತಾಭ್ ಬಚ್ಚನ್ ಅವರಿಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದರು. ರಿಷಬ್ ಅವರಿಗೆ ಆಗದ ತೊಂದರೆ ದಿಲ್ಜೀತ್ ದೊಸ್ಸಾಂಜ್ ಅವರಿಗೆ ಏಕೆ..? ಏಕೆ ಎಂದರೆ.. ದಿಲ್ಜೀತ್ ದೊಸ್ಸಾಂಜ್, ಪಂಜಾಬಿ ಗಾಯಕ. ಸಿಖ್ ಸಮುದಾಯದವರು. ಪಂಜಾಬ್ ಕಾ ಪುತ್ಥರ್ ಎಂದೇ ಪ್ರೀತಿಸಲ್ಪಡುವ ಗಾಯಕ. ತಮ್ಮ ಪ್ರೀತಿಯ ಗಾಯಕ ಬಚ್ಚನ್ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದು ಅಪರಾಧ ಎನ್ನುವುದು ಖಲಿಸ್ತಾನಿ ಸಿಖ್ಖರ್ ಆಕ್ರೋಶಕ್ಕೆ ಕಾರಣ.
ಖಲಿಸ್ತಾನಿ ಸಿಕ್ಕರ ಆಕ್ರೋಶಕ್ಕೆ ಕಾರಣ ಏನು..?
1984ರಲ್ಲಿ ನಡೆದ ಸಿಖ್ ದಂಗೆ ನೆನಪಿದೆ ಅಲ್ಲವೇ.. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅವರ ಬೆಂಗಾವಲು ಪಡೆಯ ಸಿಖ್ ಯೋಧರು ಗುಂಡಿಟ್ಟು ಕೊಂದಿದ್ದರು. ಆಗ ದೇಶಾದ್ಯಂತ ಸಾವಿರಾರು ಸಿಖ್ಖರ ನರಮೇಧವೇ ನಡೆದು ಹೋಗಿತ್ತು. ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ ಆಗಿತ್ತು. ಪುಟ್ಟ ಪುಟ್ಟ ಮಕ್ಕಳನ್ನು ಕತ್ತರಿಸಿ ಕೊಲ್ಲಲಾಗಿತ್ತು. ಸಾವಿರಾರು ಮನೆಗಳನ್ನು ಬೆಂಕಿ ಇಟ್ಟು ಸುಟ್ಟು ಹಾಕಲಾಗಿತ್ತು. ಹಾಗೆ ಸತ್ತ ಸಿಖ್ಖರ ಸಂಖ್ಯೆ ಅಧಿಕೃತ ದಾಖಲೆಗಳ ಪ್ರಕಾರವೇ 30 ಸಾವಿರಕ್ಕೂ ಹೆಚ್ಚು.
ದೊಡ್ಡ ಆಲದ ಮರ ಬಿದ್ದಾಗ ಈ ರೀತಿಯ ಭೂಕಂಪ ಸಹಜ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ. ಆಗ ರಾಜೀವ್ ಗಾಂಧಿ ಅವರಿಗೆ ಅತ್ಯಂತ ಆಪ್ತಮಿತ್ರರಾಗಿದ್ದವರು ಅಮಿತಾಭ್ ಬಚ್ಚನ್. ಆದರೆ ಖಲಿಸ್ತಾನಿಗಳ ವಿರೋಧ ರಾಜೀವ್ ಗಾಂಧಿ ಅವರಿಗೆ, ಬಚ್ಚನ್ ಅತ್ಯಾಪ್ತ ಮಿತ್ರ, ಆಪ್ತಮಿತ್ರ ಎಂಬ ಕಾರಣಕ್ಕೆ ಅಲ್ಲ. ಆಗ ಸಾವಿರಾರು ಮಹಿಳೆಯರ ಅತ್ಯಾಚಾರ, ಪುಟ್ಟ ಮಕ್ಕಳ ಕಗ್ಗೊಲೆ ಆಯಿತಲ್ಲ.. ಆಗ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದ ಡೈಲಾಗ್ ʻʻಖೂನ್ ಕ ಬದ್ಲಾ ಖೂನ್ ಸೇ ಲೆಂಗೆʼʼ (ರಕ್ತ ಹರಿಸಿದವರ ರಕ್ತ ಹರಿಸುತ್ತೇವೆ).
ಬಚ್ಚನ್ ಡೈಲಾಗ್ʻನ್ನು ಕಾಂಗ್ರೆಸ್ ಕಾರ್ಯಕರ್ತರು ಹೇಳಿ ಕೊಲೆ ಮಾಡಿದ್ದಕ್ಕೆ, ವಿಧ್ವಂಸ ಸೃಷ್ಟಿಸಿದ್ದಕ್ಕೆ ಖಲಿಸ್ತಾನಿಗಳಿಗೆ ಬಚ್ಚನ್ ಕಂಡರೆ ಆಗಲ್ಲ. ಬಂದೂಕು ಹಿಡಿದ ಮೂಲಭೂತವಾದಿಗಳಿಗೆ ತಲೆಯಲ್ಲಿ ಮಿದುಳು ಇರೋದಿಲ್ಲ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಅಗತ್ಯ ಇಲ್ಲ.



