ಅಣ್ಣ ಚಿರಂಜೀವಿ ಸರ್ಜಾ (Chiranjeevi Sarja) , ತಮ್ಮ ಧ್ರುವ (Dhruva Sarja) ತಲೆಗೆ ಎಣ್ಣೆ ಹಾಕುತ್ತಿದ್ದರು.
ತಮ್ಮ ಧ್ರುವ ಸರ್ಜಾ(Dhruva Sarja), ಅಣ್ಣನ (Chiranjeevi Sarja) ಬಾಡಿ ಮಸಾಜ್ ಮಾಡುತ್ತಿದ್ದರು.
ಅವರಿಬ್ಬರೂ ಅಣ್ಣ ತಮ್ಮಂದಿರ ಹಾಗೆ ಇರಲಿಲ್ಲ. ಸ್ನೇಹಿತರಂತಿದ್ದರು. ಅಷ್ಟೇ ಅಲ್ಲ, ಅಣ್ಣ ತಮ್ಮ ಎಂದರೆ ಹೇಗಿರಬೇಕು ಅನ್ನೊದಕ್ಕೆ ಉದಾಹರಣೆಯಂತಿದ್ದರು. ಚಿರಂಜೀವಿ ಸರ್ಜಾ (Chiranjeevi Sarja) ಮತ್ತು ಧ್ರುವ ಸರ್ಜಾ(Dhruva Sarja). ಧ್ರುವ ಸರ್ಜಾ (Dhruva Sarja) ಮತ್ತು ಚಿರಂಜೀವಿ ಸರ್ಜಾರ (Chiranjeevi Sarja) ಅವರ ಪತ್ನಿಯರಾದ ಪ್ರೇರಣಾ (Prerana Sarja) ಮತ್ತು ಮೇಘನಾ (Meghana Raj) ಕೂಡಾ ಅಣ್ಣ ತಮ್ಮಂದಿರ ಪ್ರೀತಿಗೆ ತಕ್ಕಂತೆಯೇ ಇದ್ದರು. ಒಬ್ಬರಿಗೊಬ್ಬರ ಆರೈಕೆ, ಒಂದೇ ತಟ್ಟೆಯಲ್ಲಿ ಊಟ, ಆ ನಗು, ತಮಾಷೆ, ಇಡೀ ಕುಟುಂಬದ ಬಾಂಧವ್ಯ.. ಎಲ್ಲವೂ ಖುಷಿ ಕೊಡುವಂತಿತ್ತು. ದಿಢೀರನೇ ಚಿರಂಜೀವಿ ಸರ್ಜಾ (Chiranjeevi Sarja) ಹೃದಯಾಘಾತದಿಂದ ಅಗಲಿದಾಗ, ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು. ಅಣ್ಣನನ್ನು ಕಳೆದುಕೊಂಡ ದು:ಖದಲ್ಲಿ ಇದ್ದರೂ ಕುಟುಂಬಕ್ಕಾಗಿ ಎಲ್ಲರಿಗೂ ಧೈರ್ಯ ತುಂಬಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಅಣ್ಣನ ನೆನಪು ಮರೆತಿಲ್ಲ.
ಚಿರಂಜೀವಿ ಸರ್ಜಾ (Chiranjeevi Sarja) ಸಮಾಧಿ ಕನಕಪುರ ರಸ್ತೆಯ ನೆಲಗುಳಿಯ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿದೆ. ಇಲ್ಲಿ ಧ್ರುವ (Dhruva Sarja) ಅಣ್ಣನಿಗಾಗಿ ಸಮಾಧಿಯನ್ನು ಕಟ್ಟಿಸಿದ್ದಾರೆ. ಆಗಾಗ್ಗೆ ಚಿರು ಸಮಾಧಿಗೆ ಭೇಟಿ ನೀಡುತ್ತಾರೆ. ಮೌನವಾಗಿ ಕೂರುತ್ತಾರೆ. ಒಮ್ಮೊಮ್ಮೆ ಅಲ್ಲಿಯೇ ಹಾಸಿಗೆ ಹಾಸಿಕೊಂಡು ಸಮಾಧಿ ಪಕ್ಕವೇ ಮಲಗಿ ಬಿಡುತ್ತಾರೆ. ಅಣ್ಣನ ಪಕ್ಕದಲ್ಲೇ ಇದ್ದ ಫೀಲಿಂಗ್ ಅನುಭವಿಸುತ್ತಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳೇ ಧ್ರುವ ಸರ್ಜಾಗೆ ಸಾಂತ್ವನ ಹೇಳಿದ್ದಾರೆ. ಈ ಫಾರ್ಮ್ ಹೌಸ್ ಧ್ರುವ ಅವರದ್ದೇ. ಫಾರ್ಮ್ ಹೌಸಿಗೆ ಹೋದಾಗಲೆಲ್ಲ ಸರ್ಜಾ ಮಲಗುವುದು ಸಮಾಧಿ ಪಕ್ಕವೇ. ಧ್ರುವ ಸರ್ಜಾರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳೇ ಭಾವುಕರಾಗಿದ್ದಾರೆ.



