ಧ್ರುವ ಸರ್ಜಾ ಅವರನ್ನು ಇಷ್ಟ ಪಡದ ಮನಸ್ಸುಗಳಿಗೂ ಇಷ್ಟವಾಗುವಂತ ವ್ಯಕ್ತಿತ್ವ ಅವರದ್ದು. ಇತ್ತೀಚೆಗೆ ಧ್ರುವ ಸರ್ಜಾ ಅವರು ತಮ್ಮ ಚಿತ್ರಗಳಿಗೆ ಪುನೀತ್ ಮತ್ತು ಶಿವಣ್ಣ ಕೊಡುತ್ತಿರುವ ಹಾಗೂ ಕೊಟ್ಟಿರುವ ಸಪೋರ್ಟ್ ಹೇಳುವಾಗ ದೊಡ್ಮನೆಗೆ ಬಕೆಟ್ ಹಿಡೀತಾವ್ನೆ ಅಂತಾ ದರ್ಶನ್ ಫ್ಯಾನ್ಸ್ ಹೀಯಾಳಿಸಿದ್ದರು. ಅದಕ್ಕೆಲ್ಲ ಧ್ರುವ ತಲೆ ಕೆಡಿಸಿಕೊಂಡಿರಲಿಲ್ಲ. ಅಂತದ್ದೇ ಪ್ರೀತಿಯನ್ನು ಅವರು ಎಲ್ಲರ ಜೊತೆ ಹೊಂದಿದ್ದಾರೆ ದರ್ಶನ್ ಕೂಡಾ ಅದಕ್ಕೆ ಹೊರತಾಗಿರಲಿಲ್ಲ. ಧ್ರುವ ಸರ್ಜಾ ಮತ್ತು ದರ್ಶನ್ ನಡುವೆ ಸ್ನೇಹ ಪ್ರೀತಿ ಎಲ್ಲವೂ ಇತ್ತು. ಸರ್ಜಾ ಕುಟುಂಬದ ಜೊತೆ ದರ್ಶನ್ ಕೂಡಾ ಚೆನ್ನಾಗಿಯೇ ಇದ್ದರು. ಅರ್ಜುನ್ ಸರ್ಜಾ ತಮ್ಮ ಮಗಳಿಗಾಗಿ ಪ್ರೇಮ ಬರಹ ಚಿತ್ರ ಮಾಡಿದಾಗ ಹಾಡಿನಲ್ಲಿ ಕಾಣಿಸಿಕೊಂಡಿದ್ದರು ದರ್ಶನ್. ಆ ಹಾಡಿನಲ್ಲಿ ಸರ್ಜಾ ಕುಟುಂಬದ ಅರ್ಜುನ್, ಚಿರಂಜೀವಿ ಮತ್ತು ಧ್ರುವ ಅವರ ಜೊತೆ ದರ್ಶನ್ ಇದ್ದರು.
ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರು ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಸರ್ಜಾ ಅವರ ಬಗ್ಗೆ ದರ್ಶನ್ ಮತ್ತು ದರ್ಶನ್ ಅವರ ಅರ್ಜುನ್ ಸರ್ಜಾ ಬಾಯ್ತುಂಬಾ ಹೊಗಳುತ್ತಿದ್ದರು. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿದ್ದರೆ, ಅರ್ಜುನ್ ಸರ್ಜಾ ಕರ್ಣನಾಗಿ ನಟಿಸಿದ್ದರು. ಆಗಲೂ ಕೂಡಾ ಅರ್ಜುನ್, ದರ್ಶನ್ ಬಗ್ಗೆ.. ದರ್ಶನ್ ಅವರು ಅರ್ಜುನ್ ಸರ್ಜಾ ಅವರ ಬಗ್ಗೆ ಪ್ರೀತಿ ಗೌರವದಿಂದ ಮಾತನಾಡಿದ್ದರು. ಅಷ್ಟೇ ಏಕೆ ಚಿರಂಜೀವಿ ಸರ್ಜಾ ಮೃತಪಟ್ಟಾಗ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದರು ದರ್ಶನ್. ಹೀಗಿದ್ದ ಸ್ನೇಹ ಸಂಬಂಧ ಬಾಂಧವ್ಯ ಇತ್ತೀಚೆಗೆ ಹಳಸಿತ್ತು.
ಏಕೆ ಎಂದು ಎಲ್ಲರೂ ತಲೆ ಕೆಡಿಸಿಕೊಳ್ಳುವಂತೆ ಮಾಡಿತ್ತು.
ದರ್ಶನ್, ಅರೆಸ್ಟ್ ಆಗುವುದಕ್ಕೂ ಮುನ್ನವೇ ಎಲ್ಲವೂ ಸರಿ ಇಲ್ಲ ಎನ್ನುವುದು ಗೊತ್ತಾಗಿತ್ತು. ಪ್ರೇಮ ಬರಹ ಚಿತ್ರದ ವಿತರಣೆ ಪಡೆದಿದ್ದ ಮಲ್ಲಿಕಾರ್ಜುನ್, ನಂತರ ದುಡ್ಡಿಗೆ ಮೋಸ ಮಾಡಿದ್ದರು. ಆತ ದರ್ಶನ್ ಅವರ ಪಿಎ ಆಗಿದ್ದ. ಆತ ಏನಾದ.. ಎಲ್ಲಿ ಹೋದ ಅನ್ನೋದು ಇವತ್ತಿಗೂ ಗೊತ್ತಿಲ್ಲ. ಸರ್ಜಾ ಅವರಿಗೆ ಕೋಟಿ ಕೋಟಿ ನಷ್ಟವಾಗಿತ್ತು. ಈ ವಿಷಯಕ್ಕೆ ಸಂಬಂಧ ಹಳಸಿತಾ..? ಗೊತ್ತಿಲ್ಲ. ಆದರೆ ಆ ಹಣದ ಬಗ್ಗೆ ಕೇಳಿದಾಗ ದರ್ಶನ್ ಅವರು ಅರ್ಜುನ್ ಸರ್ಜಾ ಅವರನ್ನು ಏಕವಚನದಲ್ಲಿ ಮಾತನಾಡಿಸಿದರಂತೆ. ಧ್ರುವ ಸರ್ಜಾ ತಮ್ಮ ತಂದೆಗಿಂತಲೂ ಹೆಚ್ಚು ಗೌರವ ಕೊಡುವ ವ್ಯಕ್ತಿ ಅರ್ಜುನ್ ಸರ್ಜಾ. ಹೀಗಾಗಿ ಯಾವಾಗ ಅರ್ಜುನ್ ಸರ್ಜಾ ಅವರ ಏಕವಚನದಲ್ಲಿ ಬೈದರು ಎಂದು ಗೊತ್ತಾಯಿತೋ.. ಆಗ ಧ್ರುವ ಸರ್ಜಾ ತಿರುಗಿಬಿದ್ದರಂತೆ. ಆದರೆ ಅದನ್ನು ಧ್ರುವ ಬಹಿರಂಗವಾಗಿ ಹೇಳಿಕೊಂಡಿಲ್ಲ.
ದರ್ಶನ್ ಅವರು ಹೊರಗೆ ಇದ್ದಾಗಲೂ ಕೂಡಾ ʻʻಅವರ ಬಳಿ ಒಂದು ವಿಷಯಕ್ಕೆ ಕ್ಲಾರಿಫಿಕೇಷನ್ ಬೇಕಿದೆ, ಆಮೇಲೆ ಮಾತನಾಡ್ತೇನೆʼʼ ಎಂದಿದ್ದ ಧ್ರುವ ಸರ್ಜಾ, ದರ್ಶನ್ ಹುಟ್ಟುಹಬ್ಬಕ್ಕೆ ವಿಷ್ ಕೂಡಾ ಮಾಡಿರಲಿಲ್ಲ. ಒಟ್ಟಿನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹೇಳಿದ್ದ ಧ್ರುವ ಸರ್ಜಾ, ದರ್ಶನ್ ಕೊಲೆ ಕೇಸಿನಲ್ಲಿ ಅರೆಸ್ಟ್ ಆದಾಗ ಇದೂ ಒಂದು ಬೆಳವಣಿಗೇನಾ ಎಂದಿದ್ದರು. ಇದೀಗ ಮಾರ್ಟಿನ್ ರಿಲೀಸ್ ಆಗ್ತಿದೆ. ಇಷ್ಟಕ್ಕೂ ನಿಮ್ಮ ಮತ್ತು ದರ್ಶನ್ ಮಧ್ಯೆ ಏನಾಯ್ತು ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿರೋ ಧ್ರುವ ಮನಸ್ತಾಪ ಏನು ಎಂಬುದನ್ನು ಬಹಿರಂಗ ಮಾಡುವುದಾಗಿದ್ದರೆ ಎಂದೋ ಮಾಡಿರುತ್ತಿದ್ದೆ. ಇದು ಸರಿ ಹೋಗಬಹುದು, ಹೋಗದೆಯೋ ಇರಬಹುದು. ಅದು ನಮಗೆ ಬಿಟ್ಟಿದ್ದು. ಆದರೆ ನಾನು ಏನನ್ನೂ ರಿವೀಲ್ ಮಾಡಲ್ಲ. ರಿವೀಲ್ ಮಾಡಿದರೆ ಬಿಟ್ಟುಕೊಟ್ಟಂತೆ ಆಗುತ್ತದೆ. ಆ ಕೆಟಗೆರಿಯವನು ನಾನಲ್ಲ. ಆದರೆ ಎಲ್ಲರೂ ನೋಡುತ್ತಾರೆ ಅಂತ ಆರ್ಟಿಫಿಶಿಯಲ್ ಆಗಿಯೂ ನಾನು ಇರಲ್ಲ. ನಾನು ನಿಮ್ಮಂತೆಯೇ. ಎರಡರ ಮಧ್ಯೆ ಇರೋಕೆ ನನಗೆ ಬರಲ್ಲ’ ಎಂದು ಉತ್ತರ ಕೊಟ್ಟಿದ್ದಾರೆ.
ಹಾಗಾದರೆ ಇವರ ನಡುವೆ ಏನಾಯ್ತು ಅನ್ನೋದನ್ನ ಹೇಳೋದು ಯಾರು..? ಅರ್ಜುನ್ ಸರ್ಜಾ ಹೇಳಬೇಕಾ..? ಪತ್ನಿಯಂತೂ ಹೊರಗೆ ಮಾಧ್ಯಮದವರ ಜೊತೆ ಮಾತನಾಡಲ್ಲ. ಅತ್ತಿಗೆ ಮೇಘನಾ ರಾಜ್ ಹೇಳಬೇಕಾ..? ಅಥವಾ ದರ್ಶನ್ ಅವರೇ ಹೇಳಬೇಕಾ..? ಗೊತ್ತಿಲ್ಲ.



