ಯಾವುದೇ ಅಪ್ಪನಿಗೆ ಮಗಳು ಹುಟ್ಟಿದರೆ ಡೌಟೇ ಇಲ್ಲದಂತೆ ಹೆಂಡತಿ 2ನೇ ಸ್ಥಾನಕ್ಕೆ ಹೋಗುತ್ತಾಳೆ. ಅಪ್ಪಂದಿರ ಪಾಲಿಗೆ ಮಗಳೇ ಮಹಾರಾಣಿ. ಅದಕ್ಕೆ ಧ್ರುವ ಸರ್ಜಾ ಕೂಡಾ ಹೊರತಲ್ಲ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ತಾನೇ ಮಕ್ಕಳ ನಾಮಕರಣ ಮಾಡಿದ್ದರು. ದೊಡ್ಡವಳು ಮಗಳು. ಹೆಸರು ರುದ್ರಾಕ್ಷಿ. ಚಿಕ್ಕವನು ಹಯಗ್ರೀವ. ರುದ್ರಾಕ್ಷಿ ಸ್ವಲ್ಪ ದೊಡ್ಡವಳಾಗಿದ್ಧಾಳೆ. ಆ ಮಗುವಿನ ಜೊತೆ ಧ್ರುವ ಸರ್ಜಾ ರೀಲ್ಸ್ ಮಾಡಿದ್ದಾರೆ. ರುದ್ರಾಕ್ಷಿ ಸಖತ್ ಕ್ಯೂಟ್ ಆಗಿ ಕಾಣ್ತಾಳೆ.
ಮುದ್ದು ಮುದ್ದಾಗಿರುವ ಪುಟಾಣಿ ರುದ್ರಾಕ್ಷಿ ಅಪ್ಪನನ್ನು ನೋಡಿ ನಗುತ್ತಿದ್ದರೆ, ಒಂದ್ ಹುಡುಗೀ ಪ್ರಪಂಚದಲ್ಲಿ, ಬೇರೆ ಹುಡುಗಿಯರು ಇದ್ದಾರೆ ಅನ್ನೋದನ್ನೇ ಮರೆಸಿಬಿಟ್ಟಿದ್ದಾಳೆ ಎನ್ನುವ ಧ್ರುವ ಅವರು ಮಗಳನ್ನು ಎತ್ತಿ ಮುದ್ದಾಡುತ್ತಾರೆ.
ಧ್ರುವ ಸರ್ಜಾ ಅವರ ಈ ಮುದ್ದು ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ಧಾರೆ. ಜೊತೆಗೆ ಮಗಳ ಜೊತೆ ಇರೋ ಖುಷಿಯಲ್ಲಿ ಪ್ರೇರಣಾ ಅವರನ್ನು ಮರೆಯಬೇಡಿ ಎಂದೂ ಕಿಚಾಯಿಸಿದ್ಧಾರೆ. ಧ್ರುವ ಮತ್ತು ಪ್ರೇರಣಾ ಅವರದ್ದು ಲವ್ ಮ್ಯಾರೇಜ್.
ಆದರೆ.. ಅದೆಂತಹ ಲವ್ ಮ್ಯಾರೇಜ್ ಅದರೂ.. ಮಗಳು ಬಂದರೆ.. ಪ್ರೀತಿಯಲ್ಲಿ ದೊಡ್ಡ ಪಾಲು ಮಗಳಿಗೆ ಹೋಗುತ್ತೆ. ಅಫ್ʻಕೋರ್ಸ್.. ಮಗಳನ್ನು ಪ್ರೀತಿಸುವ ಅಪ್ಪ ಯಾವ ತಾಯಿಗೆ ಇಷ್ಟವಾಗೋಲ್ಲ..
ಅಂದಹಾಗೆ ಇದರ ನಡುವೆಯೇ ಧ್ರುವ ಸರ್ಜಾ ಮಾರ್ಟಿನ್ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರಕ್ಕೆ ಉದಯ್ ಕೆ ಮೆಹ್ತಾ ನಿರ್ಮಾಪಕ. ಮಾರ್ಟಿನ್ ಒಂದು ರೀತಿಯಲ್ಲಿ ಗಜಪ್ರಸವದಂತೆಯೇ ಆಗ್ತಾ ಇದೆ. ಇದರ ನಡುವೆ ಧ್ರುವ ಕೆಡಿ ಚಿತ್ರವನ್ನು ಒಪ್ಪಿಕೊಂಡಿದ್ಧಾರೆ.
ಅಂದಹಾಗೆ ಪೊಗರು ಚಿತ್ರ ರಿಲೀಸ್ ಆದಾಗ ಇದೇ ದೊಡ್ಡ ಮಗಳು ರುದ್ರಾಕ್ಷಿ ಇನ್ನೂ ಹುಟ್ಟಿರಲಿಲ್ಲ. ಆದರೆ.. ಪೊಗರು ರಿಲೀಸ್ ಆಗಿ ಮಾರ್ಟಿನ್ ರಿಲೀಸ್ ಆಗೋದ್ರ ಒಳಗೆ ಇನ್ನೂ ಧ್ರುವ ಸರ್ಜಾ ಎರಡು ಮಕ್ಕಳ ತಂದೆಯಾಗಿದ್ಧಾರೆ. ಆದರೆ.. ಇನ್ನೂ ಕೂಡಾ 5ನೇ ಸಿನಿಮಾ ರಿಲೀಸ್ ಆಗಿಲ್ಲ. ಫ್ಯಾನ್ಸ್ ಅಂತೂ ಚಾತಕಪಕ್ಷಿಗಳಂತೆ ಕಾಯುತ್ತಿದ್ಧಾರೆ.



