ಧ್ರುವ ಸರ್ಜಾ ವೃತ್ತಿ ಬದುಕಿನ ಮಹತ್ವದ ಸಿನಿಮಾ. ಧ್ರುವ ಸರ್ಜಾರ ಹಿಂದಿನ ಪೊಗರು ಮತ್ತು ಮಾರ್ಟಿನ್ ಎರಡೂ ಚಿತ್ರಗಳು ಸೂಪರ್ ಫ್ಲಾಪ್ ಆಗಿರುವ ಕಾರಣ.. ಈ ಚಿತ್ರದ ಮೇಲೆ ಭಯಂಕರ ನಿರೀಕ್ಷೆ ಇದೆ. ಜೋಗಿ ಪ್ರೇಮ್ ನಿರ್ದೇಶನವಿದೆ. ಇನ್ನು ಈ ಚಿತ್ರದಲ್ಲಿರುವ ಸ್ಟಾರ್ ನಟರ ಲಿಸ್ಟ್ ಮಾಡಿದರೆ.. ಅದೇ ಒಂದು ದೊಡ್ಡ ಪಟ್ಟಿಯಾಗುತ್ತದೆ.
ಹೀರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಹೀರೋಯಿನ್ ರೀಷ್ಮಾ ನಾಣಯ್ಯ. ನಾಯಕ ಕಾಳಿದಾಸನ ಪಾತ್ರದಲ್ಲಿದ್ರೆ, ನಾಯಕಿಯಾಗಿರುವ ರೀಷ್ಮಾ ಮಚ್ ಮಹಾಲಕ್ಷ್ಮಿ ಪಾತ್ರದಲ್ಲಿದ್ದಾರೆ. ಅಣ್ಣಯ್ಯಪ್ಪನಾಗಿ ರವಿಚಂದ್ರನ್, ಧರ್ಮನಾಗಿ ರಮೇಶ್ ಅರವಿಂದ್, ವಿಶಾಲ್ ಅಗ್ನಿಹೋತ್ರಿ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಪೂನಂ ಜಲ್ವಾರ್, ನೋರಾ ಫತೇಹಿ ಕೂಡಾ ನಟಿಸಿದ್ದಾರೆ. ಇವರೆಲ್ಲರ ಮಧ್ಯೆ ಸಡನ್ ಆಗಿ ಕಿಚ್ಚ ಸುದೀಪ್ ಕೂಡಾ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಬಂದಿದೆ.
ಹೌದು, ಮೂಲಗಳ ಪ್ರಕಾರ ಬಂದಿರೋ ಸುದ್ದಿ ನಿಜ. ಸುದೀಪ್ ಅವರೇ.. ಸುದ್ದಿ ಖಚಿತಾನಾ ಅಂದ್ರೆ.. ಜೋಗಿ ಪ್ರೇಮ್ ಅವರನ್ನೇ ಕೇಳಿ ಅನ್ನೋ ಉತ್ತರ ಸಿಕ್ಕಿದೆ.. ಸುದೀಪ್ ಅವರಿಂದ. ಅಲ್ಲಿಗೆ ಜೋಗಿ ಪ್ರೇಮ್ ಮತ್ತೊಮ್ಮೆ ಸೆನ್ಸೇಷನ್ ಸೃಷ್ಟಿಸೋದು ಪಕ್ಕಾ.
ಕಿಚ್ಚ ಸುದೀಪ್ ಒಂದು ವಿಚಾರವನ್ನ ಯಾವಾಗಲೂ ಮೆಂಟೇನ್ ಮಾಡ್ತಾರೆ. ಒಂದು ಪ್ರೆಸ್ ಮೀಟ್ ಅಲ್ಲಿ ಆ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಯನ್ನ ಮಾತ್ರ ಕೇಳಿ ಅಂತಲೇ ಹೇಳ್ತಾರೆ. ಬೇರೆ ವಿಷಯವನ್ನ ಕೇಳಿದ್ರೆ ಅದಕ್ಕೆ ಉತ್ತರ ಕೊಡೋದಿಲ್ಲ ಅಂತಲ್ಲ. ಆ ಒಂದು ಸಿನಿಮಾದ ಪ್ರಶ್ನೆ ಇಲ್ಲಿ ಯಾಕೆ ಅಂತ ಹೇಳಿ ತಮ್ಮ ಉತ್ತರವನ್ನ ಹೇಳಿ ಮುಗಿಸ್ತಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ರಿಲೀಸ್ ಆಗುತ್ತಿರುವ ಹಾಡುಗಳು ಹಿಟ್ ಆಗಿವೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿಯೇ ಬರುತ್ತಿದೆ. ಪ್ಲಾನ್ ಪ್ರಕಾರವೇ ಎಲ್ಲ ಕೆಲಸಗಳೂ ನಡೆದಿದ್ದರೆ, ಇಷ್ಟು ಹೊತ್ತಿಗೆ ಸಿನಿಮಾ ರಿಲೀಸ್ ಆಗಿ ಯಾವುದೋ ಕಾಲವಾಗಿರುತ್ತಿತ್ತು. ಸದ್ಯಕ್ಕಿನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲೇ ಇದೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಎರಡು ಭಿನ್ನ ದಿನಾಂಕಗಳನ್ನು ಡಿಕ್ಲೇರ್ ಮಾಡಿದೆ.
ಕೆಡಿ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಟೀಸರ್ ಜುಲೈ 10 ರಂದು ಮುಂಬೈನಲ್ಲಿ ಬಿಡುಗಡೆ ಆಗಲಿದೆ. ಮುಂಬೈನಲ್ಲಿ ಇದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜನೆ ಮಾಡಿದೆ. ‘ಮುಂಬೈ ರೆಡ್ ಅಲರ್ಟ್’ ಹೆಸರಿನಲ್ಲಿ ಇದಕ್ಕಾಗಿ ವಿಶೇಷ ಪೋಸ್ಟರ್ಗಳನ್ನು ರೆಡಿ ಮಾಡಿ ಪ್ರಚಾರ ಮಾಡಿದೆ ಚಿತ್ರತಂಡ.
ಇನ್ನು ಜುಲೈ 12 ರಂದು ಬೆಂಗಳೂರಿನಲ್ಲಿ ‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿಶೇಷವಾಗಿ ಕನ್ನಡ ಟೀಸರ್ ಬಿಡುಗಡೆ ಆಗಲಿದೆ.
ಕೆಡಿ ಚಿತ್ರದಲ್ಲಿ ಶಿವಣ್ಣ ಅವರಿಗೆ ಪ್ರಮುಖ ಪಾತ್ರ ನೀಡಲಾಗಿತ್ತು. ಆದರೆ, ಅನಾರೋಗ್ಯ, ಆಪರೇಷನ್ ಹಿನ್ನೆಲೆಯಲ್ಲಿ ಶಿವಣ್ಣ ಚಿತ್ರದಿಂದ ಹಿಂದೆ ಸರಿದರು. ಆ ಪಾತ್ರವನ್ನೇ ಈಗ ಸುದೀಪ್ ಮಾಡಲಿದ್ದಾರೆ ಅನ್ನೋ ಸುದ್ದಿ ಇದೆ.



