ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ಬಂದು ೩ ವರ್ಷಗಳೇ ಕಳೆದು ಹೋಗಿದೆ. ಪೊಗರು ನಂತರ ಧ್ರುವ ಸರ್ಜಾ ಅವರ ಪೊಗರು ಬಂದಿದ್ದು ೨೦೨೧ರ ಫೆಬ್ರವರಿಯಲ್ಲಿ. ಅದಾದ ಮೇಲೆ ಮಾರ್ಟಿನ್ ಶುರುವಾಯಿತಾದರೂ, ಇನ್ನೂ ರಿಲೀಸ್ ಆಗಿಲ್ಲ. ಕೆಡಿ ಚಿತ್ರ ಕೂಡಾ ಇನ್ನೂ ಪ್ರೊಡಕ್ಷನ್ ಹಂತದಲ್ಲಿದೆ. ಅಭಿಮಾನಿಗಳಿಗೆ ಧ್ರುವ ಸರ್ಜಾ ಡೈಲಾಗುಗಳನ್ನು ವೇದಿಕೆಗಳ ಮೇಲೆ ಕೇಳಿಯೇ ಖುಷಿ ಪಡಬೇಕು. ಹೀಗಿರುವಾಗಲೇ.. ಒಂದು ಡೈಲಾಗ್ ಹೊಡೆದಿದ್ದಾರೆ ಧ್ರುವ.
ನನ್ನ ಹೊಡಿಬೇಕು ಅಂತ ಮಚ್ಚು ತಟ್ಟೋರಿಗೆಲ್ಲ ಕೆಲ್ಸ ಕೊಟ್ಟವ್ರೆ.. ಆದರೆ, ನಾನ್ ಒಂದ್ ಸಲ ಮಚ್ಚ್ ಹಿಡುದ್ರೆ ಈ ಊರಲ್ಲಿ ಹೆಣ ಸುಡೋರೆಲ್ಲಾ ಬ್ಯೂಸಿ ಆಗೋಗ್ತಾರೆ ಅಣ್ಣಾ…
ಇದು ಧ್ರುವ ಸರ್ಜಾ ಹೊಡೆದಿರೋ ಡೈಲಾಗ್. ಡೈಲಾಗ್ ಹೊಡೆದಿರೋದು ಕೋಲಾರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ. ಅಭಿಮಾನಿಗಳಿಗಳು ಅಷ್ಟಕ್ಕೇ ಥ್ರಿಲ್ಲಾಗಿದ್ದಾರೆ. ಇದು ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಕೆಡಿ ಚಿತ್ರದ ಮಾಸ್ ಡೈಲಾಗ್.
ಇನ್ನು ಧ್ರುವ ನಟಿಸುತ್ತಿರುವ ಮಾರ್ಟಿನ್ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಯಾವ ಹಂತಕ್ಕೆ ಬಂದಿದೆ ಎನ್ನುವುದು ಇನ್ನೂ ಗೊತ್ತಾಗಬೇಕಿದೆ. ೨೦೨೪ರಲ್ಲಾದರೂ ಧ್ರುವ ಸರ್ಜಾರ ಸಿನಿಮಾ ಥಿಯೇಟರಿಗೆ ಬರುತ್ತಾ.. ಅಥವಾ.. ಇಂತಹ ಕಾರ್ಯಕ್ರಮಗಳಲ್ಲಿ ಡೈಲಾಗ್ ಕೇಳ್ಕೊಂಡೇ ಖುಷಿ ಪಡ್ಬೇಕಾ ಅನ್ನೋದು ಅಭಿಮಾನಿಗಳ ಮಾತು.



