ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಸಂಥಿಂಗ್ ಈಸ್ ರಾಂಗ್ ಎನ್ನುವ ಮಾತು ಇಡೀ ಗಾಂಧಿ ನಗರಕ್ಕೆ ಗೊತ್ತು. ಒಂದು ಕಾಲದಲ್ಲಿ ದರ್ಶನ್ ಚಿತ್ರರಂಗದ ಎಲ್ಲರ ಜೊತೆ ಚೆನ್ನಾಗಿಯೇ ಇದ್ದರು. ಸರ್ಜಾ ಕುಟುಂಬದ ಜೊತೆಯಲ್ಲೂ ಚೆನ್ನಾಗಿದ್ದರು.
ದರ್ಶನ್ ಅವರ ಯಜಮಾನ ಚಿತ್ರದ ಹಾಡೊಂದರಲ್ಲಿ ಚಿರಂಜೀವಿ ಸರ್ಜಾ ಬಂದು ಹೋಗಿದ್ದರು. ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಅವರ ಸಿನಿಮಾದಲ್ಲಿ ಸರ್ಜಾ ಕುಟುಂಬದವರ ಜೊತೆ ದರ್ಶನ್ ಕೂಡಾ ಕುಣಿದಿದ್ದರು. ಆದರೆ.. ಅದೇ ಪ್ರೇಮ ಬರಹ.. ಸಿನಿಮಾ ಎರಡೂ ಕುಟುಂದವರ ಬಿರುಕಿಗೆ ಕಾರಣವಾಯ್ತಾ..?
ದರ್ಶನ್ & ಗ್ಯಾಂಗ್ ಜೈಲು ಸೇರಿದ ನಂತರ ನಟ ಧ್ರುವ ಸರ್ಜಾ ಅವರಿಗೂ ದರ್ಶನ್ & ಗ್ಯಾಂಗ್ ಕೊಲೆ ಕೇಸಿನ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯ ಏನು..? ಅನ್ನೋ ಪ್ರಶ್ನೆ ಎದುರಾಗಿತ್ತು. ಆಗ ಇದನ್ನ ಬೆಳವಣಿಗೆ ಅಂತಾರಾ ಎಂದು ಪ್ರಶ್ನೆ ಮಾಡಿದ್ದ ಧ್ರುವ ಸರ್ಜಾ ಇದೀಗ ದರ್ಶನ್ ವಿಷಯದಲ್ಲಿ ಮೃದುವಾದಂತೆ ಕಾಣುತ್ತಿದೆ.
ಆಳಿಗೊಂದು ಕಲ್ಲು ಎಂಬಂತೆ ನಾವು ಕಲ್ಲು ಹೊಡೆಯಬಾರದು. ಯಾರೋ ಒಬ್ಬರು ನೋವಲ್ಲಿದ್ದಾರೆ. ಯಾರೋ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ನಂದು ಒಂದಿರಲಿ ಅಂತ ನಾನೇನೇನೋ ಮಾತನಾಡಲ್ಲ ಎಂದಿದ್ದಾರೆ.
ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ.. ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ ಎಂದಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ನಿರ್ಧಾರವಾಗಲಿ.. ನಾವು ಏನೇನೋ ಮಾತನಾಡುವುದು ಬೇಡ ಅಂದಿದ್ದಾರೆ. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು ಎಂದು ಕೂಡ ಹೇಳಿದ್ದಾರೆ ಧ್ರುವ ಸರ್ಜಾ.
ದರ್ಶನ್ ಮತ್ತು ಸರ್ಜಾ ಕುಟುಂಬದ ಮಧ್ಯೆ ಈಗ ಎಲ್ಲವೂ ಸರಿ ಇಲ್ಲ. ಒಂದು ಕಾಲದಲ್ಲಿ ಎರಡೂ ಕುಟುಂಬ ಒಂದೇ ಎಂಬಂತಿದ್ದ ವಾತಾವರಣ ಈಗ ಹದಗೆಟ್ಟಿದೆ. ಅದು ಕಾವೇರಿ ಹೋರಾಟದಲ್ಲಿ ಇಬ್ಬರೂ ಮುಖಾಮುಖಿಯಾಗಿದ್ಧಾಗ ಬಹಿರಂಗವಾಗಿಯೂ ಕಾಣಿಸಿಕೊಂಡಿತ್ತು.
ಅಲ್ಲದೆ ದರ್ಶನ್ ಅವರು ಅರ್ಜುನ್ ಸರ್ಜಾ ಅವರ ಬಗ್ಗೆ ಆಡಿದ್ದಾರೆ ಎನ್ನಲಾಗಿರುವ ಮಾತು ಧ್ರುವ ಸರ್ಜಾ ಅವರ ಆಕ್ರೋಶಕ್ಕೆ ಕಾರಣವಾಗಿದೆಯಂತೆ. ಅರ್ಜುನ್ ಸರ್ಜಾ ಅವರನ್ನು ತಂದೆಯಂತೆಯೇ ಗೌರವಿಸುವ ಧ್ರುವ, ಈ ವಿಷಯದಲ್ಲಿಯೇ ಕೆಂಡಾಮಂಡಲವಾಗಿದ್ದಾರೆ ಎನ್ನಲಾಗಿದೆ. ಪ್ರೇಮ ಬರಹ ಚಿತ್ರದ ವಿತರಣೆ ಹಕ್ಕು ಪಡೆದಿದ್ದ ವ್ಯಕ್ತಿ ಮಲ್ಲಿಕಾರ್ಜುನ್. ಆತ ದರ್ಶನ್ ಅವರ ಆಪ್ತರ ಬಳಗದಲ್ಲಿದ್ದ. ಈಗ ಸುಮಾರು ೭ ವರ್ಷಗಳಿಂದ ನಾಪತ್ತೆಯಾಗಿದ್ದಾನೆ. ಅತ್ತ ಆತ ಅರ್ಜುನ್ ಸರ್ಜಾಗೆ ಹಣವನ್ನೂ ಕೊಟ್ಟಿಲ್ಲ. ಅರ್ಜುನ್, ವಿತರಣೆ ಹಕ್ಕು ಕೊಟ್ಟಿದ್ದು ಮಲ್ಲಿಕಾರ್ಜುನ್ ಮುಖ ನೋಡಿ ಅಲ್ಲ, ದರ್ಶನ್ ಮುಖ ನೋಡಿ. ಆದರೆ.. ಯಾವಾಗ ಮಲ್ಲಿಕಾರ್ಜುನ್ ನಾಪತ್ತೆಯಾದನೋ.. ದರ್ಶನ್ ವರಸೆ ಬದಲಾಗಿದೆ. ಹಿರಿಯ ನಟ ಸರ್ಜಾ ಅವರಿಗೂ ಏಕವಚನದಲ್ಲ್ಲಿ ಮಾತನಾಡಿದ್ದಾರಂತೆ. ಇದು ಅರ್ಜುನ್ ಸರ್ಜಾ ಅವರಿಗೆ ತಂದೆಗಿಂತ ಹೆಚ್ಚಿ ಗೌರವ ಕೊಡುವ ಧ್ರುವ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ಅಲ್ಲದೆ ದರ್ಶನ್ ಅವರನ್ನು ಡಿ ಬಾಸ್ ಎಂದು ಕರೆಯುತ್ತಾರ್. ಧ್ರುವ ಸರ್ಜಾ ಅವರ ಮೊದಲ ಅಕ್ಷರವೂ ಡಿ. ಹೀಗಾಗಿ ಅವರನ್ನೂ ಅವರ ಅಭಿಮಾನಿಗಳು ಡಿ ಬಾಸ್ ಎಂದು ಕರೆಯುತ್ತಾರೆ. ಆದರೆ.. ಇದಕ್ಕೆ ದರ್ಶನ್ ಅಭಿಮಾನಿಗಳು ವಿರೋಧಿಸುತ್ತಾರೆ. ಇದೂ ಕೂಡಾ ಇನ್ನೊಂದು ಕಾರಣ ಎನ್ನಲಾಗಿದೆ.
ಇತ್ತೀಚೆಗೆ ದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲೂ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದಿದ್ದರು. ದರ್ಶನ್ ಕಥೆ ಗೊತ್ತಿಲ್ಲ. ಧ್ರುವ ಆಡಿದ್ದ ಈ ಮಾತು ದರ್ಶನ್ ಅಭಿಮಾನಿಗಳನ್ನ ಕೆರಳಿಸಿತ್ತು. ಅಲ್ಲಿಂದ ಎರಡು ಬಣದ ನಡುವೆ ಸಮರ ಶುರುವಾಗಿತ್ತು.
ಈಗ ಧ್ರುವ ಸರ್ಜಾ ಅವರೇನೋ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆದರೆ.. ಈ ಹೇಳಿಕೆ ಇಬ್ಬರೂ ನಟರು ಹಾಗೂ ನಟರ ನಡುವಿನ ಅಭಿಮಾನಿಗಳನ್ನು ಕೂಲ್ ಮಾಡುತ್ತಾ.. ಕಾಲ ಉತ್ತರ ಹೇಳಬೇಕಷ್ಟೇ.



