ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಎಂದು ಕೋರ್ಟು, ಪೊಲೀಸರ ಎದುರು ಹೇಳಿರುವ ಅನಾಮಿಕ ವ್ಯಕ್ತಿಯನ್ನು ʻಧರ್ಮಸ್ಥಳದ ವಿರೋಧಿʼ ಪಡೆ ಭೀಮ ಎಂದು ಹೆಸರಿಟ್ಟು ಕರೆಯುತ್ತಿದೆ. ಉಳಿದವರಿಗೆ ಆತ ಯಾರು ಗೊತ್ತಿಲ್ಲ. ಮಾಧ್ಯಮಗಳ ಎದುರು ಬಂದಾಗಲೂ ಕೂಡಾ ಮುಖಕ್ಕೆ ಮಾತ್ರ ಅಲ್ಲ, ಇಡೀ ದೇಹಕ್ಕೆ ಮಾಸ್ಕ್ ಹಾಕಿಕೊಂಡು ಬರುವ ಮಾಸ್ಕ್ ಮ್ಯಾನ್.. ಹೊರ ಜಗತ್ತಿಗೆ ಕಾಣಿಸುವುದು ಕಣ್ಣು ಮತ್ತು ಮೂಗುಗಳಲ್ಲಿ ಮಾತ್ರ. ಅಷ್ಟರಮಟ್ಟಿಗೆ ಮಾಸ್ಕ್ ಮ್ಯಾನ್ ಹಿಡನ್ ಮ್ಯಾನ್.
ಹೀಗಿರುವಾಗಲೇ ಮಾಸ್ಕ್ ಮ್ಯಾನ್ ಯಾರು ಎಂಬ ಬಗ್ಗೆ ಒಂದೊಂದೇ ವಿಷಯ ಬಹಿರಂಗವಾಗ್ತಿದೆ.
ಒಂದು ಮೂಲದ ಪ್ರಕಾರ ಮಾಸ್ಕ್ ಮ್ಯಾನ್ ಚಾಮರಾಜನಗರದ ಚಿನ್ನಯ್ಯ ಎಂಬ ವ್ಯಕ್ತಿ. ಆತ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಸೌಜನ್ಯ ಅವರ ರಿಲೇಟಿವ್ ಎಂಬುದು ಒಂದು ಕಥೆ.
ಇನ್ನೊಂದು ವಿಷಯ ಇದೆ. ಆತನ ಹೆಸರು ವಿಸಲ್ ಬ್ಲೋವರ್. ಕ್ರಿಶ್ಚಿಯನ್ ಎಂಬ ವಾದ ಇದೆ. ಯಾವನೋ ತರಲೆಗೋ.. ತಮಾಷೆಗೋ.. ಹಾಕಿದ್ದ ಪೋಸ್ಟನ್ನೇ ನಿಜ ಎಂದು ಕೆಲವು ಬುದ್ದಿಗೇಡಿಗಳು ನಂಬಿಕೊಂಡಿದ್ಧಾರೆ. ವಿಸಲ್ ಬ್ಲೋವರ್ ಅಂದ್ರೆ.. ಅಡಗಿದ್ದ ಸುದ್ದಿಯನ್ನ ಹೊರ ಹಾಕುವವನು ಎಂದರ್ಥವೇ ಹೊರತು, ಅದು ಹೆಸರಲ್ಲ. ಅಷ್ಟೂ ಅರ್ಥವಾಗದ ಅವಿವೇಕಿಗಳು ಎರಡೂ ಕಡೆಯೂ ಇದ್ದಾರೆ. ಇನ್ನೊಂದು ಮೂಲದ ಪ್ರಕಾರ ಆತ ಮುಸ್ಲಿಂ ಎಂಬ ವಾದ ಇದೆ.
ಇನ್ನು ಧರ್ಮಸ್ಥಳದ ವಿರುದ್ಧ ನಿರಂತರವಾಗಿ ನಡೀತಿರೋ ಹೋರಾಟದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕಮ್ಯುನಿಸ್ಟರು ವಿಶೇಷ ಮುತುವರ್ಜಿ, ಆಸಕ್ತಿ ತೋರಿಸ್ತಾ ಇರೋದೂ ಕೂಡಾ ಇದಕ್ಕೆ ಕಾರಣ.
ಇನ್ನು ಧರ್ಮಸ್ಥಳದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವ ಗೌಡ ಅವರ ಪ್ರಕಾರ.. ಈಗ ಹೆಣಗಳ ಕಥೆ ಹೇಳ್ತಿರೋ ಅನಾಮಿಕ ವ್ಯಕ್ತಿ ಅವರಿಗೆ ಗೊತ್ತಾಗಿದೆ. ಅವನೊಬ್ಬ ಕಳ್ಳ, ಧರ್ಮಸ್ಥಳದಲ್ಲಿ ಯಾರಾದರೂ ಮೃತಪಟ್ಟಾಗ.. ಸಂಸ್ಕಾರ ಮಾಡುವಾಗ ಹೆಣಗಳ ಮೇಲಿನ ಬೆಳ್ಳಿ, ಬಂಗಾರ ಕದಿಯುತ್ತಿದ್ದ. ಅದಕ್ಕಾಗಿಯೇ ಅವನನ್ನ 2014ರಲ್ಲಿ ಕೆಲಸದಿಂದ ತೆಗೆಯಲಾಗಿತ್ತು ಅಂತಾ ಹೇಳಿದ್ದಾರೆ.
ಅವರ ಪ್ರಕಾರ ಈಗ ಹೆಣ ಸಿಗುತ್ತಿರುವ ಜಾಗದಲ್ಲಿ ಅಧಿಕೃತವಾಗಿಯೇ ಪಂಚಾಯ್ತಿ ವತಿಯಿಂದ ಹಲವು ಶವಗಳ ಸಂಸ್ಕಾರ ಆಗಿದೆ. 2005ರವರೆಗೂ ಧರ್ಮಸ್ಥಳದಲ್ಲಿ ಸ್ಮಶಾನ ಇರಲಿಲ್ಲ. ಎಲ್ಲವೂ ರೆಕಾರ್ಡಿನಲ್ಲಿದೆ. ಯಾವ ಅತ್ಯಾಚಾರವೂ ಆಗಿಲ್ಲ. ಕೊಲೆಯೂ ಆಗಿಲ್ಲ.
ಇನ್ನು ಧರ್ಮಸ್ಥಳ ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರ ಪ್ರಕಾರ ಅವರಿಗೆ ಅವನು ಯಾರು ಅನ್ನೋದು ಗೊತ್ತಾಗಿದೆ. ಹುಡುಕ್ತಿದ್ದಾರೆ. ಹುಡುಕಲಿ. ನಮ್ಮ ಬಳಿ ಈಗ ಸಿಗುತ್ತಿರುವ ಹೆಣಗಳಿಗೆ ಅಧಿಕೃತ ದಾಖಲೆ ಇದೆ. ಆತ ಗುರುತಿಸಿರುವ ಜಾಗಗಳಲ್ಲಿ ಗ್ರಾಮ ಪಂಚಾಯ್ತಿ ನೇತೃತ್ವದಲೇ ಶವ ಸಂಸ್ಕಾರ ಆಗಿದೆ. ಅವರಿಗೂ ಈ ಅನಾಮಿಕ ಯಾರು ಅನ್ನೋದು ಗೊತ್ತಾಗಿದೆ.
ಏಕೆಂದರೆ ಶ್ರೀನಿವಾಸ್ ರಾವಾ ಅವರು 2010ರಿಂದ ಪಂಚಾಯ್ತಿಯಲ್ಲಿದ್ದಾರೆ. ನಾನು ಆತನನ್ನು ನೋಡಿದ್ದೇನೆ. ತನಿಖೆ ಆಗಲಿ. ಸತ್ಯ ಗೊತ್ತಾಗಿಬಿಡಲಿ ಎಂದಿದ್ದಾರೆ. ಅವರ ಪ್ರಕಾರವೂ ಅಷ್ಟೇ..
ಧರ್ಮಸ್ಥಳದಲ್ಲಿ ಈ ಅನಾಮಿಕ ತೋರಿಸಿರುವ ಜಾಗದಲ್ಲಿ ಹೆಣಗಳು ಸಿಗುವುದು ಸತ್ಯ. ಆದರೆ.. ಕೊಲೆ, ಅತ್ಯಾಚಾರ ನಡೆದಿಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಆಗಲಿ.. ಮತ್ತೊಬ್ಬರೇ ಆಗಲಿ.. ತಪ್ಪು ಮಾಡಿಲ್ಲ.
ಅಂದಹಾಗೆ ಈಗ ಹೇಳುತ್ತಿರುವ ಅನಾಮಿಕ ವ್ಯಕ್ತಿಯೇ.. ಇಲ್ಲಿ ಕೆಲಸ ಮಾಡ್ತಿದ್ದಾಗ ಅನಾಮಿಕ ವ್ಯಕ್ತಿಯೊಬ್ಬನ ಹೆಣ ಸಿಕ್ಕಿದೆ. ಹೂಳಬೇಕು ಎಂದು ಬರೆದ ಪತ್ರವೂ ಇವರಲ್ಲಿ ಇದೆಯಂತೆ. 2014ರಲ್ಲಿ ಇವನ ಕಳ್ಳತನಕ್ಕೆ ಬೇಸತ್ತು, ಎಲ್ಲ ಬಾಕಿಯನ್ನ ಚುಕ್ತಾ ಮಾಡಿ.. ಕೆಲಸದಿಂದ ತೆಗೆದು ಹಾಕಿದ್ದೇವೆ. ಅವನೊಬ್ಬ ನಟೋರಿಯಸ್ ಕಳ್ಳ. ಹೆಣಗಳ ಮೇಲಿನ ಚಿನ್ನ ಕದಿಯುತ್ತಿದ್ದ. ಹೊಳೆಗೆ ನುಗ್ಗಿ ಹೊಳೆಯಿಂದಲೆ ಚಿನ್ನ ಕದಿಯುತ್ತಿದ್ದ. ಅವನು ಧರ್ಮಸ್ಥಳದಿಂದ ಓಡಿ ಹೋಗಿದ್ದೂ ಸುಳ್ಳು. ಪ್ರಾಣಭಯದ ಕಥೆಯೂ ಸುಳ್ಳು. ನಾವೇ ಅವನನ್ನು ಕೆಲಸದಿಂದ ತೆಗೆದುಹಾಕಿದ್ದು ಎಂಬ ವಾದ, ಧರ್ಮಸ್ಥಳದಿಂದ ಕೇಳಿ ಬರ್ತಾ ಇದೆ. ಅಂದಹಾಗೆ.. ವಯಸ್ಸು 40 ದಾಟಿರುವ ಧರ್ಮಸ್ಥಳದ ಬಹುತೇಕ ಸ್ಥಳೀಯರಿಗೆ ಈ ಅನಾಮಿಕ ಯಾರು ಎನ್ನುವುದು ಗೊತ್ತಂತೆ.



