ಧರ್ಮಸ್ಥಳದಲ್ಲಿ ಸಂಚು ನಡೆದಿದೆಯೇ ಎಂಬ ಪ್ರಶ್ನೆ ಇವತ್ತು ನಿನ್ನೆಯದಲ್ಲ. ಆದರೆ ಸರ್ಕಾರಕ್ಕೆ ತನಿಖೆ ನಡೆಯುವ ಉಮೇದಿ ಇತ್ತು. ಅದಕ್ಕೆ ಎಡಪಂಥೀಯರ ಆಗ್ರಹವೂ ಇತ್ತು. ಇದೀಗ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳದ ಸತ್ಯ ದರ್ಶನವಾದಂತೆ ಕಾಣುತ್ತಿದೆ. ಚಿನ್ನಯ್ಯ ಹೇಳಿದ್ದ ತಲೆಬುರುಡೆ ಶೋಧ ಕಾರ್ಯ ಫೇಲ್ ಅಗುತ್ತಿದ್ದರೂ, ವಿಠ್ಠಲ ಗೌಡ ಆರೋಪಗಳ ತನಿಖೆ ನಡೆಯುತ್ತಿದ್ದರೂ.. ಇನ್ನೂ ಇಬ್ಬರು ನಾವೂ ಹೆಣ ತೋರಿಸ್ತೇವೆ. ಎಸ್‌ಐಟಿಗೆ ಆದೇಶ ಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಧರ್ಮಸ್ಥಳದಲ್ಲಿ ತಾವು ತೋರಿಸುವ ಸ್ಥಳಗಳಲ್ಲಿ ಉತ್ಖನನ ನಡೆಸಲು ಎಸ್‌ಐಟಿಗೆ ಸೂಚನೆ ನೀಡಬೇಕು ಎಂದು ಕೋರಿ ಧರ್ಮಸ್ಥಳ ಗ್ರಾಮದ ಪಂಗಳ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಬಿ.ಎನ್.ಜಗದೀಶ್ ಮಾಹಿ, ಇದುವರೆಗೆ ನಡೆದ ತನಿಖೆ, ವಿಚಾರಣೆ ಸುಳ್ಳಾಗಿದೆ ಎಂದು ಕೋರ್ಟಿಗೆ ಮಾಹಿತಿ ನೀಡಿದ್ಧಾರೆ.
ಕೋರ್ಟಿನಲ್ಲಿ ನಡೆದ ವಾದ ಪ್ರತಿವಾದಗಳು ಇಷ್ಟು..
ಹೈಕೋರ್ಟ್ ಪುರಂದರ ಗೌಡ ಮತ್ತು ತುಕಾರಾಂ ಗೌಡ ಅವರ ಬಳಿ ದೂರುದಾರ ಚಿನ್ನಯ್ಯ ಹೇಳಿದ್ದನ್ನ ಬಿಟ್ಟು ನಿಮ್ಮ ಬಳಿ ಬೇರೆ ಮಾಹಿತಿ ಎನಿದೆ..? ‘ಚಿನ್ನಯ್ಯನ ಬಳಿ ಇಲ್ಲದಿರೋ ಹೆಚ್ಚುವರಿ ಮಾಹಿತಿ ನಿಮ್ಮ ಬಳಿ ಏನಿದೆ ಹೇಳಿ ಎಂದು ಕೇಳಿತು. ಆಗ ಅವಕಾಶ ಕೊಟ್ಟರೆ ಹೆಚ್ಚಿನ ಮಾಹಿತಿ ಬರಬಹುದು ಎಂಬ ಉತ್ತರ ಬಂತು. ತೃಪ್ತರಾಗದ ನ್ಯಾ.ನಾಗಪ್ರಸನ್ನ ಹೆಚ್ಚುವರಿ ಮಾಹಿತಿ ಏನಿದೆ ಹೇಳಿ.. ಮಾಹಿತಿ ಕೊಟ್ಟ ಬಳಿಕ ನಿಮ್ಮ ವಾದ ಕೇಳ್ತೀವಿ, ಚಿನ್ನಯ್ಯ ಹೇಳಿದ್ದಕ್ಕಿಂತ ಹೆಚ್ಚಿನ ಮಾಹಿತಿ ಏನಿದೆ ಎಂದು ಮತ್ತೊಮ್ಮೆ ಪ್ರಶ್ನೆ ಮಾಡಿದರು.
ಅಲ್ಲದೆ ಚಿನ್ನಯ್ಯ ಹೇಳಿದ್ದ ಪ್ರಕರಣದಲ್ಲಿ ತನಿಖೆ ಏನಾಗಿದೆ ಎಂದು ಕೇಳಿದಾಗ ಸರ್ಕಾರಿ ಪರ ಅಭಿಯೋಜಕ ಜಗದೀಶ್
ಮೂಲ ದೂರುದಾರ ಚಿನ್ನಯ್ಯನ ಹಿಂದೆ ಇದ್ದ ಷಡ್ಯಂತ್ರ ಕೂಡ ಬಯಲಾಗಿದೆ.
ಜಡ್ಜ್ ಮುಂದೆ ಮೊದಲು ಕೊಟ್ಟ ಹೇಳಿಕೆ ಸುಳ್ಳು ಅನ್ನೋದು ಬಯಲಾಗಿದೆ
ಚಿನ್ನಯ್ಯನ ಜತೆಗಿದ್ದ ವಕೀಲರು ಸುಳ್ಳು ಮಾಹಿತಿಯ ಪ್ರೆಸ್ನೋಟ್ ಕೊಟ್ಟಿದ್ದಾರೆ
2014ರ ವರೆಗೆ ಚಿನ್ನಯ್ಯ ಧರ್ಮಸ್ಥಳದಲ್ಲಿ ಕಸಗುಡಿಸೋ ಕೆಲಸ ಮಾಡ್ತಾ ಇದ್ದ
ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಅಂತ ಬಂದಿದ್ದಾಗಿ ಆರಂಭದಲ್ಲಿ ಹೇಳಿಕೆ ಕೊಟ್ಟಿದ್ದ
2 ವರ್ಷದ ಹಿಂದೆಯೇ ಚಿನ್ನಯ್ಯ ಧರ್ಮಸ್ಥಳಕ್ಕೆ ಬಂದು ಹೋಗಿದ್ದು ಗೊತ್ತಾಗಿದೆ
ಇಬ್ಬರು ವ್ಯಕ್ತಿಗಳು ತಲೆ ಬುರುಡೆ ಕೊಟ್ಟಿದ್ದನ್ನು ಚಿನ್ನಯ್ಯ ಒಪ್ಪಿಕೊಂಡಿದ್ದಾನೆ
ಚಿನ್ನಯ್ಯ ಹೇಳಿದ 13 ಕಡೆ ಅಗೆದರೂ ಅಸ್ಥಿಪಂಜರ ಸಿಕ್ಕಿದ್ದು ಒಂದು ಕಡೆ ಮಾತ್ರ
‘ಧರ್ಮಸ್ಥಳದಲ್ಲಿ ಎರಡು ಕಡೆ ಸಿಕ್ಕ ಮೂಳೆಗಳು ಪುರುಷನದ್ದು ಎಂದು ಗೊತ್ತಾಗಿದೆ
ಎಂದು ವಿವರ ನೀಡಿದರು.ಈ ಮೂಲಕ ಧರ್ಮಸ್ಥಳದ ವಿರುದ್ಧ ಷಡ್ಯಂತ್ರವೇ ನಡೆದಿದೆ ಎನ್ನುವುದನ್ನೂ ಒಪ್ಪಿಕೊಂಡರು. ಅಲ್ಲದೆ ಅನನ್ಯಾ ಭಟ್ ಪ್ರಕರಣದ ಮಾಹಿತಿಯನ್ನೂ ನೀಡಿ ವಿಚಾರಣೆ ಬಳಿಕ ಅನನ್ಯಾ ಭಟ್ ಅಂತ ಯುವತಿ ಇರಲಿಲ್ಲ ಎಂದು ಗೊತ್ತಾಯ್ತು. ಪೋಟೋದಲ್ಲಿದ್ದ ಮಹಿಳೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದೂ ತಿಳಿಸಿದರು.
ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ಸರ್ಕಾರದ (ಎಸ್‌ಐಟಿ) ಪರ ವಾದ ಮಂಡಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಮಾಹಿ ಈ ವಿಷಯ ತಿಳಿಸಿದರು.
ಕೆಲ ಸಮಯ ಅರ್ಜಿದಾರರ ಮತ್ತು ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿ ಮೂಲ ದೂರುದಾರನಾಗಿದ್ದ ಸಿ.ಎನ್.ಚಿನ್ನಯ್ಯ ಆರೋಪಿಯಾಗಿದ್ದಾರೆ. ಹಾಗಾಗಿ, ಆತನ ಬಳಿಯಿದ್ದ ಮಾಹಿತಿಗೆ ಹೊರತಾದ ಹೆಚ್ಚಿನ ಮಾಹಿತಿ/ದಾಖಲೆಯಿದ್ದಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಸೂಚಿಸಿ ಸೆ.26ಕ್ಕೆ ವಿಚಾರಣೆ ಮುಂದೂಡಿತು.



