ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಬೆಂಬಲಕ್ಕೆ ಸ್ವಲ್ಪ ಲೇಟ್ ಆದರೂ.. ದೇವೇಗೌಡರು ಬೆಂಬಲ ಘೋಷಿಸಿದ್ದಾರೆ. “ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ” ಎಂದಿರುವ ದೇವೇಗೌಡರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯವು ಲಕ್ಷಾಂತರ ಭಕ್ತರ ಆಸ್ಥಾನವಾಗಿದ್ದು, ಇದರ ಪಾವಿತ್ರತೆಗೆ ಭಂಗ ತರುವ ಉದ್ದೇಶದಿಂದ ಕೆಲವು ಕೃತ್ಯಮಿಗಳು ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ತಮಗೆ ದೈವದ ಮೇಲೆ ದೃಢವಾದ ನಂಬಿಕೆ ಇದೆ ಎಂದು ಹೇಳಿರುವ ದೇವೇಗೌಡರು “ಪರಮೇಶ್ವರನ ಪರೀಕ್ಷೆಗೆ ಯಾರಿಂದಲೂ ಯೋಗ್ಯತೆ ಇಲ್ಲ. ದುಷ್ಕೃತ್ಯದಲ್ಲಿ ಭಾಗಿಯಾದವರಿಗೆ ಶ್ರೀ ಮಂಜುನಾಥ ಸ್ವಾಮಿಯೇ ಶಿಕ್ಷೆ ನೀಡುತ್ತಾನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬಹಳವಾಗಿ ನೊಂದಿದ್ದಾರೆ. ರಾಜ್ಯಸಭೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಇದು ಗೊತ್ತಾಯಿತು. ಅಲ್ಲಿಯೇ ಅವರಿಗೆ ಧೈರ್ಯ ಹೇಳಿದೆ. ತನಿಖೆಯಿಂದ ಸತ್ಯಾಂಶಗಳು ಬಹಿರಂಗಗೊಳ್ಳುತ್ತಿರುವುದರಿಂದ ಹೆಗ್ಗಡೆಯವರು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆಯ ಹಿಂದೆ ಯಾರೆಲ್ಲಾ ಇರಬಹುದು ಎಂಬುದನ್ನು ನಿಖರವಾಗಿ ಹೇಳಲಾಗದಿದ್ದರೂ, ಇಂತಹ ದುಷ್ಕೃತ್ಯಕ್ಕೆ ಕೈಹಾಕಿರುವವರು ಒಂದಲ್ಲ ಒಂದು ದಿನ ತಮ್ಮ ಕೃತ್ಯದ ಫಲವನ್ನು ಅನುಭವಿಸಲೇಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ದೇವೇಗೌಡ.
ದೇವೇಗೌಡರ ಸೂಚನೆಯಂತೆ ಧರ್ಮಸ್ಥಳಕ್ಕೆ ನಿಖಿಲ್
ದೇವೇಗೌಡರ ಸೂಚನೆ ನಂತರವೇ ನಿಖಿಲ್ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದಾರೆ. ಆಗಸ್ಟ್ 31ರಂದು ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಅವರಿಗೆ ಬೆಂಬಲ ನೀಡಲಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಧರ್ಮಸ್ಥಳದ ಕುರಿತು ಇರುವ ಆಕ್ಷೇಪಾರ್ಹ, ಕಲ್ಪಿತ, ಅವಹೇಳನಕಾರಿ ವಿಡಿಯೋ, ಸುಳ್ಳು ಸುದ್ದಿಗಳನ್ನು ಡಿಲೀಟ್ ಮಾಡುವಂತೆ ಪತ್ರ ಬರೆದಿದ್ದಾರೆ.
ಧರ್ಮಸ್ಥಳ ಯಾತ್ರೆಯಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಾತೀತವಾಗಿ ಈ ಯಾತ್ರೆ ಕೈಗೊಂಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಧರ್ಮಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತೇವೆ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಕ್ಕೆ ಒಂದೂವರೆ ತಿಂಗಳಿಂದ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಅವರ ಕುಟುಂಬದವರು ತಾಳ್ಮೆ ಮತ್ತೆ ಸಹನೆಯಿಂದ ನಡೆದುಕೊಂಡಿದ್ದಾರೆ. ನಾವು ಅವರ ಜೊತೆ ನಿಲ್ಲುತ್ತೇವೆ ಹೆಗ್ಗಡೆ ಕುಟುಂಬಕ್ಕೆ ಜೆಡಿಎಸ್ ಬೆಂಬಲವಿದೆ ಎಂದಿದ್ದಾರೆ ನಿಖಿಲ್.
ಕುಮಾರಸ್ವಾಮಿ ಬೆಂಬಲ : ಒಬ್ಬ ಭಕ್ತನಾಗಿ ಇದನ್ನು ಒಪ್ಪುವುದಿಲ್ಲ. ಸರ್ಕಾರ ಎಡಪಂಥದ ನಾಯಕರು, ಚಿಂತಕರ ಜೊತೆ ಸೇರಿ ದೊಡ್ಡ ಹುನ್ನಾರವನ್ನೇ ಮಾಡಿದೆ ಎಂದು ದೂರಿದ್ಧಾರೆ ಕುಮಾರಸ್ವಾಮಿ. ಸಿಎಸ್ ದ್ವಾರಕಾನಾಥ್ ದೂರು ಕೊಟ್ಟ ತಕ್ಷಣ ಎಸ್‌ಐಟಿ ರಚನೆ ಅಗತ್ಯ ಇಲ್ಲ ಎಂದಿದ್ದ ಸಿದ್ಧರಾಮಯ್ಯನವರೇ, ಎಸ್‌ಐಟಿ ರಚಿಸುತ್ತಾರೆ. ತನಿಖೆ ಎನ್ನುವುದು ಕೇವಲ ನಾಟಕ. ಷಡ್ಯಂತ್ರದ ಕೈಮೇಲಾಗಿದೆ ಎಂದು ದೂರಿದ್ದಾರೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿಯೇ ಮಂಜುನಾಥ ಸ್ವಾಮಿ,ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಅವಮಾನ ಮಾಡಿದೆ ಎಂದು ದೂರಿದ್ದಾರೆ.



