ಯಾರೆಲ್ಲಾ ಆರೋಪಿಗಳು?
ಎ1 – ಚಿನ್ನಯ್ಯ
ಎ2 – ಮಹೇಶ್ ಶೆಟ್ಟಿ ತಿಮರೋಡಿ
ಎ3 – ಗಿರೀಶ್ ಮಟ್ಟಣ್ಣನವರ್
ಎ4 – ವಿಠಲ ಗೌಡ
ಎ5 – ಜಯಂತ್ ಟಿ
ಎ6 – ಸುಜಾತ ಭಟ್
ಚಾರ್ಜ್ ಶೀಟ್ ಪ್ರಕಾರ ಇಷ್ಟು ಜನ ಧರ್ಮಸ್ಥಳ ತಲೆಬುರುಡೆ ಕೇಸಿನಲ್ಲಿ ಆರೋಪಿಗಳು. ಆದರೆ 6 ಜನ ಮಾತ್ರನೇನಾ.. ಉಳಿದವರು ಎಲ್ಲಿ.. ಹೇಗೆ ತಪ್ಪಿಸಿಕೊಂಡರು.. ಅವರು ಯಾಕೆ ಚಾರ್ಜ್‌ಶೀಟಿನಲ್ಲಿ ಇಲ್ಲ ಎಂಬ ಪ್ರಶ್ನೆಯಂತೂ ಕಾಡುತ್ತದೆ.
ಮಿಸ್ ಆದವರು
ಸಮೀರ್ ಎಂಡಿ
ಹಾಗೆ ತಪ್ಪಿಸಿಕೊಂಡವರ ಲಿಸ್ಟಿನಲ್ಲಿ ದೂತ ಸಮೀರ್ ಎಂಡಿ ಮಿಸ್ಸಿಂಗ್. AI-ಜನರೇಟೆಡ್ ವಿಡಿಯೋ “Who Are Serial Killrs of Dharmasthala?” ಅಪ್‌ಲೋಡ್ ಮಾಡಿ ಮೂರೂವರೆ ಮಿಲಿಯನ್ ವ್ಯೂವ್ಸ್ ಪಡೆದವನು. ದೇವಸ್ಥಾನದ ವಿರುದ್ಧ ಅಪಪ್ರಚಾರ ಮಾಡಿದವನು. ಈತನ ವಿರುದ್ಧ BNS ಸೆಕ್ಷನ್ 192, 240, 353 ಅಡಿ ದೂರು ದಾಖಲಾಗಿತ್ತು. ಜಾಮೀನು ಪಡೆದಿದ್ದಾನೆ. 10 ಕೋಟಿ ರೂ. ಮಾನಹಾನಿ ದೂರು ಕೂಡಾ ದಾಖಲಾಗಿದೆ.
ಅಜಯ್ ಅಂಚನ್, ಕುಡ್ಲ ರಾಂಪೇಜ್
ದೇವಸ್ಥಾನದ ವಿರುದ್ಧ ವಿಡಿಯೋ ಮಾಡಿದ್ದ, ಹಲ್ಲೆ ಆಗಿದೆ ಎಂದು ದೂರು ನೀಡಿದ್ದ ವ್ಯಕ್ತಿ. ಈತನ ಮೇಲೆ ಹೈಕೋರ್ಟಿನಲ್ಲಿ ಕೇಸ್ ಇದೆ.
ಅಭಿಷೇಕ್ : Abhishek – United Media
ಈತನೇ ಬುರುಡೆ ಕಥೆಯನ್ನು ಪ್ರಚಾರ ಮಾಡಿದವನು. ಹಣ ಪಡೆದು ಪ್ರಚಾರ ಮಾಡಿದ ಆರೋಪ ಇದೆ. ಈತ ಲೈವ್ ಮಾಡುವಾಗಲೇ ಸುಳ್ಳು ಹೇಳಿ ಪವರ್ ಟಿವಿಗೆ ಸಿಕ್ಕಿಬಿದ್ದು, ಕ್ಷಮಾಪಣೆ ಕೇಳಿದ್ದ.
ಸಂತೋಷ್ Santhosh – Sanchari Studio
ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ಈತ ಚಿನ್ನಯ್ಯ, ಸುಜಾತಾ ಭಟ್ ಸೇರಿದಂತೆ ಆರೋಪಿಗಳನ್ನೆಲ್ಲ ಸಂದರ್ಶನ ಮಾಡಿದ್ದ.
ಕೇರಳದ ಮುನಾಫ್ Manaf ಚಾನೆಲ್
ಈತ ಕೇರಳದಲ್ಲಿ ಧರ್ಮಸ್ಥ ವಿರುದ್ಧ ಅಪಪ್ರಚಾರ ಮಾಡಿದ್ದ. ಅಲ್ಲಿನ ನಾಗರಿಕರು, ಸಂಘಟನೆಗಳನ್ನು ಒಟ್ಟು ಗೂಡಿಸಿದ್ದ. ಚಿನ್ನಯ್ಯ ಮೊದಲಿಗೆ ಕೊಟ್ಟಿದ್ದ ತಲೆಬುರುಡೆಯನ್ನೂ ಈತನ ಕಾರಿನಲ್ಲೇ ಸಾಗಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಚಂದನ್ ಗೌಡ Chandan Gowda
ಈತ ಕೂಡಾ ತಲೆಬುರುಡೆ ಕೇಸಿನಲ್ಲಿ ಸುಳ್ಳು ಸುದ್ದಿ ಮಾಡಿದ್ದಾನೆ ಎಂಬ ಆರೋಪ ಇವೆ. ಸುಮಂತ್ ಗೌಡ ಮತ್ತು ಅಭಿಷೇಕ್ ಮೊದಲಾದವರ ಟೀಂನಲ್ಲಿ ಎಡಿಟರ್ ಆಗಿದ್ದವರು.
ಇವರೆಲ್ಲರೂ ಮಿಸ್ ಆಗಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಒಳಸಂಚು ಮಾಡಿ ಚಿನ್ನಯ್ಯನಿಗೆ ಆಮಿಷವೊಡ್ಡಿ ದೂರು ಕೊಡಿಸಲಾಗಿದೆ. ಅನನ್ಯ ಭಟ್ ಪಾತ್ರ ಸೃಷ್ಟಿಯ ಹಿಂದೆ ತಿಮರೋಡಿ ಕೈವಾಡವಿದೆ. ತಿಮರೋಡಿ ಮಾತು ಕೇಳಿ ಮಗಳು ಕಾಣೆಯಾಗಿದ್ದಾಳೆಂದು ಸುಜಾತ ಭಟ್ ದೂರು ನೀಡಿದ್ದರು. ವಿಠಲ ಗೌಡನ ಮೂಲಕ ಬಂಗ್ಲೆಗುಡ್ಡದಿಂದ ತಲೆ ಬುರುಡೆ ತರಿಸಿ ಅದನ್ನು ಬೆಂಗಳೂರಿನ ಅಪಾರ್ಟ್ ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ರೂಮಿನಲ್ಲಿ ಇಟ್ಟು ಸಂಚು ಮಾಡಿದ್ದು ಗಿರೀಶ್ ಮಟ್ಟಣ್ಣವರ್. ಚಿನ್ನಯ್ಯನಿಗೆ ಸುಳ್ಳು ದೂರು ನೀಡುವಂತೆ ಹಣವನ್ನು ನೀಡಿದ್ದ ಮಟ್ಟಣ್ಣವರ್ ಬುರುಡೆಯನ್ನು ತರುವುದು ಮತ್ತು ಹಸಿ ಹಸಿ ಸುಳ್ಳು ದೂರು ಕೊಡಿಸುವುದರಲ್ಲಿ ದೊಡ್ಡ ಪಾತ್ರ ಮಾಡಿದ್ದ. ಎ4 ವಿಠ್ಠಲ ಗೌಡ, ಎ5 ಜಯಂತ್ ಟಿ ಇಬ್ಬರೂ ಸಂಚಿನ ಭಾಗವೇ ಆಗಿದ್ದಾರೆ.
ಆದರೆ ಸುಳ್ಳು ಪ್ರಸಾರ ಮಾಡಿದವರು ಮಾತ್ರ ಮಿಸ್ಸಿಂಗ್.



