ಒಂದಲ್ಲ..ಎರಡಲ್ಲ.. ಹತ್ತಲ್ಲ.. ಹತ್ತಿರತ್ತಿರ ಸುಮಾರು 20 ಗುಂಡಿಗಳು. ಅನಾಮಿಕನೊಬ್ಬ ಬಂದು ಮಾರ್ಕ್ ಮಾಡಿ ತೋರಿಸಿದ್ದು 13. ಅದಕ್ಕೆ ಅಡಿಷನಲ್ ಆಗಿ ತೋಡಿದ್ದು ಇನ್ನೂ ಹೆಚ್ಚು ಗುಂಡಿಗಳು. ಕೆಲವು ಗುಂಡಿಗಳನ್ನಂತೂ ಹೆಚ್ಚೂ ಕಡಿಮೆ ತೆರೆದ ಬಾವಿಯಷ್ಟೇ ದೊಡ್ಡದಾಗಿ ತೋಡಲಾಗಿದೆ. ಮಂಗಳವಾರ ಜಿಪಿಆರ್ ತಂತ್ರಜ್ಞಾನ ಬಳಸಿ ತೋಡಿರುವುದು 20 ಅಡಿಗೂ ಹೆಚ್ಚು ಆಳದ ಗುಂಡಿ. ಆಳವಷ್ಟೇ ಅಲ್ಲ, ಅಷ್ಟೇ ಅಗಲವೂ ಇದೆ. ಮೂಳೆ ಸಿಕ್ಕಿಲ್ಲ. ಹೆಣ ಸಿಕ್ಕಿಲ್ಲ. ತಲೆಬುರುಡೆ ಸಿಕ್ಕಿಲ್ಲ. ಕೇವಲ ನೀರು ಸಿಕ್ಕಿದೆ.
ಡ್ರೋನ್ ಮೌಂಟೆಡ್ ಜಿಪಿಆರ್ ಯಂತ್ರದಂದ ಶೋಧ ಕಾರ್ಯವನ್ನು ಆರಂಭಿಸಿುವ ಹಿನ್ನೆಲೆಯಲ್ಲಿ ಅನಾಮಿಕನಿದ ಗುರುತಿಸಲಾಗಿದ್ದ ಪ್ರದೇಶದ ವ್ಯಾಪ್ತಿಯನ್ನು 3 ಪಟ್ಟು ಹೆಚ್ಚಿಸಿ, ಕಳೆ ಗಿಡಗಳು, ಗಿಡ ಗಂಟಿಗಳನ್ನು ಕತ್ತರಿಸಿ ದೊಡ್ಡದೊಂದು ಕಂದಕವನ್ನೇ ತೋಡಲಾಗಿತ್ತು. ಆದರೂ.. ಏನೂ ಸಿಕ್ಕಿಲ್ಲ. ಘಟನೆಗೆ ಸಂಬಂಧಿಸಿದಂತೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಲೇ ಇದೆ.
ಇದೀಗ ಕೋಡಿಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ‘ವಿಚಾರಗಳಲ್ಲಿ ಹಲವು ವಿಧಗಳಿವೆ. ಕ್ರಮಬದ್ಧವಾಗಿ ಹೇಳಬೇಕು ಎಂದರೆ, ಸಮಾಚಾರ, ವಿಚಾರ, ಸವಿಚಾರ ಇದಾದ ಬಳಿಕ ಅಪಪ್ರಚಾರ. ಆದರೆ ಇಲ್ಲಿ ವಿಷಾದದ ಸಂಗತಿ ಏನೆಂದರೆ ಅಪಪ್ರಚಾರವೇ ಮೊದಲು ಆಗಿದೆ. ಸತ್ಯ ಹೊರಕ್ಕೆ ಬರಬೇಕಿದೆ. ವೇಳೆ ಸತ್ಯ ಹೊರಕ್ಕೆ ಬಂದರೆ ಅವನು ಸತ್ತೇ ಹೋಗುತ್ತಾನೆʼʼ ಎಂದು ಹೇಳಿದ್ದಾರೆ. ʻʻಅಳುಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಸತ್ಯ ಹೊರ ಬಂದರೆ ಸಾಯುತ್ತಾನೆ. ಆದ್ದರಿಂದ ಸತ್ಯ ಬರುವವರೆಗೆ ಕಾಯ್ದು ನೋಡಬೇಕುʼʼ ಎನ್ನವುದು ಕೋಡಿಶ್ರೀ ಹೇಳಿಕೆ.
ಕೋಡಿ ಶ್ರೀ ಅವರು ʻʻಒಳ್ಳೊಳ್ಳೆ ಗುಡಿಗಳ ದೇವರ ಪೂಜೆ ನಿಲ್ಲುತ್ತಾ ಬರುತ್ತವೆ ನೋಡಿ. ವಿಭೂತಿ ಇಟ್ಟ ಹಣೆ ಕೆತ್ತಿಸಿಯಾರು, ನಾಮ ಅಳಿಸಿಯಾರುʼʼ ಎನ್ನುತ್ತಲೇ ಈಗ ಅಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಬಹುಶಃ ಮಂಜುನಾಥಸ್ವಾಮಿಯೇ ಮಾಡಿಸುತ್ತಿರಬೇಕು. ಈಗ ನಡೆಯುತ್ತಿರುವುದೆಲ್ಲವೂ ಸತ್ಯವೋ ಸುಳ್ಳೋ ಎಂದು ಇಂದಲ್ಲಾ ನಾಳೆ ಹೊರಕ್ಕೆ ಬಂದೇ ಬರುತ್ತದೆ. ರಾಜಾಜ್ಞೆ ಆಗಿಬಿಟ್ಟಿದೆ, ಸತ್ಯ ಹೊರಬರಲು ಸಮಯಾವಕಾಶ ಬೇಕಿದೆ ಎಂದಿದ್ದಾರೆ.
ರಾಮಾಯಣದ ಕಥೆಯನ್ನೂ ಲಿಂಕ್ ಮಾಡಿರುವ ಶ್ರೀಗಳು ಸೀತೆಗೆ ರಾಮಾಯಣದಲ್ಲಿ ಆದಂತೆ, ಇಲ್ಲಿ ಅಪಪ್ರಚಾರ ಮೊದಲು ಬಂದಿದೆ, ಇದೇ ಸದ್ಯ ಪ್ರಬಲವಾಗಿದೆ. ಸತ್ಯ ಹೊರಬರುತ್ತದೆ, ಬೆಳಕು ಇದ್ದಲ್ಲಿ ಕತ್ತಲು ಇರುತ್ತದೆ. ಊರಲ್ಲಿ ಇರುವ ಸಣ್ಣ ದೇವಸ್ಥಾನಕ್ಕೆ ಯಾರೂ ಹೋಗುವುದಿಲ್ಲ, ಪೂಜಾರಿಗೆ ಸಂಬಳ ಕೊಡಲೇ ದುಡ್ಡು ಇರುವುದಿಲ್ಲ. ದುಡ್ಡು ಬೆಳೆಯುತ್ತಿದ್ದಂತೆಯೇ, ವಿಧಿಯು ಕಾಡಿಕೊಂಡು ಬರುತ್ತದೆ. ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ಕಟ್ ಮಾಡುತ್ತಾನೆ.. ಎಂದು ಎಂದಿನಂತೆ ಒಗಟಿನಲ್ಲೇ ಭವಿಷ್ಯ ಹೇಳಿದ್ದಾರೆ.
ಇತ್ತ ನೂರಾರು ಶವ ಹೂತಿದ್ದೇನೆ ಎಂದು ಆರೋಪಿಸಿದ್ದ ಅನಾಮಿಕ ದೂರುದಾರ ನ್ನಷ್ಟು ಕಡೆ ಅಗೆಯುವಂತೆ ಎಸ್‌ಐಟಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.



