ಶಿವಣ್ಣನ ಎನರ್ಜಿಯನ್ನ, ಸರಳತೆಯನ್ನ ಎಲ್ಲರೂ ಕೊಂಡಾಡ್ತಾರೆ. ಕನ್ನಡ ಚಿತ್ರರಂಗದಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಹೀರೋ, ಸ್ಟಾರ್ ಎಂದಿದ್ದರೆ ಅದು ಶಿವಣ್ಣ. ಶಿವಣ್ಣ ಹಲವರಿಗೆ ಹಲವು ರೀತಿ ಮಾದರಿಯಾಗಿದ್ಧಾರೆ. ಆದರೆ ಧನುಷ್ ಪ್ರಕಾರ ಶಿವಣ್ಣ ಅವರು ಮಾದರಿಯಾಗಿರುವುದು ಇನ್ನೂ ಒಂದು ಕಾರಣಕ್ಕೆ.
ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವಣ್ಣ ಕೂಡಾ ನಟಿಸಿದ್ಧಾರೆ. ಧನುಷ್ʻಗೆ ಶಿವಣ್ಣ ಅಣ್ಣನಾಗಿ ನಟಿಸಿದ್ಧಾರೆ. ಈಗಾಗಲೇ ಟೀಸರ್ ಹಾಗೂ ‘ಈರಪ್ಪನು’ ಸಾಂಗ್‌ನಲ್ಲಿ ಶಿವಣ್ಣನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಚೆನ್ನೈನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ನೆಹರೂ ಸ್ಟೇಡಿಯಂನಲ್ಲಿ ಬಹಳ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ಪತ್ನಿ ಸಮೇತ ಹಾಜರಾಗಿದ್ದರು. ವೇದಿಕೆ ಏರಿ ಮಾತನಾಡಿದ ಶಿವಣ್ಣ ಬಳಿಕ ಬಿಂದಾಸ್ ಹೆಜ್ಜೆ ಹಾಕಿ ರಂಗೇರಿಸಿದ್ದರು. ವೇದಿಕೆಯಿಂದ ಕೆಳಗಿಳಿದು ಧನುಷ್ ಜೊತೆ ಸೇರಿ ಕುಣಿದಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ. ಇನ್ನು ಧನುಷ್ ವೇದಿಕೆ ಏರಿ ಶಿವಣ್ಣನ ಬಗ್ಗೆ ಗುಣಗಾನ ಮಾಡಿದ್ದಾರೆ. ಸೆಂಚುರಿ ಸ್ಟಾರ್ ಸರಳತೆ ಬಗ್ಗೆ ಮೆಚ್ಚಿಕೊಂಡಾಡಿದ್ದಾರೆ.
ನಿಮ್ಮ ಮನಸ್ಸಿಗೆ ನಿಮ್ಮ ಪ್ರೀತಿಗೆ ನಿಮ್ಮ ಬೆಂಬಲಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಅಕ್ಕರೆಗೆ ನಾನು ಬಹಳ ದೊಡ್ಡ ಅಭಿಮಾನಿ. ನೀವು ವೇದಿಕೆ ಏರಿ ನಗುತ್ತಾ ಮಾಡುತ್ತಿದ್ದಿರಿ. ನಿಮ್ಮನ್ನು ನೋಡಿ ಖುಷಿಪಡುತ್ತಿದ್ದೆ. ಸುಮ್ನೆ ವೇದಿಕೆಯಲ್ಲಿ ಮಾತನಾಡಬೇಕು ಎಂದು ಮಾತನಾಡುತ್ತಿಲ್ಲ. ನೀವು ನಕ್ಕಾಗ ನಿಮ್ಮ ಮುಖದಲ್ಲಿ ನಿಮ್ಮ ಅಪ್ಪ ಕಾಣಿಸ್ತಾರೆ, ನಿಮ್ಮ ತಮ್ಮ ಕೂಡ ಕಾಣಿಸ್ತಾರೆ, ಮೂವರು ಸೇರಿ ನಗುವಂತೆ ನನಗೆ ಕಾಣಿಸಿತು” ಎಂದಿದ್ದಾರೆ. ಈ ಮಾತಿಗೆ ಇಡೀ ಆಡಿಟೋರಿಯಂ ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದೆ.
ಅಪ್ಪನ ಹೆಸ್ರು ಉಳಿಸುವುದು ಅಂದ್ರೆ ಏನು ಅಂತ ನಿಮ್ಮನ್ನು ನೋಡಿ ಕಲಿಯಬೇಕು ಸರ್. ಮಕ್ಕಳಿದ್ದಾರೆ ನೋಡಿ ಕಲಿಯುತ್ತಾರೆ ಎಂದುಕೊಂಡಿದ್ದೇನೆ ಎಂದಿರುವ ಧನುಷ್, ತಮ್ಮ ಮಕ್ಕಳೊಂದಿಗೆ ಶಿವಣ್ಣ ಆಡಿದ್ದನ್ನು, ಹೋಟೆಲ್ ರೂಮಿನಲ್ಲಿಯೇ ಅಡುಗೆ ಮಾಡಿ ಬಡಿಸಿದ್ದ ಗೀತಕ್ಕ ಅವರನ್ನು ಮರೆಯೋದಿಕ್ಕಾಗಲ್ಲ ಎಂದಿದ್ದಾರೆ.
ನನ್ನ ಮಕ್ಕಳೊಟ್ಟಿಗೆ ನೀವು ಕ್ರಿಕೆಟ್ ಆಡಿದ್ದು, ನಾವು ಹೋಗಿ ಒಟ್ಟಿಗೆ ಊಟ ಮಾಡಿದ್ದು ಮರೆಯೋಕ್ಕಾಗಲ್ಲ. ನನಗೆ ಮನೆ ಊಟ ಸಿಗುತ್ತಿಲ್ಲ ಎಂದಾಗ ನಾವೇನು ಅಷ್ಟು ಸೌಕರ್ಯ ಇರುವ ರೂಮ್‌ನಲ್ಲಿ ಇರಲಿಲ್ಲ. ಆ ರೂಮ್‌ನಲ್ಲಿ ಸಡನ್ ಆಗಿ ಒಂದು ಕಿಚನ್ ರೆಡಿ ಮಾಡಿಬಿಟ್ಟು ಮೇಡಂ(ಗೀತಾ ಶೀವರಾಜ್‌ಕುಮಾರ್). ನನಗೆ ಒಳ್ಳೆ ಊಟ ಹಾಕಿದ್ರೆ, ನಾನು ಅದನ್ನು ಮರೆಯುವುದಿಲ್ಲ, ನಿಮಗೆ ಧನ್ಯವಾದ” ಎಂದು ಧನುಷ್ ಹೇಳಿದ್ದಾರೆ.



