ನಟ ಪ್ರಕಾಶ್ ರೈ (Prakash Rai) ಅಲಿಯಾಸ್ ಪ್ರಕಾಶ್ ರಾಜ್ (Prakash Raj) ಅವರು ಪ್ರತಿ ದಿನ ಏನಾದರೊಂದು ವಿವಾದ ಹುಡುಕಿ ಕೆದಕುತ್ತಲೇ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) , ಆರ್ ಎಸ್ ಎಸ್ (RSS), ಹಿಂದುತ್ವಗಳನ್ನು (Hinduthwa) ಟೀಕೆ ಮಾಡುವುದರಲ್ಲಿ ಒಂದು ರೀತಿಯ ವಿಚಿತ್ರ ಆನಂದ ಅನುಭವಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಆರ್‍ಎಸ್‍ಎಸ್, ಹಿಂದುತ್ವಗಳನ್ನು ವಿರೋಧಿಸುವವರು ಯಾರೇ ಆಗಿರಲಿ.. ಆತ ಎಂತಹವನೇ ಆಗಿರಲಿ.. ಪ್ರಕಾಶ್ ರಾಜ್ ಬೆಂಬಲ ಅವರಿಗಿದ್ದೇ ಇರುತ್ತದೆ. ಇಂತಹ ಪ್ರಕಾಶ್ ರಾಜ್, ನೀತಿ ಪಾಠ ಹೇಳುವುದರಲ್ಲಿ ಎಕ್ಸ್`ಪರ್ಟ್. ಇಂತಹ ಪ್ರಕಾಶ್ ರಾಜ್ ಮೇಲೆ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ತಮಿಳುನಾಡಿನ ದಿಂಡುಗಲ್ ಜಿಲ್ಲೆಯ ಕೊಡೈಕೆನಾಲ್ನ (kodaikanal) ವಿಲ್ಪಟ್ಟಿ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಕಾಶ್ ರೈ (Prakash Rai) ಅವರಿಗೆ ಒಂದು ಬಂಗಲೆ ಇದೆ. ಅದು ಬೇಸಿಗೆಯಲ್ಲಿ ಇರಲು ಮಾಡಿಕೊಂಡಿರುವ ವ್ಯವಸ್ಥೆ. ಆದರೆ, ಅಲ್ಲಿ ಅನುಮತಿ ಇಲ್ಲದೆ ಸರ್ಕಾರಿ ಜಾಗದಲ್ಲಿ ಬಂಗಲೆ ನಿರ್ಮಿಸಿರುವುದಕ್ಕೆ ಕೊಡೈಕನಾಲ್ (kodaikanal) ಪಂಚಾಯತ್ ನೋಟಿಸ್ ಜಾರಿ ಮಾಡಿದೆ. ಬೇಸಿಗೆ ತಂಗುದಾಣದ ಕೇಂದ್ರವಾದ ಕೊಡೈಕೆನಾಲ್ನಲ್ಲಿ (kodaikanal) ಸರ್ಕಾರದ ಅನುಮತಿಯಿಲ್ಲದೆ ಬಂಗಲೆ ನಿರ್ಮಾಣ ಮಾಡಿರುವುದಕ್ಕಾಗಿ ನಟರಾದ ಪ್ರಕಾಶ್ ರಾಜ್ (Prakash Rai) ಮತ್ತು ಬಾಬಿ ಸಿಂಹ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಪಂಚಾಯಿತಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಕೊಡೈಕೆನಾಲ್ (kodaikanal) ಬಳಿಯ ವಿಲ್ಪಟ್ಟಿ ಪಂಚಾಯತ್ ವ್ಯಾಪ್ತಿಯ ಪೊತ್ತುಪರೈ ಭಾರತಿ ಅಣ್ಣಾನಗರದಲ್ಲಿ ಪ್ರಕಾಶ್ ರಾಜ್ (Prakash Rai) ಅರಣ್ಯ ಇಲಾಖೆ ಒಡೆತನದ ಜಮೀನಿನಲ್ಲಿ ಸರಕಾರದ ಅನುಮತಿ ಪಡೆಯದೆ ಮನೆ ಹಾಗೂ ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ಪೇತುಪರೈ ಗ್ರಾಮದ ಅಧ್ಯಕ್ಷ ಹಾಗೂ ರೈತ ಕೆ.ವಿ.ಮಹೇಂದ್ರನ್ ಎಂಬುವವರು ನಟರಾದ ಪ್ರಕಾಶ್ ರಾಜ್ (Prakash Rai) ಮತ್ತು ಬಾಬಿ ಸಿಂಹ ಅವರು ತಮ್ಮ ಬಂಗಲೆಗಳನ್ನು ನಿರ್ಮಿಸಲು ಪೇತುಪರೈ ಮತ್ತು ಭಾರತಿಪುರಂ ಅಣ್ಣಾನಗರ ಬಳಿಯ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ರಸ್ತೆಗಳನ್ನು ನಿರ್ಮಿಸಿ, ಸ್ಥಳೀಯ ನಿವಾಸಿಗಳು ರಸ್ತೆ ಬಳಸದಂತೆ ತಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮುಂದೆ ರೈತ ಆರೋಪಿಸಿದ್ದಾರೆ.
ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಮತ್ತು ಶುಕ್ರವಾರ ಎರಡೂ ನಟರ ಜಮೀನು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೊಡೈಕೆನಾಲ್ ಕಂದಾಯ ವಿಭಾಗಾಧಿಕಾರಿ ರಾಜಾ, ತಹಶೀಲ್ದಾರ್ ಮತ್ತು ಸರ್ವೆಯರ್ ಇಬ್ಬರೂ ನಟರ ಜಮೀನುಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
2021 ರಲ್ಲಿ, ವಿಶೇಷ ಅಧಿಕಾರಿಯ ಅಧಿಕಾರಾವಧಿಯಲ್ಲಿ, ಅವರು 2,500 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಲು ಅನುಮೋದನೆಯನ್ನು ಪಡೆದರು. ಆದರೆ, ನಂತರ, ಅವರು ತಮ್ಮ ಅನುಮೋದನೆಯನ್ನು ನವೀಕರಿಸಿದರು ಮತ್ತು 4,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಿದರು ಎಂಬ ಆರೋಪವಿದೆ.
ಕೇಸ್ ಹೊರಬಿದ್ದಿದ್ದೇ ತಡ.. ಪ್ರಕಾಶ್ ರಾಜ್ ಅವರ ವಿರುದ್ಧ ಕಾಮಿಡಿ..ಲೇವಡಿ ಅಸ್ತ್ರಗಳನ್ನೆಲ್ಲ ಪ್ರಯೋಗಿಸಿದ್ದಾರೆ ವಿರೋಧಿಗಳು. ಅದಕ್ಕೆಲ್ಲ ಪ್ರಕಾಶ್ ರಾಜ್.. ಭಕ್ತರೇ ವಸಿ ತಡ್ಕಳ್ರಪ್ಪ.. ನಿಜ ಗೊತ್ತಾಗೋವರೆಗೂ ತಡ್ಕಳಿ. ಆರೋಪ ಬಂದಿದೆ. ದಾಖಲೆಗಳನ್ನೆಲ್ಲ ಕೊಟ್ಟಿದ್ದೇನೆ ಎಂದು ಉತ್ತರ ಕೊಟಿದ್ದಾರೆ.



