ದೇವೇಗೌಡರಿಗೆ ವಯಸ್ಸಾಗುವುದಿಲ್ಲ. ಅಯೋಧ್ಯೆಯ ರಾಮಲಲ್ಲ ಪ್ರತಿಷ್ಠಾಪನೆಗೆ ಹೋಗಿ, ರಾಮಲಲ್ಲನ ಆಶೀರ್ವಾದ ಪಡೆದ ದೊಡ್ಡಗೌಡ್ರು, ವಾಪಸ್ ಬಂದು ಮನೆಯಲ್ಲಿ ಹಮ್ಮಿಕೊಂಡಿದ್ದ ಯಾಗದಲ್ಲಿಯೂ ಭಾಗಿಯಾದ್ರು. ಮರುದಿನವೇ ದೇವೇಗೌಡರು ಹಾಸನದಲ್ಲಿದ್ದರು. ಅಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡುತ್ತಲೇ, ಮಗ ಎಚ್.ಡಿ.ರೇವಣ್ಣ ಅವರಿಗೆ ಬುದ್ದಿವಾದವನ್ನೂ ಹೇಳಿದ್ಧಾರೆ ದೇವೇಗೌಡ.
ಚನ್ನರಾಯಪಟ್ಟಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡ ರೇವಣ್ಣ ತುಂಬಾ ಕೆಲಸ ಮಾಡುತ್ತಾರೆ. ಅದರೆ ಅವರು ಜನರ ಜತೆ ಮಾತನಾಡುವಾಗ ಸ್ವಲ್ಪ ಕೋಪದಲ್ಲಿ ಮಾತನಾಡುತ್ತಾರೆ. ಅದನ್ನು ತಿದ್ದಿಕೊಳ್ಳಬೇಕು ಎಂದು ಬುದ್ದಿ ಹೇಳಿದ್ದಾರೆ. ರೇವಣ್ಣ ಅವರ ಕೆಲಸಕ್ಕೆ ಯಾವ ಮಂತ್ರಿಯೂ ಸಾಟಿ ಇಲ್ಲ. ಆದರೆ ಅವರ ಮುಂಗೋಪ ಬಿಟ್ಟರೆ ಎಲ್ಲವೂ ಸರಿಯಾಗುತ್ತೆ ಎಂದು ಗದರುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಇದೇ ವೇಳೆ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ್ಧಾರೆ. ಜೊತೆಗೊಂದು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ 44 ಸಾವಿರ ಮತ ಲೀಡ್ ಇತ್ತು. ಈ ಬಾರಿ ಎಂಎಲ್‌ಎ ಚುನಾವಣೆಯಲ್ಲಿ ಕೇವಲ 6.5 ಸಾವಿರ ಲೀಡ್‌ಗೆ ಬಂದಿದೆ. ನಿಮಗೆ ತಲೆಬಾಗಿ ನಮಸ್ಕಾರ ಮಾಡುತ್ತೇನೆ. ಪ್ರಜ್ವಲ್ ರೇವಣ್ಣಗೆ ಕಳೆದ ಬಾರಿ ಇದ್ದ 44 ಸಾವಿರ ಲೀಡನ್ನೇ ಕೊಡಬೇಕು’ ಎಂದು ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತ ಯಾಚನೆ ಮಾಡಿದ್ಧಾರೆ.
ವಿಧಾನಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಂಡಿದ್ದರೂ, ಲೀಡ್ ಕಡಿಮೆಯಾಗಿದೆ. ಕಾಂಗ್ರೆಸ್ಸಿನ ಶಿವಲಿಂಗೇ ಗೌಡರು ಗೆದ್ದಿದ್ದರೂ, ಅವರ ಬೇಸ್ ಇದ್ದದ್ದು ಜೆಡಿಎಸ್ʻನಲ್ಲಿ. ಇನ್ನು ಕಳೆದ ಬಾರಿ ಬಿಜೆಪಿಯ ಪ್ರೀತಂ ಗೌಡ ಅವರ ಹಾಸನ ಕ್ಷೇತ್ರವನ್ನು ಪರ್ಸನಲ್ ಆಗಿ ತೆಗೆದುಕೊಂಡು ಹೋರಾಟ ನಡೆಸಿದ್ದ ದೇವೇಗೌಡರ ಕುಟುಂಬ, ಈ ಬಾರಿ ಅದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪ್ರಚಾರ ನಡೆಸಬೇಕಾದ ಪರಿಸ್ಥಿತಿ ಬಂದಿರುವುದು ವಿಚಿತ್ರ. ಈ ಸಭೆಯ ಮೂಲಕ ಹಾಸನ ಲೋಕಸಭೆಗೆ ಪ್ರಜ್ವಲ್ ರೇವಣ್ಣನವರೇ ಕ್ಯಾಂಡಿಡೇಟ್ ಅನ್ನೋದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ ದೇವೇಗೌಡ.
ನಾನು ಪ್ರಧಾನಿ ಆಗಿ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದೆ, ಆದರೂ ಈ ಕಾಂಗ್ರೆಸ್‌ನವರು ಯಾಕೆ ತೆಗೆದ್ರು? ಕುಮಾರಸ್ವಾಮಿ 13 ತಿಂಗಳು ಮುಖ್ಯಮಂತ್ರಿ ಆಗಿದ್ದರು. ಅವರನ್ನು ತೆಗೆದದ್ದು ಯಾರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ‘ಹೇಮಾವತಿ ನೀರನ್ನು ಕಾವೇರಿ ಮೂಲಕ ತಮಿಳುನಾಡಿಗೆ ಬಿಡಿ ಎಂದು ಆದೇಶ ಆಗಿದೆ. ಈ ವಿಚಾರದಲ್ಲಿ ಹೋರಾಟ ಮಾಡುವ ಯೋಗ್ಯತೆ ಇಲ್ಲ. ಕಾವೇರಿ ವಿಚಾರ ಬಂದಾಗ ನಾನು ರಾಜ್ಯ ಸಭೆಯಲ್ಲಿ ಮುಷ್ಠಿ ಹಿಡಿದು ಟೇಬಲ್ ಗುದ್ದಿ ಮೇಲೆದ್ದು ಮಾತನಾಡಿದ್ದೇನೆ, ರಾಜಕೀಯ ದೇವೇಗೌಡರ ಕುಟುಂಬದ ಆಸ್ತಿಯಾ ಎಂದು ಕೇಳುತ್ತಾರೆ. ಹೌದು ಇದು ನನ್ನ ಆಸ್ತಿ ಅಲ್ಲಾ, ಮುಸ್ಲಿಮರಿಗೆ 4% ಮೀಸಲಾತಿ ತೆಗದಿದ್ದರು. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಾಗ ಅದನ್ನು ವಾಪಾಸ್ ತೆಗೆಯುತ್ತೇವೆ ಎಂದರು. ಅಧಿಕಾರಕ್ಕೆ ಬಂದರಲ್ಲಾ ತೆಗೆದಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.



