ಬೆಂಗಳೂರಿನಲ್ಲಿ (Bengaluru) ಐವರು ಶಂಕಿತ ಉಗ್ರರು ಅರೆಸ್ಟ್ ಆಗಿದ್ದಾರೆ. (LET. Lashkar e thoiba) ಲಷ್ಕರ್ ಇ ತೊಯ್ಬಾ ಜೊತೆ ಸಂಪರ್ಕ ಇತ್ತು ಎಂದು ಪೊಲೀಸ್ ಕಮಿಷನರ್ ಕೂಡಾ ಹೇಳಿದ್ದಾರೆ. ಆರೋಪಿಗಳ ಬಳಿ ರಿವಾಲ್ವರ್, ಗ್ರೈನೇಡ್, ಬುಲೆಟ್ಸ್ ಮೊದಲಾದ ಸ್ಪೋಟಕಗಳೂ ಸಿಕ್ಕಿವೆ. ರಾಜ್ಯದ ಸಿಸಿಬಿ ಪೊಲೀಸರು (Bengaluru CCB) ಮತ್ತು ಕೇಂದ್ರ ಗುಪ್ತಚರ ಇಲಾಖೆ (central intelegence) ಜಂಟಿ ಕಾರ್ಯಾಚರಣೆಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಆರೋಪಿಗಳು ಸ್ಯಾಟಲೈಟ್ ಫೋನ್ ಬಳಸಿ ಸಿಕ್ಕಿಬಿದ್ದಿದ್ದಾರೆ.
ಆದರೆ (Home Minister) ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar), ಅವರನ್ನು ಟೆರರಿಸ್ಟ್ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಬಂಧಿತರು ಕೆಲವು ಕೃತ್ಯ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ಬೆಂಗಳೂರು ಹಾಗೂ ಇತರೆಡೆಗೆ ಅಪಾಯಕಾರಿ ವಿಚಾರ. ಅವರನ್ನು ವಿಚಾರಣೆ ಮಾಡಿ ಟೆರರಿಸ್ಟ್ ಕನೆಕ್ಷನ್ ಇದೆಯಾ ಅಂತ ನೋಡುತ್ತಿದ್ದಾರೆ. ಅದನ್ನು ನೋಡಿ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವರು (G.Parameshwar) ಪ್ರತಿಕ್ರಿಯಿಸಿದ್ದಾರೆ.
ಎನ್‍ಐಎಗೆ (NIA) ತನಿಖೆ ವಹಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಈ ಉತ್ತರ ನೀಡಿರುವ ಸಚಿವ ಪರಮೇಶ್ವರ್ (G.Parameshwar) ಅವರು ವಾಕಿಟಾಕಿ ಯಾಕೆ ಉಪಯೋಗಿಸುತ್ತಿದ್ದರು? ಅದನ್ನು ಯಾಕೆ ವಿರೂಪ ಮಾಡಿದ್ದರು ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯಲಿದೆ. ಮೊದಲು ನಮ್ಮ ಪೊಲೀಸರು ತನಿಖೆ ನಡೆಸಿದ ಬಳಿಕ ಎನ್ಐಎ ತನಿಖೆ ಆಗ್ರಹ ವಿಚಾರ ಎಂದಿದ್ದಾರೆ.
ಕೆಲವರು ಕೊಲೆ, ದರೋಡೆ ಸೇರಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಲವರು ಬೇಲ್ ಮೇಲೆ ಬಿಡುಗಡೆಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಸಿಸಿಬಿಗೆ (CCB) ವರ್ಗಾವಣೆ ಮಾಡಲಾಗಿದೆ. ಯಾವ ಸಂಘಟನೆ ಜತೆ ಗುರುತಿಸಿಕೊಂಡಿದ್ದರು ಎಂಬ ಬಗ್ಗೆ ತನಿಖೆಯಲ್ಲಿ ತಿಳಿಯಬೇಕಿದೆ ಎನ್ನುವುದು ಪರಮೇಶ್ವರ್ (G.Parameshwar) ವಾದ. ಐವರು ಶಂಕಿತ ಉಗ್ರರು 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಶಂಕಿತ ಉಗ್ರರಾದ ಸಯ್ಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್, ಜಾಹಿದ್ 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿದೆ.



