Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಶಿವಣ್ಣನ ಘೋಸ್ಟ್ ಎದುರು ಬಂದರೂ  ಲಿಯೋ 14 ಕೋಟಿ ಕಲೆಕ್ಷನ್ : ಕರ್ನಾಟಕದ ಪ್ರೇಕ್ಷಕರಿಗೆ ಮಾತ್ರ ನಾಮ

SpeciallU by SpeciallU
October 21, 2023
in Cinema, News
Reading Time: 1 min read
0 0
0
ಶಿವಣ್ಣನ ಘೋಸ್ಟ್ ಎದುರು ಬಂದರೂ  ಲಿಯೋ 14 ಕೋಟಿ ಕಲೆಕ್ಷನ್ : ಕರ್ನಾಟಕದ ಪ್ರೇಕ್ಷಕರಿಗೆ ಮಾತ್ರ ನಾಮ

ಲಿಯೋ ಮೊದಲ ದಿನದ ಕಲೆಕ್ಷನ್ 140 ಕೋಟಿ. ಶಿವಣ್ಣ ಅಭಿನಯದ ಘೋಸ್ಟ್ ಎದುರು ಬಂದಿದ್ದರೂ, ಘೋಸ್ಟ್ ಚಿತ್ರದ ಕಲೆಕ್ಷನ್ ಲಿಯೋ ಚಿತ್ರದ ಹತ್ತಿರಕ್ಕೂ ಬಂದಿಲ್ಲ. ಕರ್ನಾಟಕದಲ್ಲಿ ಲಿಯೋ ಕಲೆಕ್ಷನ್ 14 ಕೋಟಿಯ ಹತ್ತಿರಹತ್ತಿರ ಇದ್ದರೂ, ಘೋಸ್ಟ್ ಕಲೆಕ್ಷನ್ ಅದರ ಅರ್ಧದಷ್ಟೂ ಬಂದಿಲ್ಲ. ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಇಷ್ಟು ದೊಡ್ಡ ಮಾರ್ಕೆಟ್ ಇದೆ ಅನ್ನೋದು ಗೊತ್ತಾಗಿ ಚಿತ್ರರಂಗ ಶಾಕ್ ಆಗಿದೆ. ಏಕೆಂದರೆ ಈ ಹಿಂದೆ ಈ ಮಟ್ಟದ ಕಲೆಕ್ಷನ್ ಮಾಡಿದ್ದ ಚಿತ್ರಗಳೆಂದರೆ ಬಾಹುಬಲಿ ಮತ್ತು ಆರ್.ಆರ್.ಆರ್. ಆ ಚಿತ್ರಗಳಿಗೆ ದೊಡ್ಡ ನಿರೀಕ್ಷೆ ಇತ್ತು. ಅದಾದ ಮೇಲೆ ರಜನಿಕಾಂತ್ ಚಿತ್ರ ಜೈಲರ್ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಗುತ್ತಿತ್ತು. ರಜನಿಕಾಂತ್ ಸಿನಿಮಾ ಅಲ್ವೇ ಎಂದುಕೊಳ್ಳುತ್ತಿದ್ದವರಿಗೆ ದೊಡ್ಡ ಅಚ್ಚರಿ ನೀಡಿದೆ ಲಿಯೋ ಬಾಕ್ಸಾಫೀಸ್ ಕಲೆಕ್ಷನ್. ಏಕೆಂದರೆ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 140 ಕೋಟಿ. ಆ 140 ಕೋಟಿಯಲ್ಲಿ ಶೇ.10ರಷ್ಟು ಪಾಲು ಕರ್ನಾಟಕದ್ದು, ಅದರಲ್ಲೂ ಬೆಂಗಳೂರಿನದ್ದು. ಅಂದರೆ ಸುಮಾರು 13ರಿಂದ 14 ಕೋಟಿ.

ಸದ್ಯದ ಬಾಕ್ಸ್ ಆಫೀಸ್ ಮೂಲಗಳ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾ ಎಂಬ ಖ್ಯಾತಿಗೆ ‘ಲಿಯೋ’ ಪಾತ್ರವಾಗಿದೆ. ರಜನಿಕಾಂತ್, ಅಜಿತ್ ಅವರಂತಹ ಸ್ಟಾರ್ ನಟರ ಸಿನಿಮಾಗಳು ಈವರೆಗೂ ಕರ್ನಾಟಕದಲ್ಲಿ ಮೊದಲ ದಿನ ಗಳಿಸಿದ್ದ ಕಲೆಕ್ಷನ್ಗಿಂತಲೂ ಅಧಿಕ ಹಣವನ್ನು ಲಿಯೋ ಬಾಚಿಕೊಂಡಿದೆ. ಇದು ಹೊಸ ದಾಖಲೆ ಆಗಿದೆ. ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾವು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಂದ 16 ಕೋಟಿ ರೂ. ಬಾಚಿಕೊಂಡಿದೆ. ಕೇರಳದಲ್ಲಿ 11 ಕೋಟಿ ರೂ. ಗಳಿಸಿದೆ. ಒಟ್ಟಾರೆ, ವಿಶ್ವಾದ್ಯಂತ 140+ ಕೋಟಿ ರೂಪಾಯಿ ಗಳಿಕೆ ಆಗಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಅಂದಹಾಗೆ ಇದು ಇಷ್ಟೊಂದು ಕಲೆಕ್ಷನ್ ಮಾಡಿದ್ದು ಹೇಗೆ? ಇಲ್ಲಿದೆ ನೋಡಿ ಲೆಕ್ಕ. ಇದೇ ಲಿಯೋಗೆ ತಮಿಳುನಾಡಿನಲ್ಲಿ ಪ್ರೇಕ್ಷಕರು ಕೊಟ್ಟ ದುಡ್ಡು ಬೇರೆ. ಕರ್ನಾಟಕದವರು ಕೊಟ್ಟ ಹಣ ಬೇರೆ.

ಕರ್ನಾಟಕ ಪ್ರೇಕ್ಷಕರಿಗೆ ಮಾತ್ರ ನಾಮ..!

ಲಿಯೋಗೆ ತಮಿಳುನಾಡಿನಲ್ಲಿ ಗರಿಷ್ಠ ಟಿಕೆಟ್ ದರ 199 ರೂ. ಇದ್ದರೆ, ಹೈದರಾಬಾದಿನಲ್ಲಿ 299 ರೂ. ಗಡಿ ದಾಟಲಿಲ್ಲ. ಆದರೆ ಬೆಂಗಳೂರಿನಲ್ಲಿ ಲಿಯೋ’ ಸಿನಿಮಾದ ಟಿಕೆಟ್ 2 ಸಾವಿರ ರೂ. ಗಡಿ ದಾಟಿತ್ತು! ಕೆಲವು ಮಲ್ಟಿಪ್ಲೆಕ್ಸ್ನ ಗೋಲ್ಡ್ ಕ್ಲಾಸ್ ಸ್ಕ್ರೀನ್ಗಳ ಟಿಕೆಟ್ ದರ 2,400 ರೂ. ಆಗಿತ್ತು. ಒಂದು ಟಿಕೆಟ್ಗೆ ಕೆಲ ಮಲ್ಟಿಪ್ಲೆಕ್ಸ್ನಲ್ಲಿ 1500-1800 ರೂ. ದರವನ್ನು ಫಿಕ್ಸ್ ಮಾಡಿದ್ರು. ಸಿಂಗಲ್ ಸ್ಕ್ರೀನ್ನಲ್ಲೂ ಟಿಕೆಟ್ ದರ 300-400 ರೂ. ವರೆಗೂ (ಕೆಲವು ಕಡೆ 500 ರೂ.ನಿಂದ 800 ರೂ.ವರೆಗೂ ಇತ್ತು) ತಲುಪಿತ್ತು. ಇನ್ನೂ ಕೆಲವು ಕಡೆ ಇದಕ್ಕಿಂತಲೂ ಹೆಚ್ಚು ಇತ್ತು. ಇದೆಲ್ಲದರ ಅನುಕೂಲ ಲಿಯೋ ಟೀಮ್ ಭಾರಿ ಕಮಾಯಿ ಮಾಡಿಕೊಂಡಿದೆ.

ತಮಿಳುನಾಡಿನಲ್ಲಿ ಪ್ರೇಕ್ಷಕರಿಗೆ ದೊಡ್ಡ ದರ ವಿಧಿಸಬಾರದು ಎಂದು ವಾದ ಮಾಡುವ ಇದೇ ಚಿತ್ರನಟರು ಬೆಂಗಳೂರಿನ ವಿಷಯಕ್ಕೆ ಬಂದರೆ ಬದಲಾಗಿಬಿಡುತ್ತಾರೆ. ದುಡ್ಡು ಮುಖ್ಯ. ಅಂದಹಾಗೆ ಕನ್ನಡಿಗರಿಗೆ.. ಸಿನಿಮಾ ಆದರೆ ಸಾಕು. ಭಾಷೆ ಮುಖ್ಯವಲ್ಲ.

ವಿಜಯ್ ನಟನೆಯ ‘ಲಿಯೋ’ ಸಿನಿಮಾವು ಫ್ಯಾಮಿಲಿ ಡ್ರಾಮಾ ಜೊತೆಗೆ ಅಂಡರ್ವರ್ಲ್ಡ್ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಲಿಯೋ ದಾಸ್ ಮತ್ತು ಪಾರ್ಥಿಬನ್ ಎಂಬ ಎರಡು ಶೇಡ್ನ ಪಾತ್ರವನ್ನು ನಟ ವಿಜಯ್ ನಿಭಾಯಿಸಿದ್ದು, ಅವರಿಗೆ ಪತ್ನಿಯಾಗಿ ತ್ರಿಷಾ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಮತ್ತು ಅರ್ಜುನ್ ಸರ್ಜಾ ಅವರು ವಿಲನ್ಗಳಾಗಿ ನಟಿಸಿದ್ದು, ಮನ್ಸೂರ್ ಅಲಿ ಖಾನ್, ಮಡೋನಾ ಸೆಬಾಸ್ಟಿನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್ ಮುಂತಾದವರು ನಟಿಸಿದ್ದಾರೆ.

Tags: #ಲಿಯೋ #ಘೋಸ್ಟ್ #ಶಿವಣ್ಣ #14ಕೋಟಿ #ಕಲೆಕ್ಷನ್ #Leo #Ghost #Shivanna #14crore #Collection
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.