14 ತಿಂಗಳು. ಅಂದರೆ ಒಂದು ವರ್ಷ ಎರಡು ತಿಂಗಳು ಸೆರೆವಾಸ. ಮುರುಘಾ ಮಠದ ಪೀಠಾಧಿಪತಿಯಾಗಿದ್ದ ಶಿವಮೂರ್ತಿ Murugha seer, ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಈ ವ್ಯಕ್ತಿಯ ಮೇಲಿರುವ ಆರೋಪಗಳು ಸಣ್ಣದ್ದಲ್ಲ. ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಆರೋಪ (Pocso case accused) ಹೊತ್ತಿರುವ ಮುರುಘಾಶ್ರೀ, ಮಕ್ಕಳನ್ನು ಆಮಿಷ ಒಡ್ಡಿ, ಭಯ ತೋರಿಸಿ ಲೈಂಗಿಕ ತೃಷೆ (sexual harassment) ತೀರಿಸಿಕೊಂಡ ಆರೋಪ ಎದುರಿಸುತ್ತಿರುವ ವ್ಯಕ್ತಿ. ಆದರೆ ಇಂತಹ ಗಂಭೀರ ಆರೋಪ ಹೊತ್ತಿದ್ದರೂ ಮುರುಘಾ ಶ್ರೀ ಜನಪ್ರಿಯತೆ ಕಡಿಮೆಯಾಗಿಲ್ಲ. ವಿಚಿತ್ರವಾದರೂ ಇದು ಸತ್ಯ.
ಹಲವು ಮಠಗಳ ಸ್ವಾಮಿಗಳಿಂದ ಮುರುಘಾ ಶ್ರೀ ಭೇಟಿ : ಮುರುಘಾ ಶರಣರಿಗೆ ಜೈಲಿಂದ ಹೊರಬಂದಾಗ ಭಕ್ತರು ಹೂಮಳೆಯ ಸ್ವಾಗತ ನೀಡಿದ್ದು ವಿಶೇಷ. ಅಷ್ಟೇ ಅಲ್ಲ, 14 ತಿಂಗಳ ಸೆರೆವಾಸದಿಂದ ಜೈಲಿನಿಂದ ಬಿಡುಗಡೆಯಾದ ಶಿವಮೂರ್ತಿ ಮುರುಘಾ ಶರಣರು ಸಧ್ಯ ದಾವಣಗೆರೆ ವಿರಕ್ತ ಮಠದ ನೆಲೆಸಿದ್ದಾರೆ. ಮುರುಘಾ ಶ್ರೀಗಳನ್ನು ಭೇಟಿಯಾಗಲು ವಿವಿಧ ಮಠಾಧೀಶರು ವಿರಕ್ತ ಮಠದತ್ತ ಆಗಮಿಸುತ್ತಿದ್ದಾರೆ. ದಾವಣಗೆರೆಯ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ಚಿತ್ರದುರ್ಗದ ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀಗಳು, ಮಡಿವಾಳ ಮಾಚಿದೇವ ಸ್ವಾಮೀಜಿ, ಸೇರಿದಂತೆ ಹಲವು ಮಠಾಧೀಶರು ಆಗಮಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ.
ವಿಶ್ರಾಂತಿಗೆ ಜಾರಿರುವ ಮುರುಘಾ ಶರಣರನ್ನು ಕಾಣಲು ಭಕ್ತರ ಮಠದ ಆವರಣದಲ್ಲಿ ಕಾದು ಕೂತಿದ್ದಾರೆ. ಅಲ್ಲದೆ ಮುಸ್ಲಿಂ ಮುಖಂಡರು ಹಾಗು ಮುಸ್ಲಿಂ ಸಮಾಜ ಸಾಕಷ್ಟು ಜನ ಶ್ರೀಗಳನ್ನು ಕಾಣಲು ಆಗಮಿಸುತ್ತಿರುವುದು ವಿಶೇಷವಾಗಿದೆ. ಇನ್ನು ಕುತೂಹಲ ಏನೇಂದ್ರೇ ದಾವಣಗೆರೆಗೆ ಆಗಮಿಸು ಮೊದಲು ಮುರುಘಾ ಶರಣರು ಕೋರ್ಟ್ ವಿಸಿಗೆ ಆಟೆಂಡ್ ಆಗಿ ಶಿವಯೋಗಿ ಮಂದಿರಕ್ಕೆ ಆಗಮಿಸಿದ್ದು, ಇದೀಗ 03 ಗಂಟೆಗೊಂದು ವಿಸಿಗೆ ಅಟೆಂಡ್ ಆಗಲಿದ್ದಾರೆಂದು ವಕೀಲ ಪ್ರತಾಪ್ ಜೋಗಿ ಮಾಹಿತಿ ನೀಡಿದ್ದಾರೆ. ಇನ್ನು ದಾವವಣಗೆರೆ ವಿರಕ್ತ ಮಠದಲ್ಲಿ ನೆಲೆಸಿರುವ ಮುರುಘಾ ಶರಣರು ಅಪ್ತರ ಕೋಣೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ. ಕೆಲ ಅತ್ಯಪ್ತ ಭಕ್ತರು ಮುಖಂಡರು ವಿರಕ್ತ ಮಠಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
ಮೌನವಾಗಿರುತ್ತೇನೆ ಎಂದು ಸಂದೇಶ ನೀಡಿದ ಮುರುಘಾಶ್ರೀ :
ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠಕ್ಕೆ ಭೇಟಿ ನೀಡುವ ಮುನ್ನ ಮಾತನಾಡಿದ ಅವರು ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ, ಭಕ್ತರಿಗೆ ಮೌನವೇ ದೊಡ್ಡ ಸಂದೇಶ, ಇದು ಏನೂ ಹೇಳುವ ಸಂದರ್ಭವಲ್ಲ, ಯಾವುದನ್ನೂ ಹೇಳಲ್ಲ, ನಿಮ್ಮನ್ನೂ ಮತ್ತೊಮ್ಮೆ ಕರೆಯಿಸಿ ಮಾತನಾಡುತ್ತೇನೆ, ಚಿಂತೆ ಬೇಡ, ಈಗ ಸಂದೇಶ ಕೊಡುವ ಕಾಲವಲ್ಲ, ಎರಡನೇ ಕೇಸ್ ಕಾನೂನು ತೊಡಕು ಹಿನ್ನಲೆಯಲ್ಲಿ ವಿಚಾರಣೆ ನಡೀತಾ ಇದೆ, ಏನೂ ಹೇಳಲ್ಲ, ಭಕ್ತರು ಎಲ್ಲಿ ವ್ಯವಸ್ಥೆ ಮಾಡುತ್ತಾರೋ ಅಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾರೆ.



