ರಮ್ಯಾ ಕಂಬ್ಯಾಕ್ ಮಾಡುತ್ತಿದ್ದಾರೆ. ನಟಿಯಾಗಿ ಕಂಬ್ಯಾಕ್ ಮಾಡುವುದಕ್ಕಿನ್ನೂ ಸಮಯ ಇದೆ. ಆದರೆ ಈ ಬಾರಿ ನಿರ್ಮಾಪಕಿಯಾಗಿ ಕಂಬ್ಯಾಕ್ ಮಾಡಿದ್ದಾಗಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ.. ರಿಲೀಸ್ ಆಗಿದೆ. ಆದರೆ ರಮ್ಯಾ ಕಾಣ್ತಾ ಇಲ್ಲ. ಪ್ರಚಾರದಲ್ಲಿ, ಟ್ರೇಲರ್ ರಿಲೀಸ್ ವೇಳೆ ಎಲ್ಲಿಯೂ ರಮ್ಯಾ ಇಲ್ಲ. ಮಿಸ್ಸಿಂಗ್. ಅದಕ್ಕೆ ಕಾರಣವಿದೆ.
ಸ್ವಾತಿ ಮುತ್ತಿನ ಮಳೆ ಹನಿಯೇ..
ಚಿತ್ರಮಂದಿರದಲ್ಲಿ ಭಾವುಕತೆಯ ಮಳೆ ಸುರಿಸುತ್ತಿದೆ. ಈ ಚಿತ್ರ ರಾಜ್ ಬಿ.ಶೆಟ್ಟಿ ಅವರಿಗೂ ಸ್ಪೆಷಲ್. ರಮ್ಯಾಗೂ ಸ್ಪೆಷಲ್. ಏಕೆಂದರೆ ಗರುಡ ಗಮನ, ವೃಷಭ ವಾಹನ ಹಾಗೂ ಟೋಬಿಯ ನಂತರ ಬೇರೆಯದೇ ಲುಕ್ ಹಾಗೂ ಪಾತ್ರದ ಮೂಲಕ ರಾಜ್ ಬರುತ್ತಿದ್ದಾರೆ. ಅದೇ ವೇಳೆ ರಮ್ಯಾ ನಿರ್ಮಾಪಕಿಯಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ನಿರ್ಮಾಪಕಿ ಕ್ವೀನ್ ರಮ್ಯಾ. ಆ್ಯಪಲ್ ಬಾಕ್ಸ್ ಅನ್ನೋ ಸಂಸ್ಥೆ ಹುಟ್ಟಾಗಿ ಅದರಡಿಯಲ್ಲೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮ್ಯಾ ನಿರ್ಮಾಪಕಿ ಆಗಿ ಡೆಬ್ಯೂ ಆಗ್ತಿರೋ ಫಸ್ಟ್ ಸಿನಿಮಾ ಇದು.
ಅಭಿ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಮ್ಯಾ, ಪರೋಕ್ಷವಾಗಿ ಕೆಲವು ಚಿತ್ರಗಳಿಗೆ ನೆರವು ನೀಡಿದ್ದರೇ ಹೊರತು, ಖುದ್ದು ನಿರ್ಮಾಪಕಿಯಾಗಿರಲಿಲ್ಲ. ಆದರೆ ಈ ಬಾರಿ ಆಪಲ್ ಬಾಕ್ಸ್ ಅನ್ನೋ ಸಂಸ್ಥೆಯ ಮೂಲಕ ಪ್ರೊಡ್ಯೂಸರ್ ಆಗಿದ್ದಾರೆ. ಆದರೆ ಪ್ರಚಾರಕ್ಕೆ ಮಾತ್ರ ಬರ್ತಾ ಇಲ್ಲ.
ನಟನೆ ಜತೆಗೆ ನಿರ್ದೇಶನ ಮಾಡಿರುವ ರಾಜ್ ಬಿ ಶೆಟ್ಟಿ ಅವರದ್ದು ಸಾವಿಗೆ ಎದುರು ನೋಡುತ್ತಿರುವ ವ್ಯಕ್ತಿಯ ಪಾತ್ರ. ಕೌನ್ಸಿಲರ್ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್ ಅಭಿನಯಿಸಿದ್ದಾರೆ. ರಾಜ್ ಬಿ ಶೆಟ್ಟಿಯದ್ದು ಆ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರುವ ಪೇಷೆಂಟ್ ರೋಲ್. ಬರೀ 18 ದಿನದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಮುಗಿಸಿದ್ದಾರೆ ರಾಜ್ ಬಿ ಶೆಟ್ಟಿ.
ನನ್ನ ಇದುವರೆಗಿನ ಸಿನಿಮಾಗಳಲ್ಲಿಯೇ ಇದೊಂದು ಕಾಂಪ್ಲಿಕೇಟೆಡ್ ಸಬ್ಜೆಕ್ಟ್ ಇರುವ ಸಿನಿಮಾ. ಈ ಸಿನಿಮಾ ನೋಡಿದವರು ಅನ್ʻಕಂಫರ್ಟಬಲ್ ಆಗುತ್ತಾರೆ. ಸಾವಿಗೆ ಹತ್ತಿರವಾಗಿರುವ ಆದರೆ ಮಾನಸಿಕವಾಗಿ ಸ್ಟ್ರಾಂಗ್ ಇರುವ ವ್ಯಕ್ತಿಯ ಪಾತ್ರ ಇದು. ಬಂದಿದ್ದು ಬಂದ ಹಾಗೆ ಸ್ವೀಕರಿಸುವ ವ್ಯಕ್ತಿಯ ಪಾತ್ರ ಎಂದು ಹೇಳಿಕೊಂಡಿದ್ದಾರೆ ರಾಜ್ ಬಿ ಶೆಟ್ಟಿ ಅಲಿಯಾಸ್ ಅನಿಕೇತ್.
ಅನಿಕೇತ್ ಅನ್ನೋದು ಅವರ ಪಾತ್ರದ ಹೆಸರು. ಕೌನ್ಸಿಲರ್ ಆಗಿ ನಟಿಸಿರುವ ಪ್ರೇರಣಾ ಅಲಿಯಾಸ್ ಸಿರಿ ರವಿ ಕುಮಾರ್ ಅವರದ್ದು, ಸಾವಿನ ಅಂಚಿನಲ್ಲಿರುವ ವ್ಯಕ್ತಿಗೆ ಧೈರ್ಯ ತುಂಬುವ ಪಾತ್ರ. ಆದರೆ ರಮ್ಯಾ ಬರುತ್ತಿಲ್ಲ ಏಕೆ?
ರಮ್ಯಾಗೆ 40 ವರ್ಷ ದಾಟಿದೆ. ತುಸು ದಪ್ಪಗಾಗಿದ್ಧಾರೆ. ಸ್ಲಿಮ್ ಆಗಿರಬೇಕು ಎಂದು ಹಠಕ್ಕೆ ಬಿದ್ದಿರೋ ರಮ್ಯಾ, ಉತ್ತರಕಾಂಡ ಚಿತ್ರಕ್ಕೆ ಸಜ್ಜಾಗುತ್ತಿದ್ಧಾರೆ. ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಯಾಗಿಯೂ ವಾಪಸ್ ಆಗುತ್ತಿದ್ಧಾರೆ. ಆ ಚಿತ್ರದಲ್ಲಿ ರಮ್ಯಾ ಶಿವಣ್ಣಗೆ ಹೀರೋಯಿನ್ ಆಗಿದ್ದಾರೆ. ಶಿವಣ್ಣ ಈಗಲೂ ಸ್ಲಿಮ್ & ಸ್ಮಾರ್ಟ್. ಹೀಗಿರುವಾಗ ರಮ್ಯಾ ದಪ್ಪಗಿದ್ದರೆ ಏನು ಚೆಂದ.. ಅದನ್ನು ಯಾರೋ ಹೇಳಿದ್ದಲ್ಲ, ಖುದ್ದು ರಮ್ಯಾಗೆ ಹಾಗೆ ಅನ್ನಿಸಿ ಪ್ರಿಪೇರ್ ಆಗುತ್ತಿದ್ದಾರಂತೆ. ಉತ್ತರಕಾಂಡ ಚಿತ್ರದ ಪ್ರಚಾರದಲ್ಲಿ ಕಂಪ್ಲೀಟ್ ಕಾಣಿಸಿಕೊಳ್ಳೋ ರಮ್ಯಾ, ನಾವು ನೋಡಿದ್ದು ಅದೇ ರಮ್ಯಾನಾ.. ಬೇರೆ ರಮ್ಯಾನಾ ಎಂದು ಕನ್ʻಫ್ಯೂಸ್ ಆಗೋದು ಗ್ಯಾರಂಟಿ. ಯಾಕಂದ್ರೆ ರಮ್ಯಾ ಅಭಿ ಚಿತ್ರದ ರಮ್ಯಾ ಅವರಷ್ಟೇ ಕ್ಯೂಟ್ ಆಗಲಿದ್ಧಾರಂತೆ.



