ಪಿಯುಸಿ ಆಗಿದೆ. ಕೆಲಸ ಸಿಗ್ತಿಲ್ಲ. ಡಿಗ್ರಿ ಮಾಡ್ಕೊಂಡಿದ್ದೀನಿ, ಆದರೆ ಯಾವುದೇ ಜಾಬ್ ಆಗ್ತಾ ಇಲ್ಲ. ದುಡ್ಡು ಬೇಕು, ಕೆಲಸ ಇಲ್ಲ.. ಹೀಗೆ ಪರದಾಡುವ ಕೋಟ್ಯಂತರ ಮಂದಿಗೆ ಉದ್ಯೋಗದ ಓಪನ್ ಅವಕಾಶಗಳಿವೆ.ದ್ವಿತೀಯ ಪಿಯುಸಿ / ಪದವಿ ಹೀಗೆ ಯಾವುದೇ ಶಿಕ್ಷಣ ಪಾಸ್ ಮಾಡಿದ್ದು, ಮುಂದೆ ಓದಲು ಆಸಕ್ತಿ ಇಲ್ಲ. ಆದರೆ ಹಣ ಗಳಿಸಲು ಯಾವುದಾದರೂ ಒಂದು ಜಾಬ್ ಬೇಕು ಎನ್ನುವವರಿಗೆ ಆನ್‌ಲೈನ್ ಮೂಲಕ ಮಾಡಬಹುದಾದ ಕೆಲಸಗಳು ಇವೆ. ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ನಿಂದಲೇ ಜನ ಕೆಲಸ ಮಾಡಿ ದುಡ್ಡು ಮಾಡುವ ಅವಕಾಶಗಳೂ ಇವೆ. ಅಂತಹ 10 ಉದ್ಯೋಗಗಳ ಲಿಸ್ಟ್ ಇಲ್ಲಿದೆ.
ಫ್ರೀಲಾನ್ಸ್ ರೈಟಿಂಗ್ :
ಫ್ರೀಲ್ಯಾನ್ಸ್ ರೈಟರ್ ಅಥವಾ ಹವ್ಯಾಸಿ ಬರವಣಿಗೆಗಾರರಿಗೆ ಉತ್ತಮ ಬೇಡಿಕೆ ಇದೆ. ಒಳ್ಳೆಯ ರೈಟಿಂಗ್ ಇರಬೇಕು. ತಿಯೊಂದು ವ್ಯವಹಾರಕ್ಕೂ ಬರವಣಿಗೆ/ ಉತ್ತಮವಾಗಿ ಹೆಣೆದ ಬರಹಗಳು ಅಗತ್ಯ. ಉತ್ತಮ ಹವ್ಯಾಸಿ ಬರವಣಿಗೆಗಾರರು ಮಾರ್ಕೆಟ್‌ನ ಟ್ರೆಂಡ್ ಯಾವ ರೀತಿ ಇದೆ ಎಂದು ತಿಳಿದು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು. ಈ ಮೂಲಕ ಫ್ರೀಲ್ಯಾನ್ಸ್ ರೈಟರ್ ವೃತ್ತಿಯನ್ನು ಆನ್‌ಲೈನ್ ಮೂಲಕ ಹಣಗಳಿಸಲು ಉಪಯೋಗಿಸಿಕೊಳ್ಳಬಹುದು. ಫ್ರೀಲ್ಯಾನ್ಸ್ ರೈಟರ್ ಉದ್ಯೋಗ ಪಡೆಯಲು ಬರವಣಿಗೆ ಬಲ್ಲವರು ಉತ್ತಮ ಕಾಂಟ್ಯಾಕ್ಟ್‌ಗಳ ಮೂಲಕ ಅಥವಾ
freelancewritersden.com ಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಂಡು ಆನ್‌ಲೈನ್ ಮೂಲಕ ಸಹ ದುಡಿಮೆ ಮಾಡಬಹುದು.
ಭಾಷಾಂತರಕ್ಕೆ ಭರ್ಜರಿ ಡಿಮ್ಯಾಂಡ್ :
ಈ ಕೆಲಸ ಮಾಡುವುದಕ್ಕೆ ಬರವಣಿಗೆ ಜೊತೆಗೆ ಹಲವು ಭಾಷೆಗಳ ಜ್ಞಾನ ಅಗತ್ಯ.ನಿಮ್ಮ ಮಾತೃಭಾಷೆಯ ಜತೆಗೆ ನೀವು ಇಂಗ್ಲಿಷ್, ಹಿಂದಿ, ಕನ್ನಡ ಹೀಗೆ ಇತರೆ ಯಾವುದೇ ಭಾಷೆಗೆ ಭಾಷಾಂತರ ಮಾಡುವ, ಅದರಲ್ಲೂ ವಿಶೇಷವಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‌ಗೆ ಯಾವುದೇ ವಿಷಯವನ್ನು ಭಾಷಾಂತರ ಮಾಡುವ ಕಲೆ ಗೊತ್ತಿದ್ದರೆ, ಮನೆಯಲ್ಲಿ ಕುಳಿತೇ ಸಾವಿರಗಟ್ಟಲೆ ದುಡಿಯಬಹುದು.
ಡಾಟಾ ಎಂಟ್ರಿಗೂ ಡಿಮ್ಯಾಂಡ್ :
ಲ್ಯಾಪ್‌ಟಾಪ್ ಇರುವವರು ಕಂಟೆಂಟ್ ಕಾಪಿ-ಪೇಸ್ಟ್ ಮಾಡುವ, ಮ್ಯಾನೇಜ್ ಮಾಡುವ, ಕ್ಲೈಂಟ್‌ಗಳ ಡಿಜಿಟಲ್/ಇಮೇಜ್ ಅನ್ನು ವರ್ಲ್ಡ್ ಡಾಕುಮೆಂಟ್‌ಗೆ ಬದಲಿಸುವ, ಅಥವಾ ಬೇಕಾದ ಡಾಟಾವನ್ನು ಆನ್‌ಲೈನ್ ಮೂಲಕ ಡಾಟಾ ಎಂಟ್ರಿ ಆಪರೇಟರ್ ಜಾಬ್. ಕಂಪ್ಯೂಟರ್ ಬೇಸಿಕ್ಸ್, ಎಕ್ಸ್ʻಎಲ್ ಶೀಟ್ ಮ್ಯಾನೇಜ್ ಮಾಡುವುದು ಗೊತ್ತಿದ್ದರೆ ಅನುಕೂಲ.
ಸರ್ವೇ ಮಾಡಿ.. ದುಡ್ಡು ಮಾಡಿ :
ಸರ್ವೇ (ಸಮೀಕ್ಷೆ) ಅನ್ನು ಕಂಪನಿಗಳು ತಮ್ಮ ಪ್ರಾಡಕ್ಟ್ ಕುರಿತು ಗ್ರಾಹಕರ ಅಭಿಪ್ರಾಯ ತಿಳಿಯಲು, ಯಾರು ತೆಗೆದುಕೊಳ್ಳುತ್ತಾರೆ ಎಂದು ತಿಳಿಯಲು ನಡೆಸುತ್ತವೆ. ಅಲ್ಲದೇ ಪ್ರಾಡಕ್ಟ್ ಇಷ್ಟವಾಗಿದೆಯೇ, ಇಲ್ಲವೇ ಎಂದು ತಿಳಿಯಲು ಸಹ ಸಮೀಕ್ಷೆಯನ್ನು ನಡೆಸುತ್ತವೆ. ಇಂತಹ ಸಮೀಕ್ಷೆಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಿ ಹಣ ಗಳಿಸಬಹುದು. ಆದರೆ ದುಡ್ಡು ಮಾಡುವ ಆಸೆಯಿಂದ ನಕಲಿ ಸೈಟ್ʻಗಳ ಬಲೆಗೆ ಬೀಳದೆ ಇರುವುದು ಒಳ್ಳೆಯದು. ದಿನಕ್ಕೆ ಕೇವಲ 2-3 ಗಂಟೆ ಕೆಲಸ ಮಾಡಿ 10ರಿಂದ 20 ಸಾವಿರ ದುಡಿಯಿರಿ ಎಂಬ ಆಫರ್ ನಂಬಲು ಅರ್ಹವಾಗಿರುವುದಿಲ್ಲ.
ಡಿಜಿಟಲ್ ಮಾರ್ಕೆಟಿಂಗ್ ರನ್ನಿಂಗ್ :
ಮೊದಲೆಲ್ಲಾ ಯಾವುದೇ ಜಾಹೀರಾತಿಗಾಗಿ ಸಂಸ್ಥೆಗಳು, ಕಂಪನಿಗಳು, ಯಾವುದೇ ಪ್ರಾಡಕ್ಟ್ ಕಂಪನಿಗಳು ದಿನಪತ್ರಿಕೆಗಳನ್ನು ನಂಬಿದ್ದವು. ಅದಾದ ಮೇಲೆ ರೇಡಿಯೋ, ಟಿವಿಗಳು ಬಂದವು. ಆದರೆ ಇಂದು ಆನ್‌ಲೈನ್ ಮೂಲಕ ವಿವಿಧ ವಿಧಾನದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮಾಡಿಸಲು ಮುಂದಾಗುತ್ತವೆ. ಇಂದಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಹ ಒಂದು ಡೀಸೆಂಟ್ ಜಾಬ್. ಯಂಗ್‌ಸ್ಟರ್‌ಗಳು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಪದವೀಧರರು ಸುಲಭವಾಗಿ ಮಾಡಬಹುದಾದ ಆನ್‌ಲೈನ್ ಜಾಬ್ ಇದು. ವಿಡಿಯೋ ಮಾರ್ಕೆಟಿಂಗ್, ಇ-ಮೇಲ್ ಮಾರ್ಕೆಟಿಂಗ್, ಎಸ್‌ಇಒ, ಎಸ್ಇಎಂ, ಕಂಟೆಂಟ್, ಇ-ಕಾಮರ್ಸ್ ಮಾರ್ಕೆಟಿಂಗ್, ವೆಬ್ ಅನಾಲಿಸ್ಟ್, ಮೊಬೈಲ್ ಜಾಹಿರಾತು ಹೀಗೆ ಹಲವು ವಿಧಗಳಲ್ಲಿ ಆನ್‌ಲೈನ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಜಾಬ್ ಮಾಡಬಹುದು.
ವೆಬ್ ಡಿಸೈನರ್ಸ್ :
ನೀವು ಯಾವುದೇ ವೆಬ್ ಸೈಟ್ʻಗೆ ಹೋದರೆ, ವಿಸಿಟ್ ಮಾಡಿದರೆ, ಓದಿದರೆ, ವಿಡಿಯೋ ನೋಡಿದರೆ.. ಅದಕ್ಕೊಂದು ವೆಬ್ ಸೈಟ್ ಡಿಸೈನ್ ಇರುತ್ತದಲ್ಲ, ಅವುಗಳನ್ನು ರೆಡಿ ಮಾಡಿಕೊಡುವುದೇ ವೆಬ್ ಡಿಸೈನಿಂಗ್. ಜನರು ಆನ್‌ಲೈನ್ ಮೂಲಕ ಓದಲು, ಏನಾದರೂ ವಿಷಯ ತಿಳಿಯಲು, ನ್ಯೂಸ್ ಅಪ್‌ಡೇಟ್, ವಿಡಿಯೋ ಅಪ್ʻಡೇಟ್ ನೋಡಲು ಬಳಸುತ್ತಿರುವ ವೆಬ್‌ಸೈಟ್‌ಗಳ ವಿನ್ಯಾಸ ಹೇಗಿರಬೇಕು ಎಂದು ರಚಿಸುವವರೇ ವೆಬ್ ಡಿಸೈನರ್ಸ್.ವೆಬ್ ಡಿಸೈನರ್ ಆಗಿ ತಮ್ಮನ್ನು ತಾವೇ ಮಾರ್ಕೆಟ್ ಮಾಡಿಕೊಳ್ಳಲು ತಮ್ಮ ಕಾಂಟ್ಯಾಕ್ಟ್‌ಗಳನ್ನು ಬಳಸಿಕೊಳ್ಳಬೇಕು. ವಿವಿಧ ಬ್ಯುಸಿನೆಸ್‌ಗಳಿಗೆ ವೆಬ್‌ಡಿಸೈನ್‌ಗಳನ್ನು ಮನೆಯಲ್ಲೇ ಮಾಡಿಕೊಡುವ ಮೂಲಕ ಆನ್‌ಲೈನ್ ಮೂಲಕವೇ ಹಣ ಗಳಿಸುವ ವಿಧಾನ ಕಂಡುಕೊಳ್ಳಬಹುದು. ನೇರವಾಗಿ ಕಂಪನಿಗಳನ್ನೇ ಅಪ್ರೋಚ್ ಮಾಡುವ ಮೂಲಕವು ಫ್ರೀಲ್ಯಾನ್ಸ್ ವೆಬ್ ಡಿಸೈನರ್ ಆಗಬಹುದು.
ಆನ್ʻಲೈನ್ ಪಾಠದಲ್ಲೂ ದುಡ್ಡು :
ಮೇಷ್ಟ್ರುಗಳಿಗೆ ಸಖತ್ ಡಿಮ್ಯಾಂಡ್ ಇದೆ. ಟ್ಯೂಷನ್ನಿಗೆ ಸಖತ್ ಬೇಡಿಕೆ ಇದೆ.ಆನ್‌ಲೈನ್ ಟ್ಯೂಟರ್ ಆಗುವ ಮೂಲಕ ಸ್ವತಂತ್ರ ಜಾಬ್‌ನೊಂದಿಗೆ ಹಣ ಗಳಿಸುವ ಅವಕಾಶಗಳಿವೆ. ನೀವು ಸಹ ಈ ಆನ್‌ಲೈನ್ ಟ್ಯೂಟರ್ ಆಗಲು ಸ್ಕಿಲ್ ಹೊಂದಿದ್ದಲ್ಲಿ, ಅಂದರೆ ನೀವು ಯಾವುದಾದರೂ ಸಬ್ಜೆಕ್ಟ್ ಎಕ್ಸ್‌ಪರ್ಟ್ ಆಗಿದ್ದಲ್ಲಿ ಈ ಕೆಲಸ ಮಾಡಬಹುದು. Tutor.com, wzant.com ಮೂಲಕ ಆನ್‌ಲೈನ್ ಟ್ಯೂಟರ್ ಜಾಬ್‌ಗಳನ್ನು ಸರ್ಚ್ ಮಾಡಿ ಪಡೆಯಬಹುದು.
ಪಾಡ್ ಕಾಸ್ಟ್, ಬ್ಲಾಗ್ ಮಾಡಬಹುದು :
ಬಹುಸಂಖ್ಯಾತರು ದಿನನಿತ್ಯ ಎದುರಿಸುವ ಸಮಸ್ಯೆಗೆ ಬರವಣಿಗೆ, ವಿಡಿಯೋಗಳ ಮೂಲಕ ಬ್ಲಾಗ್, ಪೋಡ್‌ಕಾಸ್ಟ್, ವಿಲಾಗ್ ವೇದಿಕೆಗಳಲ್ಲಿ ಅವರಿಗೆ ಸಲಹೆಗಳನ್ನು ನೀಡಬಹುದು. ಇದಕ್ಕೆ ಕೇವಲ ನಿಮ್ಮ ಕೌಶಲ್ಯ ಹಾಗೂ ಸ್ಮಾರ್ಟ್‌ಫೋನ್, ಹೆಚ್ಚಿಗೆ ಎಂದರೆ ಒಂದು ಲ್ಯಾಪ್‌ಟಾಪ್ ಬೇಕಾಗುತ್ತದೆ ಅಷ್ಟೆ. ವೆಬ್‌ಸೈಟ್, ಯೂಟ್ಯೂಬ್ ಚಾನಲ್ ಬಳಸುವ ಮೂಲಕವು ಹಣಗಳಿಸಬಹುದು. ವೀಕ್ಷಣೆಗಳ ಆಧಾರದಲ್ಲಿ ಗೂಗಲ್ ಸ್ವತಃ ಹಣ ಪಾವತಿ ಮಾಡಲಿದೆ. ಅದಕ್ಕೂ ಹೆಚ್ಚಿನದಾಗಿ, ನೀವು ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿದ್ದರೆ, ನೀವೆ ಯಾವುದೇ ಪ್ರಾಡಕ್ಟ್‌ಗಳನ್ನು, ಹೋಟೆಲ್‌ಗಳು, ಸಂಸ್ಥೆ, ಕಂಪನಿಗಳು, ಸೇವೆಗಳ ಮೂಲಕ ಜಾಹೀರಾತಿಗಾಗಿ ಹಣ ಪಡೆದು, ಅವರ ಬಗ್ಗೆ ನಿಮ್ಮ ಚಾನೆಲ್‌ಗಳಲ್ಲಿ ಪ್ರದರ್ಶನ ನೀಡಿದರೆ ಆಯಿತು. ಅದಕ್ಕೂ ಹೆಚ್ಚಿನ ಹಣ ಸಿಗಲಿದೆ.
ಇಂತಹ ಇನ್ನೂ ಹತ್ತು ಹಲವು ಸ್ಕೀಮುಗಳಿವೆ. ಆದರೆ, ವಂಚಕರೂ ಇರುತ್ತಾರೆ. ಹಣದ ಆಮಿಷ ತೋರಿಸಿ ಕೆಲಸ ಮಾಡಿಸಿಕೊಂಡು ಯಾಮಾರಿಸುವವರೂ ಇದ್ದಾರೆ. ಮೊದಲಿಗೇ ನೀವು ಸೆಕ್ಯುರಿಟಿ ಡೆಪಾಸಿಟ್ ಇಡಬೇಕು ಎಂದು ವಂಚಿಸುವವರೂ ಇರುತ್ತಾರೆ. ಸೂಕ್ತ ವೇದಿಕೆಗಳನ್ನು ಅವರವರೇ ಹುಡುಕಿಕೊಳ್ಳಬೇಕು.



