ಯಶ್ ಹೀರೋ ಆಗಿದ್ದು ಡಿಸೆಂಬರ್ ತಿಂಗಳಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಡಿಸೆಂಬರ್ ತಿಂಗಳಲ್ಲಿ. ಭರವಸೆ ಮೂಡಿಸ್ತಾನೆ ಕಣ್ರೀ ಅನ್ನಿಸಿದ್ದೂ ಡಿಸೆಂಬರ್ ತಿಂಗಳಲ್ಲಿ. ಮೊದಲ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಕೊಟ್ಟಿದ್ದೂ ಡಿಸೆಂಬರ್ ತಿಂಗಳಲ್ಲಿ. ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿನೋಡುವಂತೆ ಮಾಡಿದ್ದೂ ಡಿಸೆಂಬರ್ ತಿಂಗಳಲ್ಲಿ. . ರಾಧಿಕಾ ಪಂಡಿತ್ ಜೊತೆ ಮದುವೆ ಆಗಿದ್ದೂ ಡಿಸೆಂಬರ್ ತಿಂಗಳಲ್ಲಿ. ಅಪ್ಪನಾಗಿದ್ದೂ ಡಿಸೆಂಬರಿನಲ್ಲಿ. ಇದೀಗ.. ಹೊಸ ಘೋಷಣೆ ಮಾಡುತ್ತಿರುವುದೂ ಡಿಸೆಂಬರ್ ತಿಂಗಳಲ್ಲಿ.
ಯಶ್ ಮುಂದಿನ ಸಿನಿಮಾ ಟೈಟಲ್ ಏನು? ಸಿನಿಮಾ ಯಾವುದು? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಇಂತಹ ಹಲವು ಪ್ರಶ್ನೆಗಳಿಗೆ ಡಿಸೆಂಬರ್ 8ಕ್ಕೆ ಉತ್ತರ ಸಿಗಲಿದೆ. ಡಿಸೆಂಬರ್ 8ರ ಮುಂಜಾನೆ 9 ಗಂಟೆಗೆ 55 ನಿಮಿಷಕ್ಕೆ ಹೊರಬೀಳಲಿದೆ. ಡಿಸೆಂಬರ್ ತಿಂಗಳೆಂದರೆ ಯಶ್ ಪಾಲಿಗೆ ಯಾವತ್ತೂ ಸ್ಪೆಷಲ್.
ಯಶ್ ಅವರ ವೃತ್ತಿ ಬದುಕಿನ ಹಾಗೂ ಪರ್ಸನಲ್ ಲೈಫಿನ ಹಲವು ಮಹತ್ವದ ಘಟನೆಗಳು ಜರುಗಿದ್ದು ಡಿಸೆಂಬರ್ ತಿಂಗಳಲ್ಲಿ. ಯಶ್ ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಸಿನಿಮಾಗಳೆಲ್ಲ ರಿಲೀಸ್ ಆಗಿದ್ದು ಡಿಸೆಂಬರ್ ತಿಂಗಳಲ್ಲೇ.
ಯಶ್ ಪೂರ್ಣ ಪ್ರಮಾಣದ ಹೀರೋ ಆಗಿದ್ದ ರಾಕಿ ರಿಲೀಸ್ ಆಗಿದ್ದು ಡಿಸೆಂಬರ್ 25ನೇ ತಾರೀಕು. ಯಶ್ ಅವರ ಚಿತ್ರ ಜೀವನದ ಆರಂಭದ ದಿನಗಳ ಮೊದಲ ಹಿಟ್ ಸಿನಿಮಾ ಮೊಗ್ಗಿನ ಮನಸ್ಸು ಕೂಡಾ ಕೂಡಾ ಡಿಸೆಂಬರ್ ತಿಂಗಳ ವಂಡರ್. ರಾಧಿಕಾ ಪಂಡಿತ್ ಜೊತೆ ನಟಿಸಿದ ಮೊದಲ ಚಿತ್ರವೂ ಮೊಗ್ಗಿನ ಮನಸ್ಸು. ಯಶ್ ವೃತ್ತಿ ಬದುಕಿನಲ್ಲಿ ಪ್ರಚಂಡ ದಾಖಲೆ ಬರೆದ ಮಿಸ್ಟರ್ & ಮಿಸೆಸ್ ರಾಮಾಚಾರಿ, 2014ರ ಡಿಸೆಂಬರ್ 25ರಂದು ತೆರೆಗೆ ಬಂದಿತ್ತು. ನಂತರ ಯಶ್ ನಟನೆಯ ಮೊದಲ ಬಿಗ್ ಬಜೆಟ್ ಸಿನಿಮಾ ‘ಮಾಸ್ಟರ್ ಪೀಸ್’ ಸಿನಿಮಾ ಕೂಡ ಡಿಸೆಂಬರ್‌ನಲ್ಲೇ ರಿಲೀಸ್ ಆಗಿತ್ತು. ಯಶ್‌ಗೆ ಪ್ಯಾನ್ ಇಂಡಿಯಾ ಇಮೇಜ್ ತಂದುಕೊಟ್ಟಿದ್ದು ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ. ಈ ಚಿತ್ರ ಕೂಡ 2018ರ ಡಿ.21ರಂದು ತೆರೆಕಂಡಿತ್ತು. ಇದೀಗ ಯಶ್ ಅವರ ಹೊಸ ಸಿನಿಮಾ ಕೂಡ ಡಿಸೆಂಬರ್‌ನಲ್ಲೇ ಘೋಷಣೆ ಆಗುತ್ತಿದೆ.
ಇನ್ನು, ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆಗಿದ್ದು ಕೂಡ ಡಿಸೆಂಬರ್‌ನಲ್ಲೇ ಅನ್ನೋದು ಮತ್ತೊಂದು ವಿಶೇಷ. ತಂದೆಯಾಗಿದ್ದೂ ಕೂಡಾ ಡಿಸೆಂಬರ್ ತಿಂಗಳಲ್ಲೇ. ಈಗ ಅದೇ ತಿಂಗಳಲ್ಲಿ ಯಶ್ ಮತ್ತೊಮ್ಮೆ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ಧಾರೆ.



