ಬೆಂಗಳೂರು ಪ್ರವಾಹಕ್ಕೆ ಏನು ಕಾರಣ.. ಏನಾದರೂ ಇರಲಿ.. ಅದೆಲ್ಲ ವಿಷಯದ ಚರ್ಚೆ ಬೇಡ. ಇನ್ನು ಮುಂದೆ ಮನೆ ಕಟ್ಟುವವರು ಬೇಸ್ ಮೆಂಟ್ ಇಲ್ಲದೆಯೇ ಮನೆ ಕಟ್ಟಬೇಕು. ಇದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೊಸ ಮಾರ್ಗೋಪಾಯ.
ಬೆಂಗಳೂರಿನಲ್ಲಿ ಮಳೆಗಾಲ ಶುರುವಾಗಿ ಎರಡೇ ಎರಡು ದಿನಕ್ಕೆ ಬೆಂಗಳೂರೆಂಬ ಬೆಂಗಳೂರು ಚಿಂದಿ ಚಿತ್ರಾನ್ನವಾಗಿ ಹೋಗಿದೆ. ಎರಡು ದಿನ ಮಳೆ ಹೊಡೆಯುತ್ತಿದ್ದಾಗ.. ಬಳ್ಳಾರಿಯಲ್ಲಿ ಸಾಧನಾ ಸಮಾವೇಶ ಮಾಡಿದ್ದ ಡಿಕೆ, ಈಗ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರಿನ ಹಲವೆಡೆ ಕೆರೆಯ ಅಕ್ಕಪಕ್ಕದಲ್ಲಿ ಮನೆ ಕಟ್ಟಿದ್ದಾರೆ. ಕೆರೆ ಪಕ್ಕದಲ್ಲಿ ಮನೆ ನಿರ್ಮಿಸಿರುವುದರಿಂದ ಸಮಸ್ಯೆಯಾಗುತ್ತಿದೆ. ಮುಂದೆ ಇಂತಹ ಘಟನೆ ಆಗದಂತೆ ಹೊಸ ಕಾನೂನು ತರುತ್ತೇವೆ. ಇನ್ಮುಂದೆ ಮನೆ ಕಟ್ಟಬೇಕಾದರೆ ಬೇಸ್ಮೆಂಟ್ ಮಾಡಬಾರದು. ಬೇಸ್ಮೆಂಟ್ ಬಗ್ಗೆ ಹೊಸ ಕಾನೂನು ತರುತ್ತೇವೆ ಎಂದಿದ್ದಾರೆ. ಶಹಬ್ಬಾಸ್.. ಎನ್ನಬೇಕು ಡಿಕೆ ಶಿವಕುಮಾರ್ ಅವರಿಗೆ ಈ ರೀತಿಯ ಸಲಹೆ ಕೊಟ್ಟ ಮಹಾನುಭಾವರಿಗೆ.
ಬೇಸ್ಮೆಂಟ್ನಿಂದ ಸಾಕಷ್ಟು ಅನಾಹುತವಾಗುತ್ತಿದೆ. ಹೀಗಾಗಿ ಬೇಸ್ಮೆಂಟ್ ಬಗ್ಗೆ ಪ್ರತ್ಯೇಕ ಕಾನೂನು ತರುತ್ತೇವೆ. ಇನ್ಮುಂದೆ ಮನೆ ಕಟ್ಟಬೇಕಾದರೆ ಬೇಸ್ಮೆಂಟ್ ಮಾಡಬಾರದು. ಇನ್ಮುಂದೆ ಗ್ರೌಂಡ್ಫ್ಲೋರ್ನಲ್ಲೇ ಪಾರ್ಕಿಂಗ್ ಇರಬೇಕು. ಬೇಸ್ಮೆಂಟ್ ಬಗ್ಗೆ ಹೊಸ ಕಾನೂನು ತರುತ್ತೇವೆ. ಬೇಸ್ಮೆಂಟ್ನಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ, ಕಟ್ಟುವಂತಿಲ್ಲ.. ಇದು ಡಿಕೆ ಶಿವಕುಮಾರ್ ಅವರ ಪ್ರವಾಹ ಸುರಕ್ಷಣಾ ಮಾರ್ಗಗಳಲ್ಲಿ ಒಂದು.
ಡಿಕೆ ಶಿವಕುಮಾರ್ ಅವರಿಗೆ ಏನಾಗಿದೆ.. ಅವರಿಗೆ ಇಂತಹ ಬ್ರಹ್ಮಾಂಡ ಐಡಿಯಾಗಳನ್ನು ಕೊಡುತ್ತಿರುವವರು ಯಾರು.. ಅರ್ಥವೇ ಆಗುತ್ತಿಲ್ಲ.
ಬೇಸ್ ಮೆಂಟ್ʻನಿಂದಾಗಿ ಪ್ರವಾಹ ಬರುತ್ತದೆ, ನೀರು ನುಗ್ಗುತ್ತದೆ ಎನ್ನುವುದಾದರೆ.. ಗ್ರೌಂಡ್ ಫ್ಲೋರಿಗೆ ನೀರು ನುಗ್ಗುವುದಿಲ್ಲವಾ..
ಸರಿ.. ತಗ್ಗಿನಲ್ಲಿದ್ದರೆ ಪ್ರವಾಹ ಎನ್ನುವವರು ಅಂಡರ್ ಪಾಸ್ ಮಾಡುವುದನ್ನು ಬಿಡುತ್ತಾರಾ.. ಏಕೆಂದರೆ ಪ್ರತಿ ಅಂಡರ್ ಪಾಸ್ ಕೂಡಾ ಪ್ರವಾಹಕ್ಕೆ ಕಾರಣವಾಗುತ್ತಲೇ ಇರುತ್ತದೆ.
ಸದ್ಯಕ್ಕೆ ಇದು ಕೆರೆಗಳ ಹತ್ತಿರದ ಪ್ರದೇಶಗಳಲ್ಲಿ ಎನ್ನುತ್ತಿದ್ದಾರೆ. ಮುಂದೇನಾಗುತ್ತೋ.. ಏನೋ.. ಕೆರೆಗಳನ್ನ ಒತ್ತುವರಿ ಮಾಡೋದನ್ನು ಬಿಡಿ, ರಸ್ತೆಗಳಲ್ಲಿ ಚರಂಡಿ ನೀರು ನಿಲ್ಲದಂತೆ ತಡೆಯಿರಿ.. ರಾಜಾಕಾಲುವೆಗಳ ಮೇಲೆ ಕಟ್ಟಿಕೊಂಡಿರುವ ಮನೆ, ಅಪಾರ್ಟ್ʻಮೆಂಟ್.. ಆ ಒತ್ತುವರಿ ರಕ್ಷಣೆಗಾಗಿ ಕಟ್ಟಿಸಿರುವ ದೇವಸ್ಥಾನಗಳನ್ನು ಮುಲಾಜಿಲ್ಲದೆ ಒಡೆದು ಹಾಕಿ.. ಅದನ್ನು ಬಿಟ್ಟು ಬೇಸ್ ಮೆಂಟುಗಳಿಂದ ಪ್ರವಾಹ ಬರುತ್ತದೆ ಎನ್ನುವ ಮಾತುಗಳಿಂದ ಜನರ ಚರ್ಚೆಯನ್ನು ಬೇಸ್ ಮೆಂಟಿನ ಕಡೆ ತಿರುಗುವಂತೆ ಮಾಡಬಹುದು, ಆದರೆ.. ಪ್ರವಾಹವನ್ನಂತೂ ನಿಲ್ಲಿಸುವುದು ಸಾಧ್ಯವಿಲ್ಲ.
ಇದೆಲ್ಲದರ ಮಧ್ಯೆ ಎಲ್ಲೊಂದರಲ್ಲಿ ಮಳೆ ನೀರು ನುಗ್ಗಿ ಭಾರೀ ಅವಾಂತರಗಳೇ ಸೃಷ್ಟಿಯಾಗಿವೆ. ಬೆಂಗಳೂರು ರಸ್ತೆಗಳು ನದಿಯಂತೆ ಭೋರ್ಗರೆದರೆ, ಫ್ಲೈಓವರ್‌ಗಳು ಜಲಪಾತದಂತೆ ಧುಮ್ಮಿಕ್ಕುತ್ತಿವೆ. ಇನ್ನು ಅಂಡರ್‌ಪಾಸ್‌ಗಳು ತುಂಬಿದ ಬಾವಿಯಂತಾಗಿವೆ. ಇನ್ನು ಮನೆ ಅಂಗಳ ಕೆರೆಯಂತಾಗಿವೆ.
ಎಲ್ಲದಕ್ಕೂ ಬೇಸ್ ಮೆಂಟ್ ಕಾರಣ ಎನ್ನಲಾಗುತ್ತಿದೆ.. ಅಷ್ಟೆ..