ಅವಳ ಹೆಸರು ರಶ್ಮಿ (Rashmi). ಮಾವನನ್ನೂ ಕರೆದುಕೊಂಡು ಮಾರುಕಟ್ಟೆಗೆ ತರಕಾರಿ ಹೋಗಿದ್ದಳು. ಮನೆಯಲ್ಲೇ ಇದ್ದ ಮಾವನನ್ನು ಬನ್ನಿ ಮಾವ ತರಕಾರಿ ತರೋಣ ಎಂದು ಕರೆದುಕೊಂಡು ಮಾರುಕಟ್ಟೆಗೆ ಹೋಗಿದ್ದಳು. ವಾಪಸ್ ಬಂದಾಗ ಮಲಗಿದ್ದ ಅತ್ತೆ, ನಿದ್ದೆಯಲ್ಲೇ ಶವವಾಗಿದ್ದರು. ಅಯ್ಯೋ.. ಅತ್ತೆ.. ನಮ್ಮನ್ನೆಲ್ಲ ಬಿಟ್ಟು ಹೋಗ್ಬಿಟ್ರಾ ಎಂದು ಅತ್ತೆಯ ಶವದ ಎದುರು ಗೋಳಾಡಿದ್ದ ರಶ್ಮಿ, ಎಲ್ಲರನ್ನೂ ಇದೊಂದು ಹಾರ್ಟ್ ಅಟ್ಯಾಕ್ ಸಾವು (heart attack death) ಎಂದು natural death ನಂಬಿಸಿಬಿಟ್ಟಿದ್ದಳು. ಅತ್ತೆ ಲಕ್ಕಮ್ಮನವರಿಗೂ ವಯಸ್ಸು 52 ಆಗಿತ್ತು. ಹೀಗಾಗಿಯೇ ಇರಬಹುದೇನೋ.. ಎಂದುಕೊಂಡಿದ್ದ ಗಂಡ, ಮಾವ ಎಲ್ಲರೂ ಲಕ್ಕಮ್ಮನನ್ನೂ ಸಂಸ್ಕಾರ ಮಾಡಿದ್ದರು. ಆದರೆ ಅಸಲಿ ಕಥೆ ಬೇರೆಯೇ ಇತ್ತು. ಸೊಸೆಯೇ ಸಂಚು ಮಾಡಿ ಅತ್ತೆಯನ್ನು ಕೊಲ್ಲಿಸಿದ್ದಳು. ಕಥೆ ಹೊರಬಂದಿದ್ದು ಒಂದು ವಾಟ್ಸಪ್ ಚಾಟ್ʻನಿಂದ. ಅದರ ಹಿಂದಿದ್ದದ್ದು ಅನೈತಿಕ ಸಂಬಂಧದ ಕಥೆ.
ಕಥೆಯ ಆರಂಭ.. Story begins..
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ಮುದಿಗೆರೆ ಶೆಟ್ಟಿಪಾಳ್ಯ ಮೂಲದ ಮಂಜುನಾಥ್ ಹಲವು ವರ್ಷಗಳಿಂದ ಬ್ಯಾಡರಹಳ್ಳಿ ವಿನಾಯಕನಗರದಲ್ಲಿ ತಂದೆ-ತಾಯಿ ಜತೆಗೆ ನೆಲೆಸಿದ್ದಾರೆ. ಮೂರು ಅಂತಸ್ತಿನ ಸ್ವಂತ ಮನೆ ಹೊಂದಿರುವ ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 11 ವರ್ಷದ ಹಿಂದೆ ಬ್ಯಾಡರಹಳ್ಳಿಯ ರಶ್ಮೀ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಹತ್ತು ಹಾಗೂ ಎರಡೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ. ಮಂಜುನಾಥ್ ತಾಯಿ ಲಕ್ಕಮ್ಮ ಚೀಟಿ (chit fund) ಹಾಗೂ ಬಡ್ಡಿ ವ್ಯವಹಾರ (finance business) ಮಾಡಿಕೊಂಡಿದ್ದರು. ಪೇಂಟಿಂಗ್ ಕಂಪನಿಯಲ್ಲಿ (painting company) ಕೆಲಸ ಮಾಡುವ ಕುಂದಾಪುರ ಮೂಲದ ಅಕ್ಷಯ್, ಮಂಜುನಾಥ್ಗೆ ಸೇರಿದ ಕಟ್ಟಡದ ಮೊದಲ ಮಹಡಿಯಲ್ಲಿ ಕಳೆದ ಆರು ವರ್ಷಗಳಿಂದ ಬಾಡಿಗೆಗೆ ನೆಲೆಸಿದ್ದ.
11 ವರ್ಷದ ಪ್ರೀತಿಯ ಸಂಸಾರದ ಬಳಿಕ ದಾರಿ ತಪ್ಪಿದ್ದಳು ರಶ್ಮಿ :
ಮದುವೆಯಾಗಿ 11 ವರ್ಷಗಳಾಗಿದ್ದವು. ಇಬ್ಬರು ಮಕ್ಕಳಿದ್ದರು. ಸಂಸಾರ ಚೆನ್ನಾಗಿಯೇ ಇತ್ತು. ಇಷ್ಟು ವರ್ಷದ ಮೇಲೆ ರಶ್ಮಿ ದಾರಿ ತಪ್ಪಿದ್ದಳು. ಬಾಡಿಗೆಗೆ ಇದ್ದ ಅಕ್ಷಯ್ ನಡುವೆ ಆತ್ಮೀಯತೆ ಬೆಳೆದಿತ್ತು. ಆ ತ್ಮೀಯತೆಯೇ ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಸೊಸೆ ರಶ್ಮೀ ವರ್ತನೆ ಬಗ್ಗೆ ಅನುಮಾನಗೊಂಡ ಲಕ್ಕಮ್ಮ, ಸದಾ ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ರಶ್ಮೀ ಹಾಗೂ ಅಕ್ಷಯ್ ಆತ್ಮೀಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರಶ್ಮೀ ಮತ್ತು ಅಕ್ಷಯ್ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಲಕ್ಕಮ್ಮನ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ಬಯಲಾಗಿದೆ.
ವಾಟ್ಸಪ್ ಮೆಸೇಜ್ (what`s app) ಬಯಲು ಮಾಡಿದ ಮರ್ಡರ್ : ಅಕ್ಷಯ್ ನಡುವೆ ಆತ್ಮೀಯತೆ ಬೆಳೆದು ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಸೊಸೆ ರಶ್ಮೀ ವರ್ತನೆ ಬಗ್ಗೆ ಅನುಮಾನಗೊಂಡ ಲಕ್ಕಮ್ಮ, ಸದಾ ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ರಶ್ಮೀ ಹಾಗೂ ಅಕ್ಷಯ್ ಆತ್ಮೀಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರಶ್ಮೀ ಮತ್ತು ಅಕ್ಷಯ್ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಲಕ್ಕಮ್ಮನ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ಬಯಲಾಗಿದೆ. ಕೆಲ ಹೊತ್ತಿನ ಬಳಿಕ ರಶ್ಮೀ ಹಾಗೂ ಮಾವ ತರಕಾರಿ ತೆಗೆದುಕೊಂಡು ಮನೆಗೆ ಬಂದಿದ್ದಾರೆ. ಲಕ್ಕಮ್ಮ ಅವರನ್ನು ಎಚ್ಚರಗೊಳಿಸುವಂತೆ ರಶ್ಮೀ ನಾಟಕ ಮಾಡಿದ್ದಾಳೆ. ಎಷ್ಟೇ ಕೂಗಿದರೂ ಲಕ್ಕಮ್ಮ ಎಚ್ಚರಗೊಂಡಿಲ್ಲ. ಬಳಿಕ ಅತ್ತೆಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಅಳಲು ಆರಂಭಿಸಿದ್ದಾಳೆ. ಕೆಲಸಕ್ಕೆ ಹೋಗಿದ್ದ ಪತಿ ಮಂಜುನಾಥ್ ಸಹ ಮನೆಗೆ ಬಂದಾಗ ತಾಯಿ ಮೃತಪಟ್ಟಿದ್ದಾರೆ ಎಂದು ನಂಬಿಸಿದ್ದಾಳೆ. ಬಳಿಕ ಮಂಜುನಾಥ್ ಸಂಬಂಧಿಕರ ಜತೆಗೆ ತಾಯಿ ಲಕ್ಕಮ್ಮನ ಮೃತದೇಹವನ್ನು ಕುಣಿಗಲ್ ತಾಲೂಕಿನ ಮುದಿಗೆರೆ ಶೆಟ್ಟಿಪಾಳ್ಯದ ಸ್ವಂತ ಜಮೀನಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿದ್ದರು.
ಕೆಲ ದಿನಗಳ ಹಿಂದೆ ಬಳಿಕ ಆರೋಪಿ ಅಕ್ಷಯ್ನ ಸ್ನೇಹಿತ ರಾಘವೇಂದ್ರನಿಗೆ ಲಕ್ಕಮ್ಮನ ಸಾವಿನ ಬಗ್ಗೆ ಅನುಮಾನ ಬಂದಿದೆ. ಈ ವೇಳೆ ಅಕ್ಷತ್ನ ಮೊಬೈಲ್ ಪಡೆದು ವಾಟ್ಸಾಪ್ ಚಾಟ್ ನೋಡುವಾಗ, ಅಕ್ಷಯ್ ಮತ್ತು ರಶ್ಮೀ ನಡುವೆ ಲಕ್ಕಮ್ಮನ ಕೊಲೆಗೆ ನಡೆದಿದ್ದ ಸಂಚಿನ ಸಂದೇಶಗಳು ಕಂಡು ಬಂದಿವೆ. ಈ ವಾಟ್ಸಾಪ್ ಚಾಟ್ ಸಂದೇಶಗಳ ಫೋಟೋ ತೆಗೆದುಕೊಂಡ ರಾಘವೇಂದ್ರ ಬಳಿಕ ಕಟ್ಟಡದ ಮಾಲೀಕ ಮಂಜುನಾಥ್ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಮೇರೆಗೆ ಮಂಜುನಾಥ್ ಪತ್ನಿ ರಶ್ಮೀ ಸೇರಿ ಮೂವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡಿ ಬೆಂಡೆತ್ತಿದಾಗ ಸತ್ಯ ಹೊರಬಿದ್ದಿದೆ. ಇನ್ಸ್ಪೆಪೆಕ್ಟರ್ ಕೆ.ಓ.ಪುಟ್ಟ ಓಬಳರೆಡ್ಡಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.



