ದರ್ಶನ್ ಅವರ ತಂಗಿ ದಿವ್ಯಾ ಅವರ ಮಗ ಚಿತ್ರರಂಗ ಪ್ರವೇಶಿಸಿದ್ಧಾರೆ. ಆ ಮೂಲಕ ತೂಗುದೀಪ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ. ತೂಗುದೀಪ ಶ್ರೀನಿವಾಸ್, ದರ್ಶನ್, ದಿನಕರ್ ಹಾಗೂ ವಿನೀಶ್. ಸದ್ಯಕ್ಕೆ ಚಿತ್ರರಂಗದಲ್ಲಿ ಸದ್ಯಕ್ಕೆ ಆಕ್ಟಿವ್ ಆಗಿರುವುದು ದರ್ಶನ್ ಮತ್ತು ದಿನಕರ್. ದರ್ಶನ್ ಅವರ ಮಗ ಯಜಮಾನ, ಮಿ.ಐರಾವತದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಮತ್ತೆ ಅಪ್ʻಡೇಟ್ ಇರಲಿಲ್ಲ. ಇದೀಗ ದರ್ಶನ್ ಅವರ ಸೋದರಿಯ ಮಗ ಚಂದು ಕಾಟೇರದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.
ಕಲಾವಿದರು ಕ್ಯಾಮರಾ ಎದುರಿಸುವ ಮುನ್ನ ಕ್ಯಾಮರಾ ಹಿಂದೆ ಸಿನಿಮಾವನ್ನು ನೋಡಬೇಕು. ಬಳಿಕ ಮುಂದೆ ಬರಬೇಕು ಎನ್ನುವುದು ದರ್ಶನ್ ವಾದ. ತಾವು ಬಂದಿದ್ದು ಹಾಗೆಯೇ ಎನ್ನುವ ದರ್ಶನ್, ತೆರೆಯ ಹಿಂದಿನ ಕೆಲಸ ಅರ್ಥ ಮಾಡಿಕೊಂಡರೆ ಮಾತ್ರ ಒಳ್ಳೆಯ ಆರ್ಟಿಸ್ಟ್ ಆಗುವುದು ಸಾಧ್ಯ ಎಂದು ನಂಬಿದವರು. ಲೈಟ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್, ಜೂನಿಯರ್ ಆರ್ಟಿಸ್ಟ್, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಹೀರೋ ಆದ ದರ್ಶನ್, ತಮ್ಮ ದಿನಕರ್ ಅವರನ್ನೂ ಅದೇ ರೀತಿ ಚಿತ್ರರಂಗಕ್ಕೆ ತಂದರು. ದಿನಕರ್ ಈಗ ಚಿತ್ರರಂಗದ ಸ್ಟಾರ್ ಡೈರೆಕ್ಟರ್.
ಮತ್ತೀಗ ದರ್ಶನ್ ತಮ್ಮ ಸೋದರಿಯ ಮಗ ಚಂದುನನ್ನು ಕಾಟೇರದ ಮೂಲಕ ತೆರೆಯ ಮೇಲೆ ತಂದಿದ್ದಾರೆ. ಕ್ರಾಂತಿಯಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಚಂದು, ಹದಿಹರೆಯದ ದರ್ಶನ್ ಪಾತ್ರ ಮಾಡಿದ್ಧಾರೆ. ಕಾಟೇರ’ ಚಿತ್ರದ ‘ಅನುರಾಗವ ಕಲಿಸಲು’ ಮೆಲೋಡಿ ಸಾಂಗ್ ರಿಲೀಸ್ ಆಗಿದೆ. ಯೋಗರಾಜ್ ಭಟ್ ಸಾಹಿತ್ಯದ ಹಾಡನ್ನು ವಾಣಿ ಹರಿಕೃಷ್ಣ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಚಂದು ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ನಾಯಕ ನಾಯಕಿಯರ ಟೀನೇಜ್ ಲವ್ ಸ್ಟೋರಿಯಲ್ಲಿ ಬರುವುದು ಚಂದುವೇ.



