ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ..ತಾನೇ ಸಿಕ್ಕಿಬಿದ್ದ ಕಥೆಯಷ್ಟೇ ರೋಚಕ ಇದು. ಅಂದರೆ ದರ್ಶನ್ ಸಿನಿಮಾದವರು. ಅವರು ಒಂದು ಕಥೆ ಕಟ್ಟಿದರು. ಆದರೆ.. ಬೆನ್ನ ಹಿಂದೆ ಇದ್ದ ಪೊಲೀಸರು ರಿಯಲ್ ಸಿನಿಮಾವನ್ನು ತಾವು ತೋರಿಸಿದರು. ಈ ಪ್ರಕರಣದ ಒಂದೊಂದು ವಿವರವೂ ಇಂಟ್ರೆಸ್ಟಿಂಗ್. ಇಡೀ ಪ್ರಕರಣದಲ್ಲಿ ಆರೋಪಿಗಳು ನಾವೇ ಕೊಲೆ ಮಾಡಿದ್ದು ಎಂದು ಸರೆಂಡರ್ ಆದ ಬಳಿಕವೇ ಪೊಲೀಸರಿಗೆ ವಿಷಯದ ಗಂಭೀರತೆ ಅರಿವಾಗುತ್ತಾ ಹೋಯ್ತು ಎನ್ನುವಂತಿದೆ. ಆದರೆ.. ಪೊಲೀಸರು ಕೊಲೆ ಜಾಡಿನ ಟ್ರಾಕಿನಲ್ಲಿ ಸರಿಯಾಗಿಯೇ ಸಾಗಿದ್ದರು. ಶರಣಾದ ಆರೋಪಿಗಳು, ಪ್ರಕರಣವನ್ನು ಬೇಗ ಪತ್ತೆ ಹಚ್ಚುವಂತಾಯ್ತೇ ಹೊರತು.. ಶರಣಾದವರಿಂದಷ್ಟೇ ಕೊಲೆ ಕೇಸ್ ಬಗೆಹರಿಯುತ್ತಿದೆ ಎನ್ನುವಂತಿಲ್ಲ. ಒಂದು ದೊಡ್ಡ ಕ್ಲೂ ದರ್ಶನ್ ಗ್ಯಾಂಗ್ʻನವರು ಬಳಸಿದ್ದ ಸ್ಕಾರ್ಪಿಯೋ ಮೂಲಕ ಸಿಕ್ಕಿತ್ತು.
ಸದ್ಯಕ್ಕಿರುವ ಮಾಹಿತಿಗಳ ಪ್ರಕಾರ ಜೂನ್ 8 ರಂದು ರೇಣುಕಾ ಸ್ವಾಮಿ ಅವರನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲಾಗಿದೆ. ದರ್ಶನ್ ಆಪ್ತ ವಿನಯ್ ಮಾವನಿಗೆ ಸೇರಿದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಮೇಲೆ ದರ್ಶನ್ & ಗ್ಯಾಂಗ್ ಹಲ್ಲೆ ನಡೆಸಿದೆ. ಪವಿತ್ರಾ ಗೌಡ ಸಹ ಚಪ್ಪಲಿಯಲ್ಲಿ ಮನಸೋ ಇಚ್ಚೆ ಬಾರಿಸಿದ್ದಾರೆ. ಮರ್ಮಾಂಗಕ್ಕೆ ಒದ್ದಿದ್ದಾರೆ. ರೇಣುಕಾ ಸ್ವಾಮಿಗೆ ಅಕ್ಷರಶಃ ಚಿತ್ರಹಿಂಸೆ ನೀಡಿದ್ದಾರೆ. ಮನಬಂದಂತೆ ಥಳಿಸಿದ್ದಾರೆ. ಗೋಡೆಗೆ ಎತ್ತಿ ಎತ್ತಿ ಬಿಸಾಡಿದ್ದಾರಂತೆ. ಜೂನ್ 8 ರಂದು ಸಂಜೆ ವೇಳೆ ರೇಣುಕಾ ಸ್ವಾಮಿ ಪ್ರಜ್ಞೆ ತಪ್ಪಿದ್ದಾರೆ. ರೇಣುಕಾ ಸ್ವಾಮಿ ಪ್ರಾಣ ಪಕ್ಷಿ ಹಾರಿ ಹೋಗಿದೆ ಅಂತ ಗೊತ್ತಾದ್ಮೇಲೆ ಮೃತದೇಹ ವಿಲೇವಾರಿ ಬಗ್ಗೆ ಪ್ಲಾನ್ ಆಯ್ತಂತೆ.
ಇಷ್ಟಕ್ಕೂ ರೇಣುಕಾಸ್ವಾಮಿ ಮಾಡಿದ್ದ ತಪ್ಪೇನು ಅಂದ್ರೆ.. ದರ್ಶನ್ ಮತ್ತು ಪವಿತ್ರ ಗೌಡ ಅವರ ಲವ್ ಅಫೇರ್ ಬಗ್ಗೆ ಆಕ್ರೋಶಗೊಂಡಿದ್ದ ರೇಣುಕಾಸ್ವಾಮಿ ಬಾಸ್ ಫ್ಯಾಮಿಲಿಯಲ್ಲಿ ಪವಿತ್ರಾ ಗೌಡ ಹುಳಿ ಹಿಂಡಿದ್ದಾಳೆ ಎಂದು ರೊಚ್ಚಿಗೆದ್ದಿದ್ದ. ಫೇಕ್ ಅಕೌಂಟ್ ಮುಖಾಂತರ ಪದೇ ಪದೇ ಪವಿತ್ರಾ ಗೌಡ ಬಗ್ಗೆ ರೇಣುಕಾ ಸ್ವಾಮಿ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದ. ಕೆಲವೇ ದಿನಗಳ ಹಿಂದೆಯಷ್ಟೇ ಪವಿತ್ರಾ ಗೌಡಗೆ ಮರ್ಮಾಂಗದ ಫೋಟೋವನ್ನ ಹಾಕಿ ‘’ದರ್ಶನ್‌ಗಿಂತ ನಾನೇನು ಕಮ್ಮಿ ಬಾ’’ ಅಂತ ರೇಣುಕಾ ಸ್ವಾಮಿ ಸಂದೇಶ ಕಳುಹಿಸಿದ್ದ. ಯಾವಾಗ ಈ ರೀತಿಯ ಅಸಹ್ಯ ಕಾಣಿಸಿತೋ ಆಗ ಪವಿತ್ರ ಗೌಡ ಆಕ್ರೋಶಗೊಂಡರು.ಸಂದೇಶ ಕಳುಹಿಸಿದ ಪ್ರೋಫೈಲ್ ಯಾರದ್ದು ಅಂತ ಪವಿತ್ರಾ ಗೌಡ ಹುಡುಕಾಟಕ್ಕಿಳಿದರು.
ಮನೆಗೆಲಸದವ ಪವನ್ ಎಂಬುವವನಿಗೆ ವಿಷಯ ತಿಳಿಸಿದರು ಎನ್ನುವುದು ಸದ್ಯದ ಮಾಹಿತಿ. ಅಣ್ಣಂಗೆ ಹೇಳಬೇಡ ಎಂದು ಕೂಡ ಹೇಳಿದ್ದರಂತೆ. ಆನಂತರ ದರ್ಶನ್ ಗ್ಯಾಂಗ್‌ನಲ್ಲಿದ್ದವರಿಂದ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ರೇಣುಕಾ ಸ್ವಾಮಿ ಜೊತೆ ಚಾಟಿಂಗ್ ಆರಂಭಿಸಲಾಯ್ತು.ಚಿತ್ರದುರ್ಗದವರು ಅಂತ ಗೊತ್ತಾದ ಕೂಡಲೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರಗೆ ಫೋನ್ ಕರೆ ಹೋಯ್ತು.
ಮೊದಲು ಆಂಧ್ರ ಪ್ರದೇಶ, ತಮಿಳುನಾಡು, ಶಿರಾಡಿ ಘಾಟ್‌ನಲ್ಲಿ ಮೃತದೇಹ ವಿಲೇವಾರಿ ಬಗ್ಗೆ ಪ್ಲಾನ್ ಮಾಡಲಾಗಿದೆ. ಆದರೆ, ಟೋಲ್‌ನಲ್ಲಿ ಸಿಕ್ಕಿಬೀಳುವ ಭಯದಿಂದ ಸುಮನಹಳ್ಳಿ ರಾಜಕಾಲುವೆಯಲ್ಲಿ ಮೃತದೇಹ ಎಸೆದುಬಿಡುವ ಬಗ್ಗೆ ಪ್ಲಾನ್ ಫಿಕ್ಸ್ ಆಯ್ತಂತೆ.
ಸ್ಕಾರ್ಪಿಯೋ ಕಾರ್ ಕೊಟ್ಟ ಕ್ಲೂ :
ಸೀಜ್ ಮಾಡಲಾದ ಸ್ಕಾರ್ಪಿಯೋ ಕಾರಿನಲ್ಲಿಯೇ ಮದ್ಯದ ಬಾಟಲಿ, ಪವಿತ್ರಾ ಗೌಡ ಅವರದ್ದು ಎನ್ನಲಾದ ಬ್ಯಾಗ್ ಪೊಲೀಸರಿಗೆ ಸಿಕ್ಕಿದೆ. ಇನ್ನು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸ್ಕಾರ್ಪಿಯೋ ಕಾರು ಕಣ್ಣಿಗೆ ಬಿತ್ತು. ಬರುವಾಗ ಕ್ಲೋಸ್ ಇದ್ದ ಕಾರಿನ ಡಿಕ್ಕಿ, ಹೋಗುವಾಗ ಓಪನ್ ಇತ್ತು. ಪೊಲೀಸರಿಗೆ ಇದು ಬಿಗ್ ಕ್ಲೂ ಸಿಕ್ಕಂತಾಯಿತು. ಕಾರಿನ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಅಷ್ಷರಲ್ಲಿ ಪೊಲೀಸರ ಮುಂದೆ ಆರೋಪಿಗಳು ಶರಣಾದರು.’ಹಣದ ವಿಚಾರಕ್ಕೆ ಗಲಾಟೆ ಆಯ್ತು. ಸಾಲ ವಾಪಸ್ ಕೊಟ್ಟಿಲ್ಲ ಅಂತ ಕರ್ಕೊಂಡ್ ಬಂದ್ವಿ. ಹೊಡೆದಾಟದಲ್ಲಿ ಕೊಲೆ ಆಗಿದೆ ಅಂತ ಕಥೆ ಕಟ್ಟಿದರು. ಪೊಲೀಸರಿಗೆ ನಂಬಿಕೆ ಬರಲಿಲ್ಲ.ಆಗ ಸರೆಂಡರ್ ಆದ ಆರೋಪಿಗಳ ಫೋನ್ ರೆಕಾರ್ಡ್ ಪರಿಶೀಲನೆ ಮಾಡಿದರು.ಪದೇ ಪದೇ ದರ್ಶನ್ & ಗ್ಯಾಂಗ್‌ಗೆ ಕರೆ ಹೋಗಿರುವುದು ಪೊಲೀಸರಿಗೆ ಕ್ಲಿಯರ್ ಆದ ಮೇಲೆ ಬೆಂಡೆತ್ತಿದರು. ವಿಷಯ ಹೊರಬಿತ್ತು.



