ರೇಣುಕಾಸ್ವಾಮಿ ಕೇಸಿನಲ್ಲಿ ದರ್ಶನ್ ಪರ ವಕೀಲ ಸಿವಿ ನಾಗೇಶ್ ಎತ್ತಿದ ಅತೀ ದೊಡ್ಡ ಪ್ರಶ್ನೆಯೇ ಅದು. ಬಟ್ಟೆಯನ್ನು ಸರ್ಫ್ ಹಾಕಿ ಕುಕ್ಕಿ ಕುಕ್ಕಿ ತೊಳೆದ್ರೂ ರಕ್ತ ಇರುತ್ತಾ? ಅನ್ನೋ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರ ನೀಡಿರುವ ಎಸ್‌ಪಿಪಿ ಪ್ರಸನ್ನ ಕುಮಾರ್, ಕೆಲ ರಿಸರ್ಚ್ ಹೇಳ್ತಾವೆ. ತೊಳೆದ ಬಟ್ಟೆಯಲ್ಲಿ ಡಿಎನ್ಎ ಸ್ಪಷ್ಟವಾಗಿ ಪ್ರೊಫೈಲ್ ಬರಲ್ಲ. ಅದು ಯಾವಾಗ ಬಿಸಿ ನೀರಿನಲ್ಲಿ ವಾಷ್ ಮಾಡಿದಾಗ ಮಾತ್ರ. ಲಾಂಡ್ರಿ ಡಿಟರ್ಜೆಂಟ್ ನಲ್ಲಿ ಇಷ್ಟು ಡಿಗ್ರಿ ಬಿಸಿ ಆಗಲ್ಲ. ಇಲ್ಲಿ ವಾಷ್ ಮಾಡಿರೋದು ತಂಪಾದ ನೀರಿನಲ್ಲಿ. ಅಂದು ಅವರ ವಾಷಿಂಗ್ ಮಷಿನ್ ಕೆಟ್ಟು ಹೋಗಿತ್ತು. ಹಾಗಾಗಿ, ಆಕೆ ಕೈಯಲ್ಲಿ ವಾಷ್ ಮಾಡಿದ್ದಾರೆ. ಅಷ್ಟಕ್ಕೂ ಬಟ್ಟೆಯನ್ನ ಕುಕ್ಕಿ-ಕುಕ್ಕಿ ಒಗೆಸಿದ್ದು ಏಕೆ? ಬಟ್ಟೆಯ ಮೇಲೆ ಇರೋ ರಕ್ತದ ಕಲೆಗಳನ್ನು ಅಳಿಸೋ ಯತ್ನ ನಡೆದಿದೆ ಎಂದು ಪ್ರಸನ್ನ ವಾದಿಸಿದ್ಧಾರೆ. ಪ್ರಸನ್ನ ಅವರು ಹೇಳಿರೋದು ಲುಮಿನಲ್ ಟೆಸ್ಟ್ ಬಗ್ಗೆ.
ಲುಮಿನಲ್ ಎಂಬುದು ಒಂದು ಕೆಮಿಕಲ್. ಬಟ್ಟೆಯನ್ನ ವಾಶ್ ಮಾಡಿದ್ದರೂ ಹೀಮೋಗ್ಲೋಬಿನ್ ಅಂಶ ಹೋಗಿರುವುದಿಲ್ಲ. ಯಾವ ಬಟ್ಟೆಯ ಮೇಲೆ ರಕ್ತ ಕಲೆ ಇರುತ್ತದೆಯೋ ಅದರ ಮೇಲೆ ಲುಮಿನಲ್ ಕೆಮಿಕಲ್ ಬಳಿಯಲಾಗುತ್ತದೆ. ಆಗ ಹೀಮೋಗ್ಲೋಬಿನ್ ಜೊತೆ ವರ್ತಿಸುವ ಲುಮಿನಲ್ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದಿಸುತ್ತದೆ. ಈ ದ್ರಾವಣವನ್ನ ಸಂಗ್ರಹಿಸಿ ಆದರಿಂದ ಡಿಎನ್ಎ ಸಂಗ್ರಹಿಸಲಾಗುತ್ತದೆ.
ಇನ್ನು ಈ ರೀತಿ ಬಟ್ಟೆಯನ್ನು ವಾಶ್ ಮಾಡಿರುವುದು, ಕ್ಲೀನ್ ಮಾಡಿಸಿದ್ದು ಪ್ರಮಾದವಾಗಬಹುದು. ಅದು ಸಾಕ್ಷಿ ನಾಶಕ್ಕೆ ಸಂಬಂಧಪಟ್ಟಂತೆ ಗಂಭೀರ ಅಪರಾಧವಾಗಲಿದೆ.
ಇನ್ನು ಮೋಹನ್ ರಾಜ್ ಮಗಳ ಆಲ್ಬಂ ಮಾಡೋಕೆ ದರ್ಶನ್ ದುಡ್ಡು ಕೊಟ್ಟಿದ್ದರು. ನಂತರ ಮೋಹನ್ ಆಲ್ಬಂ ಮಾಡಲಿಲ್ಲ. ಬದಲಿಗೆ ದುಡ್ಡು ವಾಪಸ್ ಕೊಟ್ಟಿದ್ದರು. ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಆ ಹಣವೇ ಹೊರತು, ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿ ಹಾಕೋದಕ್ಕೆ ಸಂಗ್ರಹಿಸಿದ ಹಣ ಅಲ್ಲ ಎಂದು ಸಿವಿ ನಾಗೇಶ್ ವಾದಿಸಿದ್ದರು.
ಅದಕ್ಕೆ ಉತ್ತರ ಕೊಟ್ಟಿರುವ ಪ್ರಸನ್ನ ಕುಮಾರ್, ದರ್ಶನ್ ಅವರು ಸ್ವಯಂ ಹೇಳಿಕೆಯನ್ನೇ ಉಲ್ಲೇಖಿಸಿ ವಾದ ಮಾಡಿದ್ದಾರೆ. ದರ್ಶನ್ ತಮ್ಮ ಹೇಳಿಕೆಯಲ್ಲಿ ಮನೆಯಲ್ಲಿ ಜಪ್ತಿ ಮಾಡಲಾದ 40 ಲಕ್ಷ ರೂ. ಹಣವನ್ನು ಸಾಕ್ಷ್ಯಗಳನ್ನು ತಿರುಚಲು ಇಟ್ಟುಕೊಂಡಿದ್ದಾಗಿ ಹೇಳಿದ್ಧಾರೆ. ಆರೋಪಿಗಳು ಸ್ಟೋನಿ ಬ್ರೂಕ್ ಪಬ್‌ನಲ್ಲಿ ಊಟಕ್ಕೆ ಸೇರಿದ್ದು, ಷಡ್ಯಂತ್ರ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ದರ್ಶನ್ ಹೇಳಿಕೆಯೇ ದರ್ಶನ್ ಪಾಲಿಗೆ ಮುಳ್ಳಾಗಿದೆ.
ಈ ಎರಡು ವಿಷಯಗಳು ದರ್ಶನ್ ಪಾಲಿಗ್ ದರ್ಶನ್ ಅವರೇ ಮುಳ್ಳಾಗಿರುವಂತೆಯೇ ಇಡೀ ಪ್ರಕರಣದ ಆರೋಪಿಗಳ ಟವರ್ ಲೋಕೇಷನ್, ಕಾಲ್ ಡಿಟೇಲ್ಸ್ ರೆಕಾರ್ಡ್ ಎಲ್ಲಾ ಟೆಕ್ನಿಲ್ ಮ್ಯಾಚ್ ಆಗಿದೆ. ಜೊತೆಗೆ FSL & ಡಿಎನ್ಎ ವರದಿ ಆರೋಪಿಗಳಿಗೆ ಮ್ಯಾಚ್ ಆಗಿದೆ. ಕಿರಣ್, ಪುನೀತ್ ಹೇಳಿಕೆಗೂ ಟೆಕ್ನಿಕಲ್ ಸಾಕ್ಷಿಗಳಿಗೂ ಮ್ಯಾಚ್ ಆಗಿದೆ ಅಂತ ಎಸ್‌ಪಿಪಿ ವಾದಿಸಿದ್ದಾರೆ.
ದರ್ಶನ್‌ಗೆ ಯಾಕೆ ಜಾಮೀನು ಕೊಡಬಾರದು ಅನ್ನೋ ನಿಟ್ಟಿನಲ್ಲಿ ಪ್ರಸನ್ನ ಕುಮಾರ್ ಅವ್ರು ಬಲವಾದ ವಾದ ಮಂಡಿಸಿದ್ದಾರೆ. ಆರೋಪಿಗಳ ವಿರುದ್ಧ ಇರೋ ಸಾಕ್ಷ್ಯಗಳನ್ನು ನ್ಯಾಯಾಧೀಶರ ಮುಂದೆ ಇಟ್ಟಿದ್ದಾರೆ. ಅದರಲ್ಲಿಯೂ ಆರೋಪಿಗಳು ಜೂನ್ 8ನೇ ತಾರೀಖು ಸ್ಥಳದಲ್ಲಿ ಇದ್ದಿದ್ದು. ಹಾಗೆಯೇ ಆರೋಪಿಗಳು ಫೋನ್‌ನಲ್ಲಿ ಮಾತಾಡಿರೋದು, ಸಿಸಿಟಿವಿಯಲ್ಲಿ ಚಿತ್ರ ಸೆರೆಯಾಗಿರೋದು. ಎಲ್ಲವನ್ನು ನ್ಯಾಯಾಧೀಶರ ಮುಂದೆ ಇಟ್ಟಿದ್ದಾರೆ.
ಅಲ್ಲದೆ 96 ವಸ್ತುಗಳನ್ನು FSL ಗೆ ಕಳಿಸಲಾಗಿತ್ತು. ಅದರಲ್ಲಿ ಅನೇಕ ವಸ್ತುಗಳಲ್ಲಿ ರಕ್ತ ಪತ್ತೆಯಾಗಿದೆ. ಸ್ಥಳ ಮಹಜರಿನಲ್ಲಿ ಪೊಲೀಸ್ರು ಉಲ್ಲೇಖ ಮಾಡಿದಕ್ಕೂ? ಲ್ಯಾಬ್ ವರದಿ ಬಂದಿರೋದಕ್ಕೂ ಸರಿ ಇದೆ. ಆದ್ರೆ, 2 ಮರದ ಕೊಂಬೆ ಮೇಲೆ ರಕ್ತ ಪತ್ತೆಯಾಗಿಲ್ಲ ಅನ್ನೋದು ಇದೆ. ಆದರೆ, ಆ ಎರಡು ಕೊಂಬೆಯಲ್ಲಿ ಮಾತ್ರ ಪತ್ತೆಯಾಗಿಲ್ಲ ಅಂದ ಮಾತ್ರಕ್ಕೆ ಮಹಜರ್ ವೇಳೆ ಪತ್ತೆಯಾಗಿಲ್ಲ ಅಂತಾ ಹೇಳಲು ಆಗಲ್ಲ. ED ಮಹಜರ್ ಅನರ್ಹ ಆಗಲ್ಲ ಎಂದು ಪ್ರತಿವಾದ ಮಂಡನೆ ಮಾಡಿದ್ರು.
ಇನ್ನೊಂದು ವಿಚಾರ ಅಂದ್ರೆ, ಆರೋಪಿ ಪ್ರದೂಷ್ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಹತ್ಯೆಯಾದ್ಮೇಲೆ ತೆಗೆದಿರೋ ಫೋಟೋ ಪತ್ತೆಯಾಗಿದೆ ಅನ್ನೋದನ್ನ ಕೋರ್ಟ್ ಮುಂದೆ ಇಟ್ಟಿದ್ದಾರೆ. ಈ ರೀತಿಯಾಗಿ ಕೋರ್ಟ್‌ನಲ್ಲಿ ಸಿವಿ ನಾಗೇಶ್ ಮತ್ತು ಪ್ರಸನ್ನ ಕುಮಾರ್ ಅವರು ವಾದ ಪ್ರತಿವಾದ ಮಾಡಿದ್ದಾರೆ.
ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳ ಜಾಮೀನು ತೀರ್ಪು ಕಾದಿರಿಸಲಾಗಿದೆ. ಇನ್ನುಳಿದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದವರ ವಿಚಾರಣೆ ಇನ್ನೂ ಮುಂದುವರೆಯಲಿದೆ.



