ಮಿಲನ ಪ್ರಕಾಶ್ (Milana prakash) ಪಕ್ಕಾ ಫ್ಯಾಮಿಲಿ ಕಥೆಗಳನ್ನು ಹೇಳೋ ನಿರ್ದೇಶಕ. ದರ್ಶನ್ (Darshan) ಫ್ಯಾಮಿಲಿ ಸ್ಟೋರಿಗೆ ಓಕೆ ಆದರೂ, ಹೆಚ್ಚಾಗಿ ನಟಿಸಿರುವುದು ಆಕ್ಷನ್ ಸಿನಿಮಾಗಳಲ್ಲಿ. ಈ ಹಿಂದೆ ಪ್ರಕಾಶ್ ಮತ್ತು ದರ್ಶನ್ (actor darshan) ಅಭಿನಯದಲ್ಲಿ ಫ್ಯಾಮಿಲಿ ಓರಿಯಂಟೆಡ್ ಸ್ಟೋರಿ ಹೇಳಲಾಗಿತ್ತು. ಈಗ ಆಕ್ಷನ್ ಸಿನಿಮಾ ಹೇಳೋ ಹುಮ್ಮಸ್ಸು ತೋರಿಸಿದೆ ದರ್ಶನ್ ಮತ್ತು ಪ್ರಕಾಶ್ ಜೋಡಿ.
ದರ್ಶನ್ ಅಭಿನಯದ ಕಾಟೇರ (katera) ಚಿತ್ರ ರಿಲೀಸ್ ಹಂತಕ್ಕೆ ಬರುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಕಾಟೇರ (katera) ರಿಲೀಸ್ ಆಗುವುದು ಗ್ಯಾರಂಟಿ. ಈ ವರ್ಷವಂತೂ ಇಲ್ಲ. ಇನ್ನು ಅತಿಥಿ ನಟರಾಗಿ ನಟಿಸಿರುವ ಗರಡಿ (garadi) ಇದೇ ತಿಂಗಳು ರಿಲೀಸ್ ಆಗುತ್ತಿದೆ. ಈ ಮಧ್ಯೆಯೇ ದರ್ಶನ್ ಮತ್ತು ಮಿಲನ ಪ್ರಕಾಶ್ ಜೋಡಿಯ ಹೊಸ ಚಿತ್ರ ಸೆಟ್ಟೇರಿದೆ. ಇದು ದರ್ಶನ್ ಅವರ 57ನೇ ಸಿನಿಮಾ. ಖ್ಯಾತ ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶನದ ದರ್ಶನ್ ಸಿನಿಮಾ ಮುಹೂರ್ತ ಗುರುವಾರ ನೆರವೇರಿದೆ. ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ದರ್ಶನ್ ಅವರ ಹೊಸ ಸಿನಿಮಾದ ಮಹೂರ್ತ ಸದ್ದಿಲ್ಲದೆ ನೆರವೇರಿದ್ದು, ಸಿನಿಮಾಗೆ ಡೆವಿಲ್ (Devil) ಎಂದು ಟೈಟಲ್ ಇಡಲಾಗಿದೆ.
ವೈಷ್ಣೋ ಬ್ಯಾನರ್ ಅಡಿಯಲ್ಲಿ ಡೆವಿಲ್ (Devil) ಸಿನಿಮಾ ನಿರ್ಮಾಣವಾಗಲಿದೆ. ಡೆವಿಲ್ (Devil) ಮುಹೂರ್ತದಲ್ಲಿ ನಟ ದರ್ಶನ್ ದೊಡ್ಡ ಗಣಪನಿಗೆ ಗರಿಕೆ ಅರ್ಪಿಸಿ ಪೂಜೆ ಸಲ್ಲಿಸಿದ್ರು. ಅಜನೀಶ್ ಲೋಕನಾಥ್ ಸಂಗೀತ ಇರಲಿದ್ದು, ಉಳಿದ ಚಿತ್ರತಂಡದ ವಿವರಗಳು ಶೀಘ್ರದಲ್ಲೇ ಬಹಿರಂಗವಾಗಲಿವೆ.
ಡೈರೆಕ್ಟರ್ ಪ್ರಕಾಶ್ ಚಿತ್ರ ಜೀವನದಲ್ಲಿ ಮಿಲನ (Milana) ಸೂಪರ್ ಸಿನಿಮಾ ಎನಿಸಿಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಮತ್ತು ನಟಿ ಪಾರ್ವತಿ ಮೆನನ್ (Actress Parvathi menon) ನಟಿಸಿದ್ದ ಚಿತ್ರವದು. ಅದಾದ ನಂತರ ಪ್ರಕಾಶ್ ಮಿಲನ ಪ್ರಕಾಶ್ ಎಂದೇ ಗುರುತಿಸಿಕೊಂಡಿದ್ದಾರೆ.
ಮಿಲನ ಪ್ರಕಾಶ್ ನಟ ದರ್ಶನ್ ಅಭಿನಯದಲ್ಲಿ ಈ ಹಿಂದೆ ತಾರಕ್ (tharak) ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ದರ್ಶನ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದರು. ಶೃತಿ ಹರಿಹರನ್ Shruthi hariharan, ಶಾನ್ವಿ ಶ್ರೀವಾಸ್ತವ್ Shanvi Shreevastav ಇಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದರು.
ಇತೀಚಿಗಷ್ಟೇ ಡೈರೆಕ್ಟರ್ ಮಿಲನ ಪ್ರಕಾಶ್ ಹೆಸರಿನಲ್ಲಿ D̲57 ಚಿತ್ರದ ಒಂದು ಪೋಸ್ಟರ್ ರಿಲೀಸ್ ಆಗಿತ್ತು. ಅದು ಫ್ಯಾನ್ಸ್ ಮೇಡ್ ಪೋಸ್ಟರ್. ಈಗ ಅಧಿಕೃತವಾಗಿ ಡೆವಿಲ್ ಅನ್ನೋ ಟೈಟಲ್ಲಿನಲ್ಲಿ ಸಿನಿಮಾ ಸೆಟ್ಟೇರಿದೆ. ಟೈಟಲ್ ನೋಡಿದರೆ, ಪಕ್ಕಾ ಆಕ್ಷನ್ ಸಿನಿಮಾ ಎಂಬ ಸುಳಿವೂ ಸಿಕ್ಕಿದೆ.



