ದರ್ಶನ್ ಅವರ ಕೇಸು ಸುತ್ತಿಕೊಳ್ತಿದೆ. ಅದು ಮರ್ಡರ್ ಕೇಸು. ಮರ್ಡರ್ ಕೇಸಿನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಸದ್ಯಕ್ಕೆ ರಿಲೀಸ್ ಆಗುವುದು ಕಷ್ಟ. ಕೋರ್ಟು 6 ದಿನಗಳ ಕಸ್ಟಡಿಗೆ ಕೊಟ್ಟಿದ್ದರೂ.. 6 ದಿನಗಳ ನಂತರ ರಿಲೀಸ್ ಆಗಿಯೇ ಆಗುತ್ತಾರೆ ಎಂಬ ಬಗ್ಗೆ ಗ್ಯಾರಂಟಿ ಏನೂ ಇಲ್ಲ. ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದರೆ, ದರ್ಶನ್ ಗೆಳತಿ ಪವಿತ್ರಾ ಗೌಡ ಎ1 ಆರೋಪಿ. ಹೀಗಾಗಿ ದರ್ಶನ್ ಇನ್ನೂ ಕೆಲವು ದಿನ ಅಥವಾ ತಿಂಗಳು ಜೈಲಿನಲ್ಲಿಯೇ ಇರಬೇಕಾಗಬಹುದು. ಆದರೆ ಅಚ್ಚರಿ ಹುಟ್ಟಿಸುತ್ತಿರುವುದು ದರ್ಶನ್ ಕುಟುಂಬದವರ ನಡೆ.
ಹೌದು, ದರ್ಶನಾ ಅವರನ್ನ ನೋಡುವುದಕ್ಕೆ ತಾಯಿಯಾಗಲೀ, ತಮ್ಮನಾಗಲಿ, ಅಕ್ಕನಾಗಲಿ.. ಹೋಗಲಿ ಪತ್ನಿ ವಿಜಯಲಕ್ಷ್ಮಿ ಅವರಾಗಲೀ.. ಯಾರೂ ಬರುತ್ತಿಲ್ಲ. ಕಳೆದ ಬಾರಿ ಪತ್ನಿಗೆ ಹೊಡೆದ ಕೇಸಿನಲ್ಲಿ ಅರೆಸ್ಟ್ ಆಗಿದ್ದಾಗ ಚಿತ್ರರಂಗದ ಹಲವರು ಜೈಲಿಗೇ ಬಂದು ವಿಚಾರಿಸಿಕೊಂಡಿದ್ದರು. ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಆಗ ಬದುಕಿದ್ದ ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ದರ್ಶನ್ ಅವರ ಜೊತೆಗೆ ನಿಂತಿದ್ದರು. ತಮ್ಮ ದಿನಕರ್ ಕೂಡಾ ಹೊರಗೆ ಮಾತನಾಡದೆ ಹೋದರೂ, ಅಣ್ಣನ ಸಂಸಾರ ಸರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ತಾಯಿ ಕೂಡಾ ಓಡಾಡಿದ್ದರು.
ಆದರೆ.. ಈಗ ದರ್ಶನ್ ಅರೆಸ್ಟ್ ಆಗಿದ್ದರೂ, ಅವರನ್ನ ನೋಡಲು ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಈವರೆಗೂ ಬಂದಿಲ್ಲ. ಸದ್ಯ ಮೀನಾ ತೂಗುದೀಪ ಶ್ರೀನಿವಾಸ್ ಮೈಸೂರಿನ ತಮ್ಮ ನಿವಾಸದಲ್ಲಿದ್ದಾರೆ. ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಮನೆಯ ಗೇಟ್ ಅನ್ನು ಮೀನಾ ತೂಗುದೀಪ ಶ್ರೀನಿವಾಸ್ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ. ಯಾರೊಂದಿಗೆ ಮಾತನಾಡುತ್ತಿಲ್ಲ. ಮಗಳ ಮಗ ಮಾತ್ರ ಮೀನಾ ಅವರ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ.
ತಮ್ಮ ದಿನಕರ್ ತೂಗುದೀಪ ಕೂಡಾ ಮೈಸೂರಿನಲ್ಲೇ ಇದ್ದಾರೆ. ಅಣ್ಣ ತಮ್ಮನ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗಿದೆ. ಅಣ್ಣನ ಪ್ರಕರಣದ ಬಗ್ಗೆ ದಿನಕರ್ ತೂಗುದೀಪ ಕೂಡ ಬೇಸರಗೊಂಡಿದ್ದರೂ.. ಅಣ್ಣನನ್ನು ನೋಡಲಾಗಲಿ, ಸಾಂತ್ವನ ಹೇಳುವುದಕ್ಕಾಗಲಿ ಬರುತ್ತಿಲ್ಲ.
ದರ್ಶನ್ ಅವರ ಅಕ್ಕನ ಕುಟುಂಬದವರೂ ಅಷ್ಟೆ. ಠಾಣೆಗಾಗಲೀ, ಮಾಧ್ಯಮಗಳ ಎದುರಾಗಲೀ ಬಂದಿಲ್ಲ. ಯಾರೂ ಕೂಡಾ ಬರಬೇಡಿ ಎಂದು ದರ್ಶನ್ ಅವರೇ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ತಮ್ಮ ತಾಯಿ ಎಂದೇ ದರ್ಶನ್ ಅವರು ಹೇಳಿಕೊಳ್ಳೋ.. ತನ್ನ ದೊಡ್ಡ ಮಗ ಎಂದು ಹೇಳಿಕೊಳ್ಳೋ ಸುಮಲತಾ ಅಂಬರೀಷ್ ಅವರೂ ಈ ವಿಷಯದಲ್ಲಿ ಗಪ್ ಚುಪ್. ಮಾಧ್ಯಮಗಳಲ್ಲಿಯಾಗಲೀ.. ದರ್ಶನ್ ಅವರ ಜೊತೆ ವೈಯಕ್ತಿಕವಾಗಿ ಆಗಲಿ.. ಮಾತನಾಡುತ್ತಿಲ್ಲ. ಅಣ್ಣ ಎಂದು ಕರೆಯುವ ಅಭಿಷೇಕ್ ಅಂಬರೀಷ್ ಕೂಡಾ ಬಂದಿಲ್ಲ. ಇನ್ನು ಚಿತ್ರರಂಗದಲ್ಲಿ ಮಿಡ್ ನೈಟ್ ಪಾರ್ಟಿ ಮಾಡ್ತಿದ್ದ ನಟ, ನಟಿಯರೂ ಕಾಣಿಸಿಕೊಂಡಿಲ್ಲ.
ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಅಲ್ಲಿಯೂ ಒಂದು ಪೋಸ್ಟ್ ಹಾಕಿಲ್ಲ. ಅಲ್ಲದೆ. ಇನ್ಸ್ಟಾಗ್ರಾಮ್‌ನಲ್ಲಿ ದರ್ಶನ್ ಅವರನ್ನ ವಿಜಯಲಕ್ಷ್ಮೀ ಅನ್‌ಫಾಲೋ ಮಾಡಿದ್ದಾರೆ. ತಮ್ಮ ಆP ಯಲ್ಲಿದ್ದ ಫೋಟೋವನ್ನೂ ವಿಜಯಲಕ್ಷ್ಮೀ ಡಿಲೀಟ್ ಮಾಡಿದ್ದಾರೆ.ದರ್ಶನ್‌ಗೆ ವಿಜಯಲಕ್ಷ್ಮೀ ವಿಚ್ಛೇದನ ಕೊಡ್ತಾರಾ ಎಂಬ ಊಹಾಪೋಹವೂ ಶುರುವಾಗಿದೆ. ಆದರೆ, ಇಂತಹ ಸುದ್ದಿಗಳಿಗೂ ವಿಜಯಲಕ್ಷ್ಮಿ ನೋ ರಿಯಾಕ್ಷನ್. ಮೀಡಿಯಾದವರಿಗೆ ಪವಿತ್ರ ಗೌಡ ಅವರನ್ನು ದರ್ಶನ್ ಅವರ ಪತ್ನಿ ಎಂದು ಹೇಳಬೇಡಿ ಎಂದು ಮನವಿ ಮಾಡಿದ್ದಾರೆಯೇ ಹೊರತು, ಘಟನೆಯ ಬಗ್ಗೆ, ಅರೆಸ್ಟ್ ಬಗ್ಗೆ ಮಾತನಾಡಿಲ್ಲ.
ದರ್ಶನ್ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳಿರುವ ನಟ ಎನ್ನೋದ್ರಲ್ಲಿ ಅನುಮಾನವಿಲ್ಲ. ಅವರ ಬೆನ್ನ ಹಿಂದೆ ದೊಡ್ಡ ಬಳಗವೇ ಇರಬಹುದು. ಆದರೆ..



