“ಈಗಷ್ಟೆ ‘ಕಾಟೇರ’ ಸಿನಿಮಾ ವೀಕ್ಷಿಸಿದೆ. ಆ ಅನುಭವ ನಂಬಲಸಾಧ್ಯವಾಗಿತ್ತು. ಸಾಕಷ್ಟು ಸನ್ನಿವೇಶಗಳಲ್ಲಿ ನನ್ನ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು. ಆದರೆ ಸಿನಿಮಾ ನೋಡಿ ಹೊರಬರುತ್ತಿದ್ದಂತೆ ದರ್ಶನ್ ಅವರ ಕಠಿಣ ಪರಿಶ್ರಮ ಬಗ್ಗೆ ಹಮ್ಮೆ ಹಾಗೂ ಗೌರವ ನನ್ನನ್ನು ಆವರಿಸಿತು. ತರುಣ್ ನಿಜ ಹೇಳಬೇಕು ಅಂದ್ರೆ ನಿಮ್ಮ ಸಿನಿಮಾಗಳಲ್ಲಿ ಇದು ಬೆಸ್ಟ್
ಕಾಟೇರ ನನ್ನ ಅಚ್ಚುಮೆಚ್ಚಿನ ಸಿನಿಮಾ. ದರ್ಶನ್ ಅಭಿಮಾನಿಗಳು ಈ ವಿಷ್ಯುವಲ್ ಟ್ರೀಟ್‌ನಲ್ಲಿ ಮುಳುಗೇಳಬೇಕು ಎಂದು ಕಾಯುತ್ತಿದ್ದೇನೆ. ಒಂದು ಅದ್ಭುತವಾಗಿ ಸವಾರಿ ಸಿದ್ಧರಾಗಿ. ಇಡೀ ತಂಡಕ್ಕೆ ಶುಭವಾಗಲಿ. ಆರಾಧನಾ ಮೊದಲ ಚಿತ್ರಕ್ಕೆ ನನ್ನ ಶುಭ ಹಾರೈಕೆ. ನಮ್ಮ ಚಂದು, ಧ್ರುವನ್‌ಗೂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೂ ಶುಭವಾಗಲಿ
ಇದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ನೀಡಿರುವ ಹೇಳಿಕೆ. ಪತಿ ಹಾಗೂ ಸೋದರಳಿಯ ಚಂದು, ಧ್ರುವನ್ ಅಭಿನಯವನ್ನೂ ಮೆಚ್ಚಿಕೊಂಡಿರುವ ವಿಜಯಲಕ್ಷ್ಮಿ ಅವರಿಗೆ ಕಾಟೇರ ಇಷ್ಟವಾಗಿದೆ.



