ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಶನಿವಾರ ನಡೆದಿರುವ ಒಟ್ಟಾರೆ ಬೆಳವಣಿಗಳು ಹೀಗಿವೆ. ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಅವರಿಗೆ ಹೊಸ ಸಮಸ್ಯೆ ಎದುರಾಗಿದೆ.
ದರ್ಶನ್ʻಗೆ ಇಂಡಿಯನ್ ಟಾಯ್ಲೆಟ್ ಸಮಸ್ಯೆ :
ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ದರ್ಶನ್ ಅವರಿಗೆ ಇಂಡಿಯನ್ ಟಾಯ್ಲೆಟ್ ಸಮಸ್ಯೆಯಾಗಿದೆ. ದರ್ಶನ್ ಅನ್ನು ಬಳ್ಳಾರಿ ಜೈಲಿನ 15ನೇ ಬ್ಯಾರಕ್ನಲ್ಲಿ ಇರಿಸಲಾಗಿದೆ. ಅಲ್ಲಿರೋದು ಭಾರತೀಯ ಮಾದರಿಯ ಶೌಚಾಲಯ. ಸರ್ಜಿಕಲ್ ಟಾಯ್ಲೆಟ್ ಅಂದ್ರೆ ಯೂರೋಪಿಯನ್ ಮಾಡೆಲ್ ಟಾಯ್ಲೆಟ್ ಅಲ್ಲ. ಕುಕ್ಕರಗಾಲಿನಲ್ಲಿ ಕುಳಿತುಕೊಂಡು ಮಲಮೂತ್ರ ವಿಸರ್ಜನೆ ಮಾಡಬೇಕು. ಆದರೆ, ಅದು ದರ್ಶನ್ ಅವರಿಗೆ ಆಗುತ್ತಿಲ್ಲ. ಬೆನ್ನು ನೋವು ಹಾಗೂ ಎಡಗೈ ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಸಮಸ್ಯೆಯಾಗುತ್ತಿದೆಯಂತೆ.
ಈ ಬಗ್ಗೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿರುವ ನಟ ದರ್ಶನ್, ನನಗೆ ಬೆನ್ನು ನೋವು ಹಾಗೂ ಕೈ ನೋವುಗಳಿದ್ದು, ಭಾರತೀಯ ಶೌಚಾಲಯ ಬಳಸುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಈ ಬ್ಯಾರಕ್ಗೆ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ಫಿಟ್ ಮಾಡಿಕೊಡಿ ಇಲ್ಲವಾದರೆ ಸರ್ಜಿಕಲ್ ಚೇರ್ ಅನ್ನಾದರೂ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಜೈಲಧಿಕಾರಿಗಳು, ಜೈಲಿನ ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಪ್ರಿಸನ್ ನಾರ್ತ್ ಡಿಐಜಿ ಟಿಪಿ ಶೇಷ ಅವರೇ ಈ ಮಾಹಿತಿ ನೀಡಿದ್ದಾರೆ.
ದರ್ಶನ್ ಕುರಿತ ವದಂತಿ ಮತ್ತು ಸತ್ಯಗಳು :
ದರ್ಶನ್ ಅವರನ್ನು ವಿಐಪಿ ಸೆಲ್ನಲ್ಲಿ ಇಡಲಾಗಿದೆ ಎಂಬುದು ಸುಳ್ಳು. ಅವರನ್ನು ಹೆಚ್ಚುವರಿ ಭದ್ರತೆ ಇರುವ ಬ್ಯಾರಕ್ನಲ್ಲಿ ಇಡಲಾಗಿದೆ. ಹೈ ಸೆಕ್ಯೂರಿಟಿ ಬ್ಯಾರಕ್ನ 15ನೇ ಅಂದರೆ ಕೊನೆಯ ಸೆಲ್ನಲ್ಲಿ ದರ್ಶನ್ ಅನ್ನು ಇಡಲಾಗಿದೆ. ಆ ಬ್ಯಾರಕ್ನಲ್ಲಿ ನಾಲ್ಕು ಜನ ಇತರೆ ಕೈದಿಗಳಿದ್ದಾರೆ. ಒಂದೊಂದು ಸೆಲ್ನಲ್ಲಿ ಒಬ್ಬೊಬ್ಬರೇ ಕೈದಿಗಳಿದ್ದಾರೆ. ದರ್ಶನ್ ಅವರೂ ಸಿಂಗಲ್ ಆಗಿಯೇ ಇದ್ದಾರೆ.
ದರ್ಶನ್ ಕಾವಲಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಿಬ್ಬಂದಿಗೆ ಬಾಡಿ ಕ್ಯಾಮ್ ಅಳವಡಿಸಲಾಗಿದೆ.
ಇನ್ನು ಬಳ್ಳಾರಿ ಜೈಲಿನ ಕ್ಯಾಂಟೀನ್ ಸೌಲಭ್ಯ ಬಳಸುವುದಕ್ಕೆ ಸಮಸ್ಯೆ ಇಲ್ಲ.
ಜಿಮ್ ಅಥವಾ ಇನ್ಯಾವುದೇ ವಸ್ತುಗಳ ಬೇಡಿಕೆ ಇಟ್ಟರೆ ಜೈಲಿನಲ್ಲಿ ಕೊಡುವುದೂ ಇಲ್ಲ.
ಎಲ್ಲರಿಗೂ ಏನ್ ಊಟ ಕೊಡ್ತಾರೋ.. ಅದನ್ನೇ ಸ್ವೀಕರಿಸಬೇಕು.
ರಕ್ತಸಂಬಂಧಿಕರು, ಪತ್ನಿ ಮತ್ತು ವಕೀಲರು ಮಾತ್ರ ಭೇಟಿ ಮಾಡಬಹುದು.
ಸಿಗರೇಟು ಸಿಗದೆ ದರ್ಶನ್ ಕೈ ನಡುಗುತ್ತಿದೆ ಎಂಬ ಸುದ್ದಿ ಸತ್ಯ ಅಲ್ಲ.
ವಿಜಯಲಕ್ಷ್ಮಿ ಎದುರು ದರ್ಶನ್ ಕಣ್ಣೀರು :
ಈ ನಡುವೆ ಬಳ್ಳಾರಿ ಜೈಲಿಗೆ ತೆರಳಿದ್ದ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಎದುರು ದರ್ಶನ್ ಕಣ್ಣೀರಿಟ್ಟಿದ್ದಾರೆ. ಅವರ ಬಳಿ ಕಣ್ಣೀರಿಟ್ಟಿರುವ ದರ್ಶನ್ ಹೇಗಾದರೂ ನನ್ನನ್ನು ಇಲ್ಲಿಂದ ಶಿಫ್ಟ್ ಮಾಡಿಸು ಎಂದು ಅಂಗಲಾಚಿದ್ದಾರಂತೆ.
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ :
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ವಜಾ ಮಾಡಿದೆ. ಎ೧ ಪವಿತ್ರಾ ಗೌಡ ಅವರಷ್ಟೇ ಅಲ್ಲ, ಎ10 ಆರೋಪಿ ಸ್ಟೋನಿ ಬ್ರೂಕ್ ಮಾಲೀಕ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಎಲ್ಲರ ಜಾಮೀನು ಅರ್ಜಿ ವಜಾ ಆಗಿವೆ.
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಕ್ಕೆ ಕೋರ್ಟ್ ಕೊಟ್ಟ ಕಾರಣಗಳು ಹೀಗಿವೆ.
ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ. ಮಾಡಿರುವಂತ ಪ್ರಕರಣ ಅತ್ಯಂತ ಭೀಕರ ಮತ್ತು ಊಹೆಗೂ ನಿಲುಕದಷ್ಟು ಘೋರವಾಗಿದೆ. ರೇಣುಕಾಸ್ವಾಮಿಯನ್ನು ಭಯಾನಕವಾಗಿ ಚಿತ್ರಹಿಂಸೆ ಮಾಡಲಾಗಿದೆ. ಇಬ್ಬರು ಪ್ರತ್ಯಕ್ಷದರ್ಶಿ ಪವಿತ್ರಾಗೌಡ ಅವರನ್ನು ಗುರುತಿಸಿದ್ದಾರೆ. ಪ್ರಕರಣದ ವೇಳೆ ಆರೋಪಿ ಪವಿತ್ರಾ ಗೌಡ ಅವರ ಬಟ್ಟೆಯಲ್ಲಿ ಡಿಎನ್‌ಎ ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಿದೆ.
ಇತರರ ಜಾಮೀನು ಅರ್ಜಿ ವಜಾಕ್ಕೂ ಕೂಡಾ ಅವರ ಬಟ್ಟೆಯಲ್ಲಿ ಡಿಎನ್‌ಎ ಪತ್ತೆಯಾಗಿರುವುದು, ಕಿಡ್ನಾಪ್ ಮಾಡಿರುವುದಕ್ಕೆ ಪೊಲೀಸರು ಒದಗಿಸಿರುವ ಸಾಕ್ಷಿಗಳನ್ನು ಪರಿಗಣಿಸಿ ಜಾಮೀನು ಅರ್ಜಿ ವಜಾ ಮಾಡಲಾಗಿದೆ.



