ನಟ ದರ್ಶನ್ ಕುರಿತಂತೆ ಹಲವು ಜ್ಯೋತಿಷಿಗಳು ತರಹೇವಾರಿ ಭವಿಷ್ಯ ಹೇಳಿದ್ದಾರೆ. ಹೇಳುತ್ತಿದ್ದಾರೆ. ಈ ನಡುವೆ ನಾಡಿನ ಪ್ರಖ್ಯಾತ ಜ್ಯೋತಿಷಿ ಕೋಡಿಮಠ ಶ್ರೀಗಳು ದರ್ಶನ್ ಬಿಡುಗಡೆ ಯಾವಾಗ ಎಂಬ ಕುರಿತು ಮಾತನಾಡಿದ್ದಾರೆ. ‘ಸಿಂಹಪುರಿಯ ಸಿಂಹ’ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ದರ್ಶನ್ ಬಗ್ಗೆ ಸ್ವಾಮೀಜಿ ಅವರಿಗೆ ಪ್ರಶ್ನೆ ಎದುರಾಯಿತು. ದರ್ಶನ್ ಯಾವಾಗ ಜೈಲಿಂದ ಹೊರ ಬರ್ತಾರೆ? ಆ ದಿನ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಕೋಡಿಮಠದ ಕಾಲಜ್ಞಾನಿ ಶ್ರೀಗಳು ಹೇಳಿದ್ದೇ ಬೇರೆ.
ಪ್ರಕರಣ ನ್ಯಾಯಾಲಯದಲ್ಲಿದೆ ಎಂದ್ರು. ಈ ವಿಚಾರ ಕೋರ್ಟ್ನಲ್ಲಿ ತೀರ್ಮಾನ ಆಗುತ್ತೆ. ಹೀಗಾಗಿ ಈ ಬಗ್ಗೆ ಹೆಚ್ಚು ಮಾತಾಡಲ್ಲ.ಈಗ ದರ್ಶನ್ ಬಗ್ಗೆ ಮಾತಾಡಿದ್ರೆ ನ್ಯಾಯಲಯದ ವಿರುದ್ದ ನಾವು ಮಾತನಾಡಿದ ಹಾಗೆ ಆಗುತ್ತೆ. ಹೀಗಾಗಿ ಹೆಚ್ಚು ಮಾತಾಡಲ್ಲ, ದರ್ಶನ್ ಅವರಿಗೆ ದೇವ್ರು ಒಳ್ಳೆಯದನ್ನು ಮಾಡಲಿ.. ಎಂದು ಹೇಳಿದ್ದಾರೆ.
ಜೈಲಿಂದ ಹೊರ ಬಂದ ಬಳಿಕ ದರ್ಶನ್ ರಾಜಕೀಯಕ್ಕೆ ಬರ್ತಾರಾ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕೋಡಿ ಮಠದ ಶ್ರೀಗಳು, ದರ್ಶನ್ ಹೊರ ಬಂದ ಮೇಲೆ ಇದರ ಬಗ್ಗೆ ನೋಡೊಣ ಎಂದಿದ್ದಾರೆ. ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆರಂಭದಿಂದಲೂ ದರ್ಶನ್ ವಿಷಯದ ಬಗ್ಗೆ ಯಾವುದೇ ಭವಿಷ್ಯವಾಣಿ ಹೇಳಿಲ್ಲ.
ಇನ್ನು ದರ್ಶನ್ ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಬರುತ್ತಾರೆ. ನಂತರ ಮುಂದಿನ ಚುನಾವಣೆಗೆ ಮಂಡ್ಯದಿಂದ ಚುನಾವಣೆಗೆ ನಿಲ್ಲುತ್ತಾರೆ ಎಂದು ಹಲವಾರು ಜ್ಯೋತಿಷಿಗಳು ಭವಿಷ್ಯ ಹೇಳಿದ್ದಾರೆ. ಆದರೆ ಕೋಡಿಮಠ ಶ್ರೀಗಳು ಈ ಬಗ್ಗೆ ಮಾತನ್ನೇ ಆಡಿಲ್ಲ.



