ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಸಂಸಾರದಲ್ಲಿ ಬಿರುಕು ಮೂಡಿದ ಕೆಲವೇ ತಿಂಗಳಲ್ಲಿ ರಕ್ತ ಬರುವಂತೆ ಹೊಡೆದಿದ್ದರು ದರ್ಶನ್. ಆಗಲೇ ವಿಜಯಲಕ್ಷ್ಮಿ ದರ್ಶನ್, ಅಂಬರೀಷ್, ಶಿವಣ್ಣ ಮೊದಲಾದವರ ನೆರವು ಕೇಳಿದ್ದು. ಮನೆಯಲ್ಲಿ ಆಶ್ರಯ ಕೊಟ್ಟಿದ್ದ ಶಿವಣ್ಣ, ಅದಾದ ನಂತರ ಅನುಭವಿಸಿದ್ದು ಬೇರೆಯದೇ ನರಕ. ಅದಾದ ಮೇಲೆ ದರ್ಶನ್ 2011ರಲ್ಲಿ ಜೈಲು ಸೇರಿದ್ದು, 28 ದಿನಗಳ ಜೈಲು ವಾಸ ಅನುಭವಿಸಿದ್ದು ಬೇರೆಯೇ ಕಥೆ. ಜೈಲಿನಿಂದ ಹೊರಬಂದ ಮೇಲೆ ಸುಮಾರು ಒಂದು ವರ್ಷದಲ್ಲಿ ಪೊಲೀಸರು ಕೇಸ್ ಕ್ಲೋಸ್ ಮಾಡಿದರು.
ವಿಜಯಲಕ್ಷ್ಮಿ, ಪೊಲೀಸರಿಗೆ ಯಾವುದೇ ರೀತಿಯ ಸಹಕಾರ ಕೊಡಲಿಲ್ಲ. ಅಲ್ಲದೆ ಶಿವಣ್ಣ ಕೂಡಾ ಪ್ರತಿಕೂಲ ಸಾಕ್ಷಿಯಾಗಿ ದರ್ಶನ್ ಮತ್ತು ವಿಜಯಲಕ್ಷ್ಮಿ ಸಂಸಾರ ಒಂದುಗೂಡಲು ನೆರವಾದರು. ಆದರೆ ಕೇಸ್ ಕ್ಲೋಸ್ ಆಗುವ ಹೊತ್ತಿಗೆ ದರ್ಶನ್ ಮತ್ತೆ ಹಾದಿ ಬದಲಿಸಿದ್ದರು.
ಅದೇ ಸಮಯಕ್ಕೆ ಇತ್ತ ಪವಿತ್ರಾ ಗೌಡ ಅವರೂ ಕೂಡಾ ದಾರಿ ತಪ್ಪಿದ್ದರು. ಡೈವೋರ್ಸ್ ಆದ ಮೂರ್ನಾಲ್ಕು ತಿಂಗಳಿಗೇ ಪವಿತ್ರಾ ಗೌಡ ಅವರು ದರ್ಶನ್ ಜೊತೆ ಲಿವ್ ಇನ್ ಸಂಬಂಧಕ್ಕೆ ಜಾರಿದ್ದರು ಎನ್ನುತ್ತಾರೆ ಸಂಜಯ್ ಸಿಂಗ್.
ಸಂಜಯ್ ಸಿಂಗ್, ಪವಿತ್ರಾ ಗೌಡ ಅವರ ಗಂಡ. ಲವ್ ಮ್ಯಾರೇಜ್ ಆಗಿ, ಡೈವೋರ್ಸ್ ಕೂಡಾ ಆಗಿದೆ. ಡೈವೋರ್ಸ್ ನಂತರ ಕೂಡಾ ಸಂಜಯ್ ಸಿಂಗ್ ಒಂಟಿಯಾಗಿಯೇ ಇದ್ದಾರೆ. 2007ರಲ್ಲಿ ಮದುವೆಯಾದ ಸಂಜಯ್ ಸಿಂಗ್ ಮತ್ತು ಪವಿತ್ರಾ ಗೌಡ ಸುಮಾರು 6 ವರ್ಷ ದಾಂಪತ್ಯದಲ್ಲಿದ್ದರು. ಮಗಳು ಹುಟ್ಟಿದಳು. ಆದರೆ, ಅಷ್ಟೊತ್ತಿಗೆ ಇಬ್ಬರ ನಡುವೆ ಕ್ಲಾಶ್ ಶುರುವಾಗಿತ್ತು.
ಸಂಜಯ್ ಸಿಂಗ್ ಅವರ ಪ್ರಕಾರ ದುಡಿಯುವುದರ ಬಗ್ಗೆಯೇ ಜಗಳ ಶುರುವಾಯ್ತಂತೆ. ಪವಿತ್ರಾ ಗೌಡ ಅವರಿಗೆ ʻಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ನಂತರ ಕೆರಿಯರ್ ಮೇಲೆ ಆಸಕ್ತಿ ಬೆಳೀತು. ಅದಾದ ಮೇಲೆ ಸೀರಿಯಲ್, ಸಿನಿಮಾ, ಮಾಡೆಲಿಂಗ್ ಅಂತೆಲ್ಲ ಓಡಾಡೋಕೆ ಶುರು ಮಾಡಿದರು. ಮನೆ, ಮಗುವಿನ ಮೇಲೆ ಆಸಕ್ತಿ ಕಡಿಮೆಯಾಯ್ತು. ಎಲ್ಲಾ ಬಿಟ್ಟು ಮನೆಯಲ್ಲಿರು. ನಾನು ನೋಡಿಕೊಳ್ತೀನಿ’’ ಅಂತ ನಾನು ಹೇಳಿದ್ದೆ. ‘’ನೀನೆಲ್ಲಾ ಬಿಟ್ಟು ಮನೆಯಲ್ಲಿರು. ನಾನು ನೋಡಿಕೊಳ್ತೀನಿ’’ ಅಂತ ಅವಳು ಹೇಳಿದಳು. ಅದು ಹೇಗೆ ಸಾಧ್ಯ. ಇಲ್ಲಿಂದಲೇ ಕ್ಲ್ಯಾಶ್ ಶುರುವಾಗಿದ್ದು ಎಂದು ಹೇಳಿಕೊಂಡಿದ್ದಾರೆ ಸಂಜಯ್ ಸಿಂಗ್.
2013ರಲ್ಲಿ ಡೈವೋರ್ಸ್ ಆಯ್ತು. ಮದುವೆಯಾದ ಮೂರ್ನಾಲ್ಕು ತಿಂಗಳಿಗೆಲ್ಲ ದರ್ಶನ್ ಜೊತೆ ರಿಲೇಷನ್ʻಶಿಪ್ಪಿನಲ್ಲಿದ್ದಾರೆ ಅನ್ನೋ ಸುದ್ದಿ ಕಿವಿಗೆ ಬಿತ್ತು. ಅಷ್ಟು ಹೊತ್ತಿಗೆ ಪವಿತ್ರಾ ಗೌಡ ದೂರವಾಗಿದ್ದಕ್ಕೆ ನಾನು ಡಿಪ್ರೆಷನ್ನಿಗೆ ಹೋಗಿದ್ದೆ. ಸುಮಾರು 2 ವರ್ಷ ಡಿಪ್ರೆಷನ್ನಿಗೆ ಬಿದ್ದಿದ್ದೆ. ಪೋಷಕರು, ಸ್ನೇಹಿತರ ಸಹಾಯದಿಂದ ಡಿಪ್ರೆಷನ್ʻನಿಂದ ಹೊರಬಂದೆ ಎನ್ನುತ್ತಾರೆ ಸಂಜಯ್ ಸಿಂಗ್.
ಸಂಜಯ್ ಸಿಂಗ್ ಮತ್ತೆ ಮದುವೆಯಾಗುವ ಯೋಚನೆಯನ್ನೇ ಮಾಡಿಲ್ಲವಂತೆ.ಅವಳೇ ನನ್ನ ಫಸ್ಟ್ & ಲಾಸ್ಟ್ ಲವ್ ಎನ್ನುವ ಸಂಜಯ್ ಸಿಂಗ್, ಪವಿತ್ರಾ ಗೌಡ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಹೇಳ್ತಾರೆ. ಅಕಸ್ಮಾತ್ ಆಕೆ ವಾಪಸ್ ಬಂದರೆ ʻಬಂದರೆ ಓಕೆ, ಬರದಿದ್ದರೂ ಓಕೆ, ಅವಳಿಗೆ ಕಷ್ಟ ಬಂದರೆ ನಾನ್ಯಾವಾಗಲೂ ಆಕೆಯ ಜೊತೆಯಲ್ಲಿರುತ್ತೇನೆʼ ಎನ್ನುತ್ತಾರೆ ಸಂಜಯ್ ಸಿಂಗ್.



