ನಟಿ ರಮ್ಯಾ ಅವರು ದರ್ಶನ್ ಅಭಿಮಾನಿಗಳ ಲೂಸ್ ಟಾಕ್, ಬೈಗುಳದ ವಿರುದ್ಧ ರೊಚ್ಚಿಗೆದ್ದು ಕೇಸ್ ಹಾಕಿರುವುದು, ಕೆಲವರು ಆಗಲೇ ಅರೆಸ್ಟ್ ಆಗಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಅದೇ ರಮ್ಯಾ ದರ್ಶನ್, ಪವಿತ್ರಾ ಅವರ ಬಗ್ಗೆ ಅಯ್ಯೋ ಪಾಪ ಅಂತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸುಪ್ರೀಂಕೋರ್ಟ್ ಮೊದಲ ಬಾರಿಗೆ ಗರಂ ಆಗಿದ್ದಾಗ.. ರಮ್ಯಾ ಅವರು ನ್ಯಾಯಕ್ಕೆ ಜಯ ಸಿಗುವ ಭರವಸೆ ಇದೆ ಅಂತಾ ಪೋಸ್ಟ್ ಮಾಡಿದ್ರು. ಹಂಗಾದ್ರೆ.. ರಮ್ಯಾಗೆ.. ದರ್ಶನ್ ಮೇಲೆ ಏನೋ ಸಿಟ್ಟಿದೆ, ಆಕ್ರೋಶ ಇದೆ ಅಂತಾ ಕೆಲವ್ರು ಅಂದ್ಕೊಂಡಿದ್ರು. ಆದರೆ.. ಹಾಗೇನಲ್ಲ. ರಮ್ಯಾ ಅವರು ಈಗ ದರ್ಶನ್, ಪವಿತ್ರಾ ಗೌಡ ಮತ್ತವರ ಗ್ಯಾಂಗ್ ಬಗ್ಗೆ ಅಯ್ಯೋ ಅನ್ನೋದಕ್ಕೆ ಕಾರಣ ಇದೆ.
ದರ್ಶನ್ ಅಭಿನಯದ ದತ್ತ ಚಿತ್ರದಲ್ಲಿ ರಮ್ಯಾ ಹೀರೋಯಿನ್ ಆಗಿ ನಟಿಸಿದ್ರು. ಆಗೆಲ್ಲ ರಮ್ಯಾ & ದರ್ಶನ್ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ರು. ಆ ಸಿನಿಮಾ ಆದ್ಮೇಲೂ ಕೂಡಾ ಫ್ರೆಂಡ್ ಶಿಪ್ ಹಾಗೇನೇ ಇತ್ತು. ಅಂತಹ ರಮ್ಯಾ ಬೇಲ್ ಕ್ಯಾನ್ಸಲ್ ಆದಾಗ.. ನ್ಯಾಯಕ್ಕೆ ಜಯ ಸಿಕ್ಕಿದೆ ಅಂತಾ ಪೋಸ್ಟ್ ಹಾಕ್ಕೊಂಡಿದ್ರು. ಈಗ ಅದೇ ಅನುಕಂಪವಾಗಿದೆ.
ದರ್ಶನ್ ಜೊತೆಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡಿರೋ ರಮ್ಯಾ ನಾನು ದರ್ಶನ್ ಜೊತೆ ಕೆಲಸ ಮಾಡಿದ್ದೀನಿ, ತಾವು ಇಂಡಸ್ಟ್ರಿಗೆ ಬಂದಿದ್ದು ಹೇಗೆ.. ಏನೇನೆಲ್ಲ ಕಷ್ಟ ಪಟ್ಟೆ ಅನ್ನೋದನ್ನ ಹೇಳ್ಕೊಂಡಿದ್ರು. ಒಬ್ಬ ಲೈಟ್ ಬಾಯ್ ಆಗಿ ಬಂದ ವ್ಯಕ್ತಿ, ಹೀಗೆ ಬೆಳೆದಿದ್ದು.. ತುಂಬಾನೇ ಖುಷಿ ಕೊಡ್ತಿತ್ತು. ಆದರೆ.. ದರ್ಶನ್ ಅವರನ್ನ ಯಾರೂ ಹಾಳು ಮಾಡ್ಲಿಲ್ಲ. ಅವರ ಜೀವನವನ್ನ ಅವರೇ ಹಾಳ್ ಮಾಡ್ಕೊಂಡ್ರು ಅಂದಿದ್ದಾರೆ ರಮ್ಯಾ.
ಒಂದು ಮಟ್ಟಕ್ಕೆ ಬೆಳೆದವರಿಗೆ ಒಂದು ಜವಾಬ್ದಾರಿ ಇರುತ್ತೆ. ಅದ್ರಲ್ಲೂ ದರ್ಶನ್ ಈ ಮಟ್ಟಕ್ಕೆ ಬೆಳೆದ ಮೇಲೆ, ತಮ್ಮ ಸುತ್ತ ಮುತ್ತ ಒಳ್ಳೆಯವರನ್ನ ಇಟ್ಕೊಬೇಕಿತ್ತು. ಒಳ್ಳೆಯ ದಾರಿಯಲ್ಲಿ ಹೋಗಬಹುದಿತ್ತು. ಒಳ್ಳಯವರ ಸಹವಾಸದಲ್ಲಿ ಇರ್ಬೇಕಿತ್ತು. ದರ್ಶನ್ ಅವರ ವರ್ತನೆ ನೋಡ್ತಾ ಇದ್ರೆ.. ದರ್ಶನ್ ಸುತ್ತ ಮುತ್ತ ಒಳ್ಳೆಯ ಜನ, ಬುದ್ದಿ ಹೇಳೋವ್ರು ಇಲ್ಲ ಅನ್ಸುತ್ತೆ ಅಂದಿದ್ದಾರೆ ರಮ್ಯಾ.
ಇನ್ನು ಪವಿತ್ರಾ ಗೌಡ ಅವರು ಯಾರು ಅಂತಾನೇ ಗೊತ್ತಿರಲಿಲ್ಲವಂತೆ. ಅವರೂ ನಟಿಯಾಗಿದ್ದರಂತೆ. ಆದರೇ.. ಅವರು ಯಾರು ಎಂದು ಗೊತ್ತಾಗಿದ್ದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ. ಪಾಪ ಅನ್ಸುತ್ತೆ.. ಅವರಿಗೆ ಒಬ್ಬಳು ಮಗಳಿದ್ದಾಳೆ. ಅದನ್ನ ನೆನಪಿಸಿಕೊಂಡ್ರೆ ಬೇಜಾರ್ ಆಗುತ್ತೆ ಅಂದಿರೋ ರಮ್ಯಾ, ಪವಿತ್ರಾ ಗೌಡ ಅವರೂ ಅಷ್ಟೇ, ತಾವೇ ಶಿಕ್ಷೆ ಕೊಡೋಕೆ ಹೋಗೋ ಬದ್ಲು, ಕಾನೂನಿನ ಮೂಲಕ ಆಕ್ಷನ್ ತಗೋಬಹುದಿತ್ತು. ಏನೇ ಆನ್ಯಾಯ ಆಗ್ಲಿ.. ನಾವು ಒಂದು ಜವಾಬ್ದಾರಿ ಇರೋ ಸಿಟಿಜನ್ ಆಗಿ, ಕಾನೂನು ಪ್ರಕಾರನೇ ಹೋಗ್ಬೇಕು ಅಂದಿದ್ದಾರೆ.
ರೇಣುಕಾಸ್ವಾಮಿ ಮಾಡಿದ್ದು ತಪ್ಪೇ ಇರಬಹುದು.. ಶಿಕ್ಷಿಸೋಕೆ ನಮಗೆ ಅಧಿಕಾರ ಇಲ್ಲ ಅಂದಿರೋ ರಮ್ಯಾ, ಅವರ ಪತ್ನಿ, ತಂದೆ ಇಲ್ಲದ ಆ ಮಗುವನ್ನ ನೋಡಿದ್ರೆ ಬೇಜಾರ್ ಆಗುತ್ತೆ ಅಂತಾನೂ ಹೇಳಿದ್ದಾರೆ.



