ಹೆಚ್ಚು ಸಮಯಾವಕಾಶ ಇಲ್ಲ. ಏಕೆಂದರೆ ಹೈಕೋರ್ಟ್ ಜಾಮೀನು ಕೊಟ್ಟಿರುವುದೇ 6 ವಾರಗಳ ಅವಧಿಗೆ. ಈ 6 ವಾರಗಳ ಗ್ಯಾಪಿನಲ್ಲಿ ಚಿಕಿತ್ಸೆ, ಥೆರಪಿ, ರೆಸ್ಟ್, ರಿಕವರಿ ಎಲ್ಲವೂ ಆಗಬೇಕು. ಅದರಲ್ಲಿ ಒಂದು ವಾರದ ರಿಪೋರ್ಟ್, ಪರೀಕ್ಷೆಯಲ್ಲೇ ಕಳೆದು ಹೋಗಿದೆ. ರೇಣುಕಾಸ್ವಾಮಿ ಕೇಸಿನಲ್ಲಿ ಜೈಲು ಸೇರಿದ್ದ ನಟ ದರ್ಶನ್, ತೀವ್ರ ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಜೈಲಿನಿಂದ ಬಿಡುಗಡೆ ಸಿಕ್ಕಿರುವುದು 6 ವಾರ ಅಂದರೆ 42 ದಿನಗಳ ಕಾಲ ಮಾತ್ರ. ಈ 6 ವಾರಗಳಲ್ಲಿ ಒಂದು ವಾರ ಅಂದ್ರೆ 7 ದಿನ ಕಳೆದೂ ಹೋಗಿದೆ. ಇನ್ನೀಗ ಉಳಿದಿರೋದು 34 ದಿನ. ವಾರದೊಳಗೆ ರಿಪೋರ್ಟ್ ಸಲ್ಲಿಸಿರುವ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು, ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆ ಮತ್ತು ಆಪರೇಷನ್ ಅನಿವಾರ್ಯ ಎಂದು ಹೇಳಿದ್ದಾರೆ.
ಆರೋಗ್ಯದ ಹಿತದೃಷ್ಟಿಯಿಂದ ಸರ್ಜರಿ ಸೂಕ್ತ ಎಂದೇನೋ ವೈದ್ಯರು ಹೇಳಿರುವ ವೈದ್ಯರು, ಚಿಕಿತ್ಸೆಯ ಮೊದಲ ಹಂತಗಳಾದ ಮೆಡಿಕೇಷನ್ ಮತ್ತು ಫಿಸಿಯೋಥೆರಪಿ ಮಾಡಿದ್ದಾರೆ. ಅಂತಿಮವಾಗಿ ಸರ್ಜರಿ ಅತ್ಯಗತ್ಯ ಎಂದು ಹೇಳಿದ್ದಾರೆ. ಎಲ್5 ಮತ್ತು ಎಸ್1 ನಡುವೆ ಡಿಸ್ಕ್ ಇದೆ. ಅದು ಊದಿಕೊಂಡಿದೆ. ಡಿಸ್ಕ್ ಸಮಸ್ಯೆಯ ಪರಿಣಾಮ ನರಗಳ ನಡುವೆ ರಕ್ತಪರಿಚಲನೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಕಾಲಿನ ತೊಡೆಯ ಭಾಗ ಭಾಗಶಃ ಸ್ಪರ್ಶ ಉಳಿಸಿಕೊಂಡಿದೆ ಅಷ್ಟೇ. ಹೆಚ್ಚು ದಿನಗಳ ಕಾಲ ಹೀಗೆಯೇ ಮುಂದುವರಿಸುವುದು ಸಾಧ್ಯವಿಲ್ಲ. ಹೀಗಾಗಿ ಇನ್ನೆರಡು ದಿನಗಳಲ್ಲಿ ಸರ್ಜರಿ ಅತ್ಯಗತ್ಯ ಎಂದು ವೈದ್ಯರು ರಿಪೋರ್ಟ್ ಕೊಟ್ಟಿದ್ದಾರೆ.
ಈ ಬಗ್ಗೆ ಸರ್ಜರಿಗೆ ನಿರ್ಧಾರ ಮಾಡಿರುವ ವೈದ್ಯರು, ಶಸ್ತ್ರಚಿಕಿತ್ಸೆಗೆ ವಿಜಯಲಕ್ಷ್ಮಿ ದರ್ಶನ್ ಅವರ ಅನುಮತಿಯನ್ನೂ ಪಡೆದಿದ್ದಾರಂತೆ. ಇದೇ ವರದಿಯನ್ನು ಹೈಕೋರ್ಟಿಗೂ ಸಲ್ಲಿಸಿದ್ದಾರೆ.ಹೈಕೋರ್ಟಿಗೆ ವರದಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್, ವೈದ್ಯಕೀಯ ವರದಿಯನ್ನು ಒಂದು ವಾರದ ಒಳಗೆ ಸಲ್ಲಿಸಲು ಸೂಚನೆ ನೀಡಿತ್ತು. ಹೀಗಾಗಿ ಕೊನೆಯ ದಿನ ಹೈಕೋರ್ಟಿಗೆ ವೈದ್ಯರ ವರದಿ ಸಲ್ಲಿಸಲಾಗಿದೆ. ಮುಂದಿನ 5 ವಾರಗಳಲ್ಲಿ ದರ್ಶನ್ ಚಿಕಿತ್ಸೆ ಪಡೆದು, ವಿಶ್ರಾಂತಿಯನ್ನೂ ಪಡೆದುಕೊಂಡು ಮತ್ತೆ ಜೈಲು ಸೇರಬೇಕಾಗಿದೆ.
ಬೆನ್ನುಹುರಿ ಶಸ್ತ್ರಚಿಕಿತ್ಸೆ ಎಂದರೆ ಅದು ತುಂಬಾನೇ ಸೂಕ್ಷ್ಮ ಶಸ್ತ್ರಚಿಕಿತ್ಸೆ. ಸರ್ಜರಿ ಬಳಿಕ ವೈದ್ಯರು ದರ್ಶನ್ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುತ್ತಾರೆ. ಆಧರೆ ವೈದ್ಯರು ಎಷ್ಟು ದಿನ ವಿಶ್ರಾಂತಿ ಪಡೆಯಲು ಸೂಚನೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಏಕೆಂದರೆ ಈ ವಿಶ್ರಾಂತಿ ಸಮಯದಲ್ಲಿಯೇ ದರ್ಶನ್ ರಿಕವರಿ ಆಗಬೇಕು. ರಿಕವರಿಗೆ ಕಾಲಾವಕಾಶ ಬೇಕೇ ಬೇಕು. ಹೀಗಾಗಿ.. ದರ್ಶನ್ ಪರ ವಕೀಲರು ವೈದ್ಯರ ವರದಿ ಆಧಾರದ ಮೇಲೆ ಮಧ್ಯಂತರ ಜಾಮೀನು ವಿಸ್ತರಣೆಗೆ ಸಮಯಾವಾವಕಾಶ ಕೇಳುವ ಅವಕಾಶವೂ ಇದೆ.



