ದರ್ಶನ್ ಕುಡುದ್ರೆ ಮನ್ಷಾನೇ ಆಗಿರಲ್ಲ. ಅವಳು.. ಅದೇ ಪವಿತ್ರಂಗೂ ಹೊಡೆದಿದ್ದಾನೆ. ಅವನು ಹೊಡೆದಿರೋ ವಿಡಿಯೋಗಳೆಲ್ಲ ಸಿಕ್ಕಿವೆ. ಮಿನಿಮಮ್ ಒಂದ್ ವರ್ಷ ಬೇಲ್ ಕೂಡಾ ಸಿಕ್ಕಲ್ಲ. ಕೇಸು ಅಷ್ಟು ಸ್ಟ್ರಾಂಗ್ ಇದೆ. ಯಾವ ಜಡ್ಜ್ ಹತ್ತಿರ ಹೋದರೂ ಅಷ್ಟೇ.. ಇದು ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ಒಬ್ಬರು ತಮ್ಮ ಆಪ್ತರ ಬಳಿ ಹೇಳಿಕೊಂಡಿರೋ ಆಡಿಯೋ.
ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಗ್ಯಾಂಗ್ʻನ್ನು ಸುಲಭವಾಗಿ ಬಿಡುತ್ತಿಲ್ಲ. ಬಿಡುವುದೂ ಇಲ್ಲ. ಏಕೆಂದರೆ ದಿನೇ ದಿನೇ ದರ್ಶನ್ ಗ್ಯಾಂಗ್ ನಡೆಸಿದ್ದ ಹತ್ಯೆಯ ಪ್ರಬಲ ಸಾಕ್ಷಿಗಳು ಹೊರಬರುತ್ತಲೇ ಇವೆ. ಕಂಪ್ಲೀಟ್ ಪಿಕ್ಚರ್ ಸಿಕ್ಕಿದೆ. ಈ ನಡುವೆ ಪೊಲೀಸ್ ಒಬ್ಬರು ತಮ್ಮ ಆಪ್ತರ ಜೊತೆಗೆ ಫೋನ್ ಕಾಲ್‌ನಲ್ಲಿ ನಡೆಸಿರುವ ಸಂಭಾಷಣೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಡಿಯೋದಲ್ಲಿ ʻʻಚಿಕ್ಕ ಹುಡುಗನನ್ನ (ರೇಣುಕಾಸ್ವಾಮಿ) ಕೋಳಿ ಎತ್ಕೊಂಡ್ ಎಸೆಯುವ ಹಾಗೆ ಗೋಡೆಗೆ ಎಸೆದಿದ್ದಾನೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡಿಂಗ್ ಇದೆ. ಪವಿತ್ರಾ ಗೌಡಗೂ ಹೊಡೆದಿದ್ದಾನೆ. 1 ವರ್ಷ ಬೇಲ್ ಸಿಗೋದು ಕಷ್ಟ. ಎಂಥಾ ಲಾಯರ್‌ನ ಕರ್ಕೊಂಡು ಬಂದರೂ 6 ತಿಂಗಳು ಬೇಲ್ ಸಿಗಲ್ಲʼʼ ಎಂಬ ಮಾತುಗಳಿವೆ.
ಆಡಿಯೋದ ಕಂಪ್ಲೀಟ್ ಸಂಭಾಷಣೆ ಹೀಗಿದೆ..
ಪೊಲೀಸ್ – 302ಗೆ ಹೆಸರು ತರಬೇಕು ಅಂದ್ರೆ.. ಸುಮ್ ಸುಮ್ನೆ ತರಲ್ಲ. ಲೈಫ್ ಅಲ್ವಾ?
ಆಪ್ತ – ಹೌದಾ?
ಪೊಲೀಸ್ – ಸುಮ್ಮನೆ ವಾರ್ನಿಂಗ್ ಮಾಡಿ ಬಿಟ್ಟುಬಿಟ್ಟಿದ್ದರೆ ಆಗ್ತಿತ್ತು.
ಆಪ್ತ – ಹುಡುಗರು ಮಾಡಿದ್ದಾರೆ ಅಂತಾರೆ ನಿಜಾನಾ?
ಪೊಲೀಸ್ – ಎಲ್ಲರೂ ಸೇರಿ ಹೊಡೆದಿರೋದು. ಬರೆ ಎಲ್ಲಾ ಹಾಕಿದ್ದಾರಲ್ಲ. ಕಬ್ಬಿಣ ಕಾಯಿಸಿ ಬರೆ ಹಾಕಿ, ಲಾರಿಗೆ ತಲೆ ಹೊಡೆದು..
ಆಪ್ತ – ಲಾರಿಗಾ?
ಪೊಲೀಸ್ – ಹಾ.. ಅಲ್ಲೆಲ್ಲಾ ಸೀಝ್ ಮಾಡಿರುವ ಗಾಡಿಗಳಿವೆ. ಲಾರಿ, ಬಸ್, ಆಟೋ ಎಲ್ಲಾ. ಇವನಿರುವ ಹ್ಯೂಚ್ ಬಾಡಿಗೆ.. ಅವನು ಚಿಕ್ಕ ಹುಡುಗನಿಗೆ ಕೋಳಿ ಎತ್ಕೊಂಡ್ ಎಸೆಯುವ ಹಾಗೆ ಗೋಡೆಗೆ ಎಸೆಯುತ್ತಾನೆ.
ಆಪ್ತ – ಯಾರು?
ಪೊಲೀಸ್ – ದರ್ಶನ್!
ಆಪ್ತ – ವಿಡಿಯೋ ಇದ್ಯಾ?
ಪೊಲೀಸ್ – ಹಾ.. ಎಲ್ಲಾ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡಿಂಗ್ ಇದೆ.
ಆಪ್ತ – ಹೌದಾ?
ಪೊಲೀಸ್ – ಇಲ್ಲಾಂದ್ರೆ ಸುಮ್ನೆನಾ.. ಎಂಥಾ ಹೈ ಪ್ರೆಶರ್ ಗೊತ್ತಾ? ಎಷ್ಟು ಇನ್‌ಫ್ಲುಯೆನ್ಸ್ ಗೊತ್ತಾ ಅವನನ್ನ ಅರೆಸ್ಟ್ ಮಾಡಬಾರದು ಅಂತ.
ಆಪ್ತ – ಕಾಂಗ್ರೆಸ್ ಇರಲ್ಲ ಫೇವರ್ ಆಗಿ.. ಯಾಕಂದ್ರೆ ಇವರು ವಿರುದ್ಧ..
ಪೊಲೀಸ್ – ಹೌದೌದು.. ಆದರೆ, ಇಲ್ಲಿ ಯಾರೂ ರಾಜಕೀಯ ತಂದಿಲ್ಲ. ಆದರೆ ಇನ್‌ಫ್ಲುಯೆನ್ಸ್! ಜಾಸ್ತಿ ಪ್ರೆಶರ್ ಬಂತು. ಅರೆಸ್ಟ್ ಮಾಡಬೇಡಿ ಅಂತ. ಯಾವುದಕ್ಕೂ ಜಗ್ಗಿಲ್ಲ. ಎತ್ತಾಕೊಂಡು ಬಂದಿರೋದೇ. ಇವತ್ತಿಂದ ಆಟ ಸ್ಟಾರ್ಟ್. 6 ದಿನ.
ಆಪ್ತ – ಏನಕ್ಕೆ
ಪೊಲೀಸ್ – ಮಹಜರು ಮಾಡಬೇಕು.
ಆಪ್ತ – ‘ಇಲ್ಲಿಗೆ’ ಹೊಡೆದಿರೋದಕ್ಕೆ ಸತ್ತಿರೋದು ಅಲ್ವಾ?
ಪೊಲೀಸ್ – ಹೌದೌದು. ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ. ರಾಡ್‌ನಲ್ಲಿ ಹೊಡೆದಿದ್ದಾರೆ. ಏನು ಹಿಂಗಾ? ಬೌನ್ಸರ್‌ಗಳು ಹೊಡೆಯುವ ಏಟನ್ನ ತಡೆಯೋಕೆ ಆಗುತ್ತಾ? ಆ ಚಿಕ್ಕ ಹುಡುಗನಿಗೆ ಕುಡಿದುಬಿಟ್ಟು ಹೊಡೆದಿದ್ದಾರೆ. ಸುಮ್ಮನೆ ವಾರ್ನ್ ಮಾಡಿ ಸ್ಟೇಷನ್‌ಗೆ ಕಂಪ್ಲೇಂಟ್ ಕೊಟ್ಟಿದ್ದರೆ ಮುಗಿದು ಹೋಗ್ತಿತ್ತು. ಬೇಲ್ ಸಿಗೋದು ತುಂಬಾ ಕಷ್ಟ. 1 ವರ್ಷ ಎಳೆದುಕೊಂಡು ಹೋಗುತ್ತದೆ.
ಆಪ್ತ – ಮಿನಿಮಂ ಅಂದ್ರೆ 3 ತಿಂಗಳು ಹೊರಗೆ ಬರಲ್ಲ.
ಪೊಲೀಸ್ – 3 ಅಲ್ಲ 6 ತಿಂಗಳು ಹೊರಗೆ ಬರಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಇವನು. ಸುಪ್ರೀಂ ಕೋರ್ಟ್‌ಗೆ ಹೋದರೂ ಬೇಲ್ ಸಿಗಲ್ಲ. ಹೈಕೋರ್ಟ್‌ನಲ್ಲೂ ಸಿಗಲ್ಲ.
ಆಪ್ತ – ಹೌದಾ?
ಪೊಲೀಸ್ – ಪೋಸ್ಟ್ ಮಾರ್ಟಂನಲ್ಲಿ ಎಷ್ಟು ಭೀಕರವಾಗಿದೆ ಗೊತ್ತಾ?
ಆಪ್ತ – Throat, Nose ಕಟ್ ಆಗಿದೆ.
ಪೊಲೀಸ್ – ಹೌದು
ಆಪ್ತ – ಅಷ್ಟೊಂದು ಸಿಟ್ಟು ಏನು ಅಂತ ಗೊತ್ತಾಗಲಿಲ್ಲ
ಪೊಲೀಸ್ – ಅವನು (ದರ್ಶನ್) ತುಂಬಾ ರೂಡ್. ಕುಡಿದುಬಿಟ್ಟರಂತೂ ಅವನನ್ನ ಹಿಡಿಯೋಕೆ ಆಗಲ್ಲ. ಅಷ್ಟೊಂದು ರೂಡ್ ಅವನು. ಆ ಹುಡುಗಿಗೂ ಅವನು ಹೊಡೆದಿದ್ದಾನೆ.
ಆಪ್ತ – ಯಾವ ಹುಡುಗಿ?
ಪೊಲೀಸ್ – ಪವಿತ್ರಾ ಗೌಡಗೆ. ಅವಳಿಗೆ ಹೊಡೆದು, ಅವಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಳು. ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದ್ದಾಳೆ. ಕಾಮಾಕ್ಷಿಪಾಳ್ಯಗೆ ಸರೆಂಡರ್ ಆಗಲು ನಾಲ್ವರು ಬಂದರು. ಅಲ್ಲಿ ಒಬ್ಬೊಬ್ಬರು ಒಂದೊಂದು ಸ್ಟೇಟ್‌ಮೆಂಟ್ ಕೊಟ್ಟರು.
ಆಪ್ತ – ಎಲ್ಲಿ? ಸ್ಟೇಷನ್‌ನಲ್ಲಿ?
ಪೊಲೀಸ್ – ಸ್ಟೇಷನ್‌ನಲ್ಲಿ. ಒಬ್ಬೊಬ್ಬರನ್ನ ಒಂದೊಂದು ರೂಮ್‌ನಲ್ಲಿ ಕೂರಿಸಿ ನಾವು ವಿಚಾರಣೆ ಮಾಡೋದು. ‘ಏನೋ.. ಅವನು ಹೀಗೆ ಹೇಳ್ತಾವ್ನೆ’ ಅಂತ ಕೇಳೋದು. ಸತ್ಯ ಹೊರಗೆ ಬಂದುಬಿಡುತ್ತೆ. ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದ ಹಾಗೆ ನಿಜ ಹೊರಗೆ ಬಂದುಬಿಡುತ್ತೆ. ಏನು ತಿಳಿದುಕೊಂಡು ಬಂದಿರ್ತಾರೋ.. ಎಲ್ಲಾ ಉಲ್ಟಾ ಆಗುತ್ತದೆ.!
ಆಪ್ತ – ಸಿನಿಮಾ ತರಹ ಅಲ್ಲ
ಪೊಲೀಸ್ – ಹಾ..
ಆಪ್ತ – ಅದ್ಹೆಂಗೆ ಆ ರೋಡ್‌ನಲ್ಲಿ ಎಸೆದರು ಗೊತ್ತಾಗಲಿಲ್ಲ.
ಪೊಲೀಸ್ – ಇನ್ನೇನು ಮಾಡ್ತೀರಾ? ಇನ್ನೆಷ್ಟು ದೂರ ತೆಗೆದುಕೊಂಡು ಹೋಗೋಕೆ ಆಗ್ತಿತ್ತು? ಏನೋ ಮಾಡೋಕೆ ಹೋಗಿ ಏನೇನೋ ಆಗೋಯ್ತು. ತುಂಬಾ ಬ್ರೂಟಲ್. 50 ಕೋಟಿ ರೂಪಾಯಿ ಬಜೆಟ್ ಸಿನಿಮಾ ‘ಡೆವಿಲ್’. ಇನ್ನೂ 6 ತಿಂಗಳು ಹೇಗೆ? ಎಂಥಾ ಲಾಯರ್‌ನ ಕರ್ಕೊಂಡು ಬಂದರೂ 6 ತಿಂಗಳು ಬೇಲ್ ಸಿಗಲ್ಲ. ಇವನಿಗೆ ಬೇಲ್ ಕೊಟ್ಟುಬಿಟ್ಟರೆ, ಬೇರೆಯವರೂ ಈ ತರಹ ಮಾಡಲ್ವಾ? ದುಡ್ಡು ಇದೆ ಅಂತ.
ಅಲ್ಲಿಗೆ ಫೋನ್ ಸಂಭಾಷಣೆ ಕೊನೆಯಾಗುತ್ತೆ. ಇದು ಆಡಿಯೋದಲ್ಲಿರುವ ಮಾತಿನ ಸಾರಾಂಶ. ಈ ಮಾತಿನ ಪ್ರಕಾರ ದರ್ಶನ್, ರೇಣುಕಾಸ್ವಾಮಿಯ ಮೇಲೆ ಕ್ರೌರ್ಯವನ್ನೇ ಮೆರೆದಿದ್ದಾನೆ. ಆದರೆ.. ದರ್ಶನ್ʻಗೆ ಇನ್ನೂ ಒಂದು ವರ್ಷ ಜಾಮೀನು ಸಿಕ್ಕಲ್ಲ ಅನ್ನೋದು ಸತ್ಯವಾಗುತ್ತಾ.. ಕೋರ್ಟು ಮತ್ತು ಕಾಲ ಉತ್ತರ ಹೇಳಬೇಕು.