ದರ್ಶನ್ ಮತ್ತು ರಮ್ಯಾ ಮುಖಾಮುಖಿಯಾದರೆ ಹೇಗಿರುತ್ತೆ.. ಇಬ್ಬರೂ ನಟಿಸಿರೋದು ಒಂದೇ ಸಿನಿಮಾದಲ್ಲಿ. ಆದರೆ ಈಗ ಇಬ್ಬರೂ ಮುಖಾಮುಖಿಯಾಗುತ್ತಿದ್ದಾರೆ. ಆದರೆ ಅವರೊಂದ್ ಕಡೆ.. ಇವರೊಂದ್ ಕಡೆ. ದರ್ಶನ್ ಥಿಯೇಟರಲ್ಲಿ ಅಬ್ಬರ ಇಟ್ರೆ, ರಮ್ಯಾ ಒಟಿಟಿಯಲ್ಲಿ ಮಳೆ ಸುರಿಸುತ್ತಿದ್ಧಾರೆ.
ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ನಾಳೆ ಒಟಿಟಿಗೆ ಬರಲಿದೆ. ಶೂಟಿಂಗ್ ಮುಗಿಸಿ ಒಂದು ವರ್ಷದ ನಂತರ ನವೆಂಬರ್ 24, 2023ರಂದೇ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ರಿಲೀಸ್ ಆಗಿತ್ತು. ಇದೀಗ ಚಿತ್ರ ಒಟಿಟಿಗೂ ಲಗ್ಗೆ ಇಡುತ್ತಿದೆ.
ರಮ್ಯಾ ಅವರೇ ಮೊದಲು ನಟಿಸಬೇಕಿದ್ದ ಸಿನಿಮಾದಲ್ಲಿ ಕಡೆಯ ಕ್ಷಣದಲ್ಲಿ ಸಿರಿ ರವಿ ಕುಮಾರ್ ನಟಿಸಿದ್ದರು. ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ಸಿನಿಮಾ ಕ್ಲಾಸ್ ವರ್ಗದ ಪ್ರೇಕ್ಷಕರಿಗೆ ಇಷ್ಟವೂ ಆಗಿತ್ತು. ಇದೀಗ ಚಿತ್ರ ಡಿಸೆಂಬರ್ 29ರಂದು ಸ್ವಾತಿ ಮುತ್ತಿನ ಮಳೆ ಹನಿಯೇ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ಥಿಯೇಟರುಗಳಲ್ಲಿ ಕಾಟೇರ ಮೋಡಿ ಮಾಡಲು ಬರಲಿದೆ.



