ಒಂದು ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನ ಚಿತ್ರದ ಕಥೆಯ ಬಗ್ಗೆ ಅಭಿಮಾನಿಗಳು ಒಂದು ಅಂದಾಜು ಮಾಡಿಕೊಂಡಿರ್ತಾರೆ. ಬಾಹುಬಲಿ 2 ಬಿಡುಗಡೆಗೆ ಮುನ್ನ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬುದು ರಾಷ್ಟ್ರೀಯ ಕುತೂಹಲದ ಪ್ರಶ್ನೆ ಆಗಿತ್ತು. ಕಾಂತಾರ ಚಿತ್ರದ ಪ್ರೀಕ್ವೆಲ್ ಎಂದಾಗ, ಪ್ರೇಕ್ಷಕರೇ ಹತ್ತಾರು ಕಥೆ ಹುಟ್ಟುಹಾಕಿದ್ದರು. ಆದರೆ, ಈದು ಹಾಗಲ್ಲ. ಇದು ಕೇವಲ ಅಭಿಮಾನಿಗಳು ತಮ್ಮ ಕುತೂಹಲಕ್ಕೆಂದು ಹೇಳಿರುವ ಕಥೆ. ಏಕೆಂದರೆ ಟ್ರೇಲರ್ ಬಿಡುಗಡೆ ಮಾಡಿದ್ದರೂ, ಮಿಲನ ಪ್ರಕಾಶ್ ದಿ ಡೆವಿಲ್ ಕಥೆ ಹೇಳಿಲ್ಲ. ಹಾಗಾದರೆ ಅಭಿಮಾನಿಗಳು ಸೃಷ್ಟಿಸಿರುವ ಕಥೆಗಳು ಏನೆನೆಲ್ಲ ಇರಬಹುದು..
ಡೆವಿಲ್ ಫ್ಯಾನ್ಸ್ ಸ್ಟೋರಿ ನಂ.1 :
ಸನ್ಮಾನ್ಯ ಮುಖ್ಯಮಂತ್ರಿ ಧನುಷ್ ರಾಜಶೇಖರ್ ಎಂಬ ಪೋಸ್ಟರ್ ವೈರಲ್ ಆಗಿತ್ತಲ್ಲ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ರಾಜಶೇಖರ್ ಸಿಎಂ ಆಗಿದ್ದಾರೆ. ಧನುಷ್, ದರ್ಶನ್ ಕ್ಯಾರೆಕ್ಟರ್ ಹೆಸರು. ಹೀಗಾಗಿ ಮಹೇಶ್ ಮಂಜ್ರೇಕರ್ ಅವರ ಮಗನಾಗಿ ದರ್ಶನ್ ನಟಿಸಿದ್ದಾರೆ. ಅವರು ಸಿಎಂ ಪಟ್ಟಕ್ಕೆ ಫೈಟ್ ಮಾಡೋದು ಚಿತ್ರದ ಕಥೆ ಎನ್ನುವುದು ಒಂದು ಕಥೆ.
ಡೆವಿಲ್ ಫ್ಯಾನ್ಸ್ ಸ್ಟೋರಿ ನಂ.2 :
ನಾನ್ ಕೂತಿದ್ ಚೇರ್ ಅಲ್ಲಿ ಬೇರೆ ಯಾರು ಕೂತ್ಕೋಬಾರ್ದು ಅನ್ನೋ ಡೈಲಾಗ್ ಇದೆ. ಅದೇ ದರ್ಶನ್ ಕುಳಿತಿದ್ದ ಕುರ್ಚಿಯಲ್ಲಿಯೇ ದರ್ಶನ್ ಆಪ್ತನಾಗಿದ್ದ ಅಚ್ಯುತ್ ಕುಮಾರ್ ಕೂರುವ ಸೀನ್ ಕೂಡಾ ಟ್ರೇಲರಿನಲ್ಲಿದೆ. ಆಪ್ತನಾಗಿದ್ದ ಅಚ್ಯುತ್, ದರ್ಶನ್ ಬೆನ್ನಿಗೆ ಚೂರಿ ಹಾಕುತ್ತಾರಾ.. ಇದು ಇನ್ನೊಂದು ಕಥೆ.
ಡೆವಿಲ್ ಫ್ಯಾನ್ಸ್ ಸ್ಟೋರಿ ನಂ.3 :
ದರ್ಶನ್ ಕೆಂಪು ಮತ್ತು ಹಸಿರು ಬಣ್ಣದ ಮಾತ್ರೆ ತೆಗೆದುಕೊಳ್ಳೋ ರೀತಿಯ ಸೀನ್ ಇದೆ. ಅಂದ್ರೆ ದರ್ಶನ್ ಡ್ರಗ್ ಅಡಿಕ್ಟ್ ಆಗಿರ್ತಾರಾ.. ಅಥವಾ ಎದುರಾಳಿಗಳು ಹೇಳುವಂತೆ ದರ್ಶನ್ ಪಾತ್ರದ ಕ್ಯಾರೆಕ್ಟರ್ ಅಸಾಸಿನ್ ಮಾಡಿರ್ತಾರಾ.. ಇದನ್ನು ದರ್ಶನ್ ಮೀರಿ ನಿಲ್ಲುತ್ತಾರಾ.. ಇದು 3ನೇ ಕಥೆ.
ಡೆವಿಲ್ ಫ್ಯಾನ್ಸ್ ಸ್ಟೋರಿ ನಂ.4
4ನೇ ಕಥೆ ಎಂದರೆ ಡೆವಿಲ್ ಬೇರೆ.. ಧನುಷ್ ಬೇರೆ. ಅಂದ್ರೆ ಅದು ದ್ವಿಪಾತ್ರವೂ ಇರಬಹುದು ಎಂಬ 4ನೇ ಸ್ಟೋರಿಯೂ ಇದೆ. ಣಕ್ಕೊಂದು ಬಣ್ಣ ಗಳಿಗೆ ಒಂದು ವೇಷ.. ಅಲ್ಲಾ ನಾನ್ ನಿನ್ನ ನಿಜ ರೂಪ ನೋಡೆ ಇಲ್ವಲೋ ಎಂದು ನಾಯಕಿ ಹೇಳೋದೇ ಅದಕ್ಕೆ. ಅದೇ ನಾಯಕಿಯನ್ನು ದರ್ಶನ್ ಕಿಡ್ನಾಪ್ ಮಾಡೋ ಸೀನ್ ಇದೆ. ಧನುಷ್ ಲವ್ ಮಾಡ್ತಾನೆ. ಡೆವಿಲ್ ಕಿಡ್ನಾಪ್ ಮಾಡ್ತಾನೆ.
ಡೆವಿಲ್ ಚಿತ್ರ ರಿಲೀಸ್ ಆಗೋಕೂ ಮೊದಲೇ ಗೆದ್ದಿದೆ ಎನ್ನುತ್ತಿರುವುದೇ ಈ ಕಾರಣಕ್ಕೆ. ಅಭಿಮಾನಿಗಳೇ ಕಥೆ ಸೃಷ್ಟಿಸಿ ಹೇಳುವಷ್ಟು ಕುತೂಹಲ ಹುಟ್ಟಿಸಿದೆ ಎಂದರೆ, ಡೆವಿಲ್ ವಿನ್ ಆಯ್ತು ಅಂತಲೇ ಅರ್ಥ. ಆದರೆ, ಬಿಡುಗಡೆಯಾದ ಮೇಲೆ ಅಭಿಮಾನಿಗಳ ನಿರೀಕ್ಷೆಯನ್ನು ಚಿತ್ರ ಮುಟ್ಟಿ ಬರಬೇಕು. ಪ್ರಕಾಶ್ ವೀರ್ ಅವರ ಮೇಲೆ ಆ ನಂಬಿಕೆಯಂತೂ ಇದೆ. ಟ್ರೇಲರ್ ರಿಲೀಸ್ ಆಗಿದ್ದರೂ, ಕಥೆ ಹೀಗೆ ಇರಬಹುದು ಎಂಬ ಕ್ಲೂ ಕೊಟ್ಟಿಲ್ಲ ಮಿಲನ ಪ್ರಕಾಶ್. ಹೀಗಾಗಿ ಅಭಿಮಾನಿಗಳೇ ಕಥೆಗಳನ್ನು ಕಲ್ಪನೆ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಎಲ್ಲ ಕಥೆಗಳೂ ಸಿನಿಮಾ ರಿಲೀಸ್ ಆಗಿ ಒಂದು ಶೋ ಕಂಪ್ಲೀಟ್ ಆಗುವವರೆಗೆ ಮಾತ್ರ ಆಕ್ಟಿವ್ ಇರುತ್ತವೆ.



