ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯೋದಿಲ್ಲ ಚಿನ್ನ.. ನಾನ್ ಬರ್ತಿದ್ದೀನಿ..
ಬ್ರದರ್ ಫ್ರಾಮ್ ಅನದರ್ ಮದರ್. ಆದರೆ, ನಾಟ್ ಸೇಮ್ ಫಾದರ್..
ಎಲ್ಲಿ ಹೋದ್ರೂ ಬರ್ತಿರಲ್ಲೋ? ಏನ್ರೋ ನಿಮ್ ಪ್ರಾಬ್ಲಂ.. ಫ್ಯಾನ್ಸ್‌ಗೆ ಖುಷಿ ಕೊಡುತ್ತಿರುವ ಡೈಲಾಗ್ಸ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಟ್ರೇಲರ್ ಹೊರಬಿದ್ದಿದೆ.
ಪ್ರಕಾಶ್ ವೀರ್ ನಿರ್ದೇಶನದ ಸಿನಿಮಾ ಟ್ರೇಲರ್ ನೋಡ್ತಾ ಇದ್ದರೆ, 100% ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನಿಸುತ್ತಿದೆ. ದರ್ಶನ್ ಪಾತ್ರ ಆಕ್ಚುವಲಿ ಏನು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಡೋದಿಲ್ಲ. ಅದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ. ದರ್ಶನ್ ಅವರ ಧ್ವನಿಯಲ್ಲಿ ಮಾಡ್ಯುಲೇಷನ್ ಇದೆ. ಕರಕಲು ಧ್ವನಿಯಲ್ಲಿ ಹೇಳುವ ಡೈಲಾಗ್ ಬೇರೆಯೇ ಫೀಲ್ ಕೊಟ್ಟಿದೆ. ಜೊತೆಯಲ್ಲೇ ಎಲ್ಲ ಥ್ರಿಲ್ಲರ್ ಅಂಶಗಳಿಗೂ ಒಂದು ಫ್ಯಾಮಿಲಿ ಸೆಂಟಿಮೆಂಟ್ ಹಿನ್ನೆಲೆ ಇದ್ದೇ ಇವೆ ಅನ್ನಿಸ್ತವೆ. ಸಿಂಪಲ್ ಆಗಿ ಹೇಳ್ಬೇಕಂದ್ರೆ.. ಪ್ರಕಾಶ್ ಅಭಿಮಾನಿಗಳಿಗೆ ಹಬ್ಬವನ್ನೇ ತೋರಿಸಿದ್ದಾರೆ.
ಟ್ರೇಲರ್ ಶುರು ಆಗೋದೇ ʻಅವಲಕ್ಕಿ ಪವಲಕ್ಕಿ ಕಾಂಚಣ ಮಿಣ ಮಿಣ ಕೊಟಾರ್..ʼ ಅನ್ನೋ ಡೈಲಾಗ್ ನಿಂದ.
ದರ್ಶನ್ ಪಾತ್ರದ ಹೆಸರು ಧನುಷ್. ಆದರೆ.. ವೊರಿಜಿನಲ್ ಕ್ಯಾರೆಕ್ಟರ್ ಏನು ಅನ್ನೋದು ನಾಯಕಿಗೇ ಗೊತ್ತಿಲ್ಲ. ಟ್ರೇಲರಿನಲ್ಲಿ ಅದೊಂದು ಡೈಲಾಗ್ ಮೂಲಕ ನಿಗೂಢತೆಯ ಕಥೆ ಹೇಳ್ತಿದ್ದಾರೆ ಪ್ರಕಾಶ್. ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ ಮತ್ತು ಲುಕ್‌ನಲ್ಲಿ ಹೀರೋನೇ.. ಕಿಕ್‌ನಲ್ಲಿದ್ದರೆ ಫುಲ್ ಆನ್ ಡೆವಿಲ್.. ಎಂಬ ಡೈಲಾಗ್ಸ್ ಕಥೆಯ ಟ್ವಿಸ್ಟ್ ಸುಳಿವು ಕೊಡ್ತಿವೆ.
ದರ್ಶನ್ ಅವರ ಹೇರ್ ಸ್ಟೈಲ್, ಕಾಸ್ಟ್ಯೂಮ್ಸ್ ಹಾಗೂ ಔಟ್‌ಫಿಟ್ ಎಲ್ಲವೂ ಕಂಪ್ಲೀಟ್ ಹೊಸದು.
ಪೊಲಿಟಿಕಲ್ ಬ್ಯಾಕ್‌ಡ್ರಾಪ್‌ನಲ್ಲಿ ‘ದಿ ಡೆವಿಲ್’ ಕಥೆ ಹೆಣೆದಿದ್ದಾರೆ ಎಂದು ಅನಿಸಿದ್ರೂ.. ಪ್ರಕಾಶ್ ವೀರ್ ಬೇರೆಯದೇ ಸುಳಿವು ಕೊಡ್ತಾರೆ. ಆದರೆ ಸುಳಿವು ಕೊಟ್ಟಂತೆ ಮಾಡಿ ಜಸ್ಟ್ ಕ್ಯೂರಿಯಾಸಿಟಿ ಸೃಷ್ಟಿಸ್ತಾರೆ.
ಎಕ್ಸ್‌ಕ್ಯೂಸ್ ಮಿ ಪಿಸಿ.. ಚೂರು ಎಸಿ ಹಾಕಮ್ಮ.. ಲಾಟ್ ಆಫ್ ಸೆಕೆ.. ಎಂದು ಬರೋ ಗಿಲ್ಲಿ ನಟನ ಕಾಮಿಡಿ ಡೈಲಾಗ್, ಚಿತ್ರದಲ್ಲಿ ಎಲ್ಲ ಮನರಂಜನಾ ಎಲಿಮೆಂಟ್ಸ್ ಕೂಡಾ ಇವೆ ಅನ್ನೋದಕ್ಕೆ ಎವಿಡೆನ್ಸ್.
ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ವಿನಯ್ ಗೌಡ, ಚಂದು ಗೌಡ, ಗಿಲ್ಲಿ ನಟ, ಗೋವಿಂದೇ ಗೌಡ ನಟಿಸಿರೋ ಚಿತ್ರದ ಆನ್ ಲೈನ್ ಬುಕ್ಕಿಂಗ್ ಇವತ್ತಿಂದಲೇ ಶುರುವಾಗಿದೆ.
ಟ್ರೇಲರ್ ನೋಡಿದವರಿಗೆ ದರ್ಶನ್ ಈ ಚಿತ್ರದಲ್ಲಿ ಹೀರೋನಾ.. ವಿಲನ್ನಾ.. ಎಂಬ ಗೊಂದಲ ಕಾಣಿಸುತ್ತೆ. ಟ್ರೇಲರ್ ಗೆದ್ದಿರೋದೇ ಅಲ್ಲಿ.
ಇದರ ಮಧ್ಯೆ ದರ್ಶನ್ ಅವರ ಗ್ಯಾಂಗಿನಲ್ಲಿ ಸಿಕ್ಕ 82 ಲಕ್ಷ ರೂಪಾಯಿ ಬೆನ್ನು ಹತ್ತಿರುವ ಪೊಲೀಸಿರಗೆ ದರ್ಶನ್ ಸೂಕ್ತ ಉತ್ತರ ಕೊಟ್ಟಿಲ್ಲ. ದರ್ಶನ್, ವಿಜಯಲಕ್ಷ್ಮಿ, ಪ್ರದೋಷ್, ನಿಖಿಲ್ ಹಾಗೂ ಕೇಶವಮೂರ್ತಿ ಮನೆಯಲ್ಲಿ ಒಟ್ಟಾರೆ 82 ಲಕ್ಷ ರೂಪಾಯಿ ಹಣ ಸಿಕ್ಕಿತ್ತು.
ಯಾವ ಕೃಷಿ ಎಂಬ ಬಗ್ಗೆ ಕೃಷಿಯಿಂದ ಬಂದ ಲಾಭ ಮತ್ತು ಪ್ರಾಣಿ ಮಾರಾಟದಿಂದ ಬಂದ ಹಣ ಎಂದು ಆದಾಯ ತೆರಿಗೆ ಇಲಾಖೆ ವಿಚಾರಣೆಯಲ್ಲಿ ಹೇಳಿದ್ದಾರೆ. ಮೂರು ವರ್ಷಗಳಿಂದ ಕೃಷಿ ಮಾಡುತ್ತಿದ್ದು, ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳು ನೀಡಿದ ಹಣವನ್ನೂ ಮನೆಯಲ್ಲಿಟ್ಟಿದ್ದೆ ಎಂದು ಹೇಳಿದ್ದಾರೆ, ಆದರೆ ಇದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ. ಈ ಹಣಕ್ಕೆ ನನ್ನ ಬಳಿ ದಾಖಲೆಗಳು ಇಲ್ಲ. ಈ ಬಗ್ಗೆ ಐಟಿ ರಿಟರ್ನ್ಸ್ ವೇಳೆ ಮಾಹಿತಿ ನೀಡುತ್ತೇನೆ ಎಂದಿರುವ ದರ್ಶನ್, ಮೋಹನ್ ರಾಜ್‌ಗೆ ಬಿಟ್ಟರೆ ಯಾರಿಗೂ ನಗದು ರೂಪದಲ್ಲಿ ಸಾಲ ಕೊಟ್ಟಿಲ್ಲ. ಆರು ವರ್ಷದಿಂದ ನಾನು ಸಾಲ ಕೊಟ್ಟಿಲ್ಲ ಪಡೆದೂ ಇಲ್ಲ. ಉಳಿದ ಹಣದ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದಿದ್ದಾರೆ.



