ಇದು ದರ್ಶನ್ ಅಭಿಮಾನಿಗಳು ಕೇಳುತ್ತಿರುವ ಅಥವಾ ಕೇಳಬೇಕಾಗಿರುವ ಪ್ರಶ್ನೆ. ಕೊಲೆ ಕೇಸಿನಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ಧಾರೆ. ಈ ಬಾರಿ ದರ್ಶನ್ ಅವರ ಬೇಲ್ ಅಪ್ಲಿಕೇಷನ್ ಸುಪ್ರೀಂ ಕೋರ್ಟಿನಲ್ಲಿ ಕ್ಯಾನ್ಸಲ್ ಆಗಿರೋ ಕಾರಣ.. ದರ್ಶನ್ ಅವರಿಗೆ ನಿಜವಾದ ನಿಜವಾದ ಜೈಲಿನ ಅನುಭವ ಆಗ್ತಾ ಇದೆ. ಎಲ್ಲ ಓಕೆ.. ಅಂತಿರೋವಾಗ್ಲೇ..ಪರಪ್ಪನ ಅಗ್ರಹಾರ ಜೈಲು. ಮತ್ತೊಮ್ಮೆ ಸುದ್ದಿಯಾಗಿದೆ.
ಕಳೆದ ವರ್ಷ ಕೊಲೆ ಆರೋಪಿ ನಟ ದರ್ಶನ್ʻಗೆ ರಾಜಾತಿಥ್ಯ ಕೊಟ್ಟು ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರಿಗೆ ಸರಿಯಾಗಿ ಹಾಸಿಗೆ, ದಿಂಬನ್ನೂ ಕೊಡ್ತಿಲ್ಲ ಅನ್ನೋ ಕಾರಣಕ್ಕೆ ಪದೇ ಪದೇ ಸುದ್ದಿಯಾಗ್ತಾನೇ ಇದೆ. ದರ್ಶನ್ ಅವರ ಬಗ್ಗೆ ಇಷ್ಟೊಂದು ಸೀರಿಯಸ್ ಆಗಿರುವ ಅದೇ ಜೈಲಿನಲ್ಲಿ ರೌಡಿಯೊಬ್ಬ ಭರ್ಜರಿಯಾಗಿ ಬರ್ತ್ ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ. ಈ ದೃಶ್ಯಗಳನ್ನು ನೋಡಿದ ಜನ.. ಪರಪ್ಪನ ಅಗ್ರಹಾರ ಜೈಲನ್ನು ಸೆಂಟ್ರಲ್ ಜೈಲ್ ಎಂದು ಹೆಸರಿಡುವ ಬದಲಾಗಿ.. ಫೈವ್ ಸ್ಟಾರ್ ಹೋಟೆಲ್ ಎಂದೇಕೆ ಇಡಬಾರದು ಎಂಬ ಪ್ರಶ್ನೆ ಹಾಕಿದ್ದಾರೆ.
ದರ್ಶನ್ಗೆ ರಾಜಾತಿಥ್ಯ ಪ್ರಕರಣ ಬೆನ್ನಲ್ಲೇ ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕವೂ ಪರಪ್ಪನ ಅಗ್ರಹಾರ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ. ದರ್ಶನ್ ವಿಷಯದಲ್ಲಿ ಮಾತ್ರ ಸೀರಿಯಸ್ ಆಗಿರುವ ಜೈಲು ಸಿಬ್ಬಂದಿ, ಮಿಕ್ಕವರ ವಿಷಯದಲ್ಲಿ ಫ್ರೀ ಆಗಿದ್ಧಾರೆ.
ಪರಪ್ಪನ ಅಗ್ರಹಾರದ ಇಡೀ ಸಿಸ್ಟಂನ್ನು ರೌಡಿಗಳು, ಕಳ್ಳ ಖದೀಮರೇ ನಿಭಾಯಿಸುವಂತೆ ಕಾಣುತ್ತಿದೆ. ಅವರ ಜೈಲರ್.. ಅವರೇ ಆಫೀಸರ್.. ಎಲ್ಲವೂ ರೌಡಿಗಳೇ ಆದಂತೆ ಕಾಣುತ್ತಿದ. ಪೊಲೀಸರು ಕೇವಲ ಪ್ರೇಕ್ಷಕರು. ಹಾಗೆ ಅನಿಸುತ್ತಿರುವುದಕ್ಕೆ ಕಾರಣ ಇಷ್ಟೇ.
ರೌಡಿ ಗುಬ್ಬಚ್ಚಿ ಸೀನ ಕೇಕ್ʻನ್ನು ಹೊರಗಡೆಯಿಂದ ತರಿಸಿಕೊಂಡಿದ್ದಾನೆ. ಸೇಬು ಹಣ್ಣುಗಳ ಹಾರ ಹಾಕಿಸಿಕೊಂಡಿದ್ದಾನೆ. ಹಲವು ಜನ ಹೊರಗಿನಿಂದ ಬಂದವರೂ ʻಹುಟ್ಟುಹಬ್ಬದ ಆಚರಣೆʼಗಾಗಿ ಜೈಲಿನೊಳಗೆ ಬಂದಿದ್ದಾರೆ ಎಂಬ ಮಾಹಿತಿಯೂ ಇದೆ.
ದರ್ಶನ್ ವಿಷಯದಲ್ಲಿ ಸುಪ್ರೀಂಕೋರ್ಟ್ ಕಂಡು ಕೇಳರಿಯದ ರೀತಿಯಲ್ಲಿ ವಾರ್ನಿಂಗ್ ಮಾಡಿದ್ದಾಗ ಇನ್ನು ಜೈಲು ಸಿಬ್ಬಂದಿ ಹೆದರಬಹುದು ಎಂದು ಭಾವಿಸಲಾಗಿತ್ತು. ಹಾಗೇನೂ ಆಗಿಲ್ಲ. ಸುಪ್ರೀಂಕೋರ್ಟ್ ಸೂಚನೆ, ಎಚ್ಚರಿಕೆಯನ್ನೂ ಸೊಂಟದ ಕೆಳಗಿನ ಕೊಬ್ಬಿನ ಅಡಿಗೆ ಸೇರಿಸಿಕೊಂಡಿದ್ಧಾರ.
ದರ್ಶನ್ʻಗೆ ಕೂರಲು ಕುರ್ಚಿ, ಟೇಬಲ್, ಸಿಗರೇಟು ಸಪ್ಲೈ ಮಾಡಿದ್ದ ಜೈಲು ಸಿಬ್ಬಂದಿ.. ಗುಬ್ಬಚ್ಚಿ ಸೀನನಿಗೆ ಅದನ್ನೂ ಮೀರಿದ ರಾಯಲ್ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ. ದರ್ಶನ್ʻಗೆ ಮಾತ್ರ ಅವರು ಕೇಳಿರುವ ಕನಿಷ್ಠ ಸೌಲಭ್ಯವನ್ನು ಕೊಡುತ್ತಿಲ್ಲ.
ಇನ್ನು ಜೈಲಿನ ಅಧೀಕ್ಷಕರು ಸಿಬ್ಬಂದಿಯನ್ನು ಅತ್ಯಂತ ಸೀರಿಯಸ್ ಆಗಿ ಪ್ರಶ್ನೆ ಮಾಡುವುದು, ಸಿಬ್ಬಂದಿ ಸೀರಿಯಸ್ ಆಗಿಯೇ ಉತ್ತರ ಕೊಡುವುದು.. ಒಂದು ಸೀರಿಯಸ್ ರಿಪೋರ್ಟ್ ಆಗುವುದು.. ಕೆಲವರನ್ನು ಸಸ್ಪೆಂಡ್ ಮಾಡುವುದು.. ಆಮೇಲೆ ಕೋರ್ಟ್ ಬೈಯ್ಯುವುದು.. ಎಲ್ಲವೂ ಸಂಪ್ರದಾಯದಂತೆ ನಡೆಯುತ್ತದೆ.
ಮತ್ತೆ ಮತ್ತೆ ಮತ್ತೆ.. ಜೈಲು ಜೈಲ್ ಅಲ್ಲ. ಅರಮನೆ ಎಂಬ ಫೀಲ್ ದುಡ್ಡು, ಪ್ರಭಾವ ಇದ್ದ ಖೈದಿಗಳಿಗೆ ಬರುತ್ತದೆ. ಇಷ್ಟೆಲ್ಲ ಆದ ನಂತರ ಏನಾಗಬಹುದು. ಖೈದಿಗಳು ಕೊಡುವ ಅಥವಾ ಕೊಡಬೇಕಾದ ಹಣದ ಮೊತ್ತ ಜಾಸ್ತಿಯಾಗಬಹುದು. ಅಷ್ಟೇ. ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಕ್ರಿಮಿನಲ್ಲುಗಳಿಗೆ, ಕ್ರಿಮಿನಲ್ ಆರೋಪ ಹೊತ್ತವರಿಗೆ ಜೈಲಾಗಿ ಉಳಿದಿಲ್ಲ. ದುಡ್ಡಿದ್ದವರಿಗೆ ಅದು ಫೈವ್ ಸ್ಟಾರ್ ಹೋಟೆಲ್ಲು, ರೆಸಾರ್ಟು ಎಲ್ಲವೂ ಆಗಿದೆ.



