ಪವಿತ್ರಾ ಗೌಡ ಅಪ್ಪಟ ಕನ್ನಡದ ಹುಡುಗಿ. ಕನ್ನಡ ಬಿಟ್ಟು ಬೇರೆ ಭಾಷೆ ಬರ್ತಾ ಇರಲಿಲ್ಲ. ಈಗ ಆಕೆಗೆ ಹಲವು ಭಾಷೆಗಳು ಬರುತ್ತವೆ. ಆಕೆ ಮದುವೆಯಾದ ಸಂಜಯ್ ಸಿಂಗ್ ಹಿಂದಿಯ ಹುಡುಗ. ಸಾಫ್ಟ್‌ವೇರ್ ಇಂಜಿನಿಯರು. ಹೀಗಾಗಿ ಹಿಂದಿಯ ಜೊತೆ ಇಂಗ್ಲೀಷೂ ಇತ್ತು. ಐಟಿ ಇಂಡಸ್ಟ್ರಿಯಲ್ಲಿದ್ದ ಸಂಜಯ್ ಸಿಂಗ್ ಪವಿತ್ರಾ ಗೌಡ ಅವರನ್ನು ಲವ್ ಮಾಡಿದ್ದು ದಿನಸಿ ಅಂಗಡಿಯಲ್ಲಿ.
ಪವಿತ್ರ ಗೌಡ ಮನೆಯವರು ಒಂದು ಕಿರಾಣಿ ಅಂಗಡಿಯನ್ನಿಟ್ಟಿದ್ದರಂತೆ. ಆ ಅಂಗಡಿಗೆ ಆಗಾಗ್ಗೆ ಹೋಗುತ್ತಿದ್ದ ಸಂಜಯ್ ಸಿಂಗ್ ಅವರಿಗೆ ಪವಿತ್ರ ಗೌಡ ಅವರ ಜೊತೆ ಪ್ರೀತಿಯಾಯಯ್ತು. ಮದುವೆಯೂ ಆಯ್ತು.
ಆಗಿನ್ನೂ ಪವಿತ್ರಾಗೆ 18 ವರ್ಷ. ಇನ್ನೂ ಕಾಲೇಜಿಗೆ ಹೋಗ್ತಾ ಇದ್ಲು. ಲವ್ ವಿಷಯ ಗೊತ್ತಾದ ಮೇಲೆ, ಎರಡೂ ಮನೆಯ ಹಿರಿಯರು ಸೇರಿ, ನಮ್ಮಿಬ್ಬರ ಮದುವೆ ಮಾಡಿದರು.. 2007ರಲ್ಲಿ ಮದುವೆ ಆಯ್ತು. ಮದುವೆ ಆಗಿ 3 ವರ್ಷಕ್ಕೆ ಮಗಳು ಜನಿಸಿದಳು. ನಮ್ಮಿಬ್ಬರ ಮಧ್ಯೆ ಭಾಷೆಯ ಸಮಸ್ಯೆಯಿಂದಾಗಿ ಎಷ್ಟೋ ಬಾರಿ ಮಾತುಕತೆಯೇ ನಡೆಯುತ್ತಿರಲಿಲ್ಲ. ಸಂಜ್ಞೆಗಳ ಮೂಲಕ ಮಾತನಾಡುತ್ತಿದ್ದೆವು ಎನ್ನುವ ಸಂಜಯ್ ಸಿಂಗ್ ಈಗಲೂ ಕನ್ನಡ ಸುಲಲಿತವಾಗಿ ಬರೋದಿಲ್ಲ. ಆದರೆ, ಅವರಿಗೆ ಭಾಷೆ ಅರ್ಥವಾಗುತ್ತೆ. ಬೆಂಗಳೂರು ಬಿಟ್ಟು ಹಲವು ವರ್ಷಗಳಾಗಿವೆ. ಸ್ವಲ್ಪ ಸ್ವಲ್ಪ ಮಾತನಾಡುವುದಕ್ಕೂ ಬರುತ್ತೆ.
ಪವಿತ್ರ ಜೊತೆ ಮಾತನಾಡಬೇಕು ಎಂಬ ಕಾರಣಕ್ಕೆ ಕನ್ನಡ ಕಲಿತೆ. ರಾಜ್ ಕುಮಾರ್ ಸಿನಿಮಾ ನೋಡಿ ನೋಡಿ ಒಂದಿಷ್ಟು ಕನ್ನಡ ಕಲಿತೆ. ಈಗಲೂ ಸುದೀರ್ಘವಾಗಿ ಮಾತನಾಡೋಕೆ ಬರಲ್ಲ, ಆದರೆ ಕನ್ನಡ ಒಂದಿಷ್ಟು ಮಾತನಾಡುತ್ತೇನೆ ಎನ್ನುತ್ತಾರೆ ಸಂಜಯ್ ಸಿಂಗ್. ಅವರೀಗ ಉತ್ತರ ಪ್ರದೇಶದಲ್ಲಿ ಸ್ಕೂಲ್ ಟೀಚರ್.
ʻʻಇಂದಿನ ಪರಿಸ್ಥಿತಿ ನೋಡಿದರೆ ನನ್ನ ಮಗಳ ಭವಿಷ್ಯದ ಬಗ್ಗೆ ಚಿಂತೆ ಇದೆ. ನಾನು ಟೀಚರ್ ಆಗಿದ್ದೇನೆ, ಮಗಳಿಗೆ ಪಾಠ ಮಾಡೋಕೆ ಆಗ್ತಿಲ್ಲ ಅನ್ನೋ ಬೇಸರ ಇದೆ. ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ, ಪೊಲೀಸ್ ಕ್ರಮ ಎದುರಿಸಬೇಕಾಗುತ್ತೆʼʼ ಎಂಬ ಎಚ್ಚರಿಕೆಯನ್ನೂ ಕೊಡ್ತಾರೆ ಸಂಜಯ್ ಸಿಂಗ್. ಪವಿತ್ರ ಗೌಡ ಅವರ ಕೊಲೆ ಕೇಸಿನ ಬಗ್ಗೆ ಮಾತನಾಡುವ ಸಂಜಯ್ ಸಿಂಗ್ ʻಪವಿತ್ರಾಗೆ ಸಿಟ್ಟು ಜಾಸ್ತಿ. ಆದರೆ ಅವಳು ಕೊಲೆ ಮಾಡುವ ಮನಸ್ಥಿತಿ ಹೊಂದಿಲ್ಲ. ಇಲಿ ಕಂಡರೂ ಹೆದರುತ್ತಾಳೆ.ಪವಿತ್ರಾ ಕೊಲೆ ಮಾಡುತ್ತಾಳೆ ಎಂದರೆ ನಾನು ನಂಬೋದಿಲ್ಲ. ಕೊಲೆಯಾದ ಸ್ಥಳದಲ್ಲಿ ಪವಿತ್ರಾ ಇರಬಹುದು. ಈ ಬಗ್ಗೆ ದರ್ಶನ್ ಸ್ವಲ್ಪ ಗಮನಕೊಡಬೇಕಿತ್ತು. ಪವಿತ್ರಾ ತಪ್ಪು ಮಾಡಿರಲಿಕ್ಕಿಲ್ಲ ಎನ್ನುವುದು ಅವರ ವಿಶ್ವಾಸ.
2012ರಲ್ಲಿ ಬೆಂಗಳೂರು ಬಿಟ್ಟಿರುವ ಸಂಜಯ್ ಸಿಂಗ್, ಪವಿತ್ರ ಅವರ ಜೊತೆ ಮಾತನಾಡಿ 12 ವರ್ಷಗಳಾಗಿವೆಯಂತೆ. ಪವಿತ್ರಾ ಗೌಡ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ವರ್ಷಕ್ಕೆ ಒಮ್ಮೆ ಪವಿತ್ರ ಅವರ ತಂದೆ ತಾಯಿ ಬಳಿ ಫೋನ್ ಮಾಡಿ ಮಾತನಾಡ್ತೇನೆ ಎನ್ನುವ ಸಂಜಯ್ ಸಿಂಗ್ ಅವರಿಗೆ ಪವಿತ್ರ ಮತ್ತು ಸಂಜಯ್ ಅವರಿಗೆ ಮದುವೆ ಆಗಿದ್ಯಾ ಇಲ್ವಾ ಅನ್ನೋದೂ ಗೊತ್ತಿಲ್ಲ. ಮಗಳ ಜೊತೆ ಒಂದೆರಡು ಬಾರಿ ಮಾತನಾಡಿದ್ದೇನೆ, ಅಷ್ಟೆ. ಉಳಿದಂತೆ ನನಗೂ ಪವಿತ್ರ ಅವರಿಗೂ ಯಾವ ಕಾಂಟ್ಯಾಕ್ಟ್ ಕೂಡಾ ಇಲ್ಲ ಎಂದಿದ್ದಾರೆ.
ಸಂಜಯ್ ಸಿಂಗ್ ಅವರ ಪ್ರಕಾರ ಕೊಲೆ ಕೇಸಿನಲ್ಲಿ ಪವಿತ್ರ ಗೌಡ ನಿರ್ದೋಷಿ. ಅದು ಅವರ ನಂಬಿಕೆ. ಪವಿತ್ರಾಗೆ ಸಣ್ಣ ಸಣ್ಣದಕ್ಕೂ ಸಿಟ್ಟು ಬರುತ್ತೆ. ಹೀಗಾಗಿ ಇಂತಹ ಪ್ರಕರಣ ನಡೆಯುತ್ತವೆ. ಆದರೆ, ಆಕೆ ಕೊಲೆಪಾತಕಿ ಅಲ್ಲ ಎನ್ನುತ್ತಾರೆ ಸಂಜಯ್ ಸಿಂಗ್.



